

ಪಡುಕೋಣೆ; ದಿನಾಂಕ 19.1.2025, ಪ್ರಾರಂಭ ಗೊಂಡ 2025ರ ಜುಬಿಲಿ ವರ್ಷದ ಪ್ರತಿ ಕ್ರೈಸ್ತ ಕುಟುಂಬದಲ್ಲಿ ಪಯಣಿಸಿ ಆರಾಧಿಸಿ ಪವಿತ್ರ ಶಿಲುಬೆಯ ಗುರುತಿನ ಮೂಲಕ ನಮ್ಮ ವೈರಿಗಳಿಂದ ನಮ್ಮನ್ನು ರಕ್ಷಿಸಿರಿ ನಮ್ಮ ಸರ್ವೇಶ್ವರಾ ಪಿತನ ಸುತನ ಮತ್ತು ಪವಿತ್ರಾತ್ಮನ ನಾಮದಲ್ಲಿ ಆಮೆನ್’ ಎಂಬ ಪ್ರಾರ್ಥನೆ ಮಾಡಿ ಎಂಬ ಶಿಲುಬೆಯ ಗುರುತಿನ ದಿವ್ಯ ಯೇಸುವನ್ನು ಕಪಾಲ ಬೆಟ್ಟಕ್ಕೆ ಶಿಲುಬೆಯ ಮುಖಾಂತರ ಒಯ್ದಂತ ಆ ಮಾರ್ಗದ ನೆನಪು. ರಕ್ತದ ಗುರುತು, ಪಟ್ಟ ಕಷ್ಟಗಳನ್ನು ನೆನಪಿಸುತ್ತಾ ಪಡುಕೋಣೆ ಚರ್ಚಿನ ದೇವ ಪ್ರಜೆಗಳು ದಿನಾಂಕ 19/1/2025ರಂದು ಸಂತ ಅಂತೋನಿ ವಾರ್ಡಿನಿಂದ ಪ್ರಾರಂಭಿಸಿದ 2025 ರ ಏಸುಕ್ರಿಸ್ತರ ಶಿಲುಬೆಯ ಸಂಭ್ರಮ ಮಹೋತ್ಸವನ್ನು ಚರ್ಚಿನ 9 ವಾರ್ಡುಗಳಲ್ಲಿ, ಪ್ರತಿವಾರ್ಡಿನ ಮನೆಗಳಲ್ಲಿ ಆ ವಾರ್ಡಿನ ಎಲ್ಲಾ ಜನರು ಒಗ್ಗಟ್ಟಿನಿಂದ ಒಗೂಡಿ ಶಿಲುಬೆಯನ್ನು ಆರಾಧಿಸಿ, ಪ್ರಾರ್ಥಸಿ, ದಿನಾಂಕ 14/12/25 ರಂದು ಒಟ್ಟು 11 ತಿಂಗಳು ಪ್ರಾರ್ಥನೆ ಮಾಡಿ, ಶಿಲುಬೆಯನ್ನು ಚರ್ಚಿಗೆ ಮರಳಿ ತಂದು 1 ಗಂಟೆಯ ತನಕ ಚರ್ಚಿನ ಧರ್ಮ ಗುರುಗಳಾದ ವಂ। ಫಾ।ಪ್ರಾನ್ಸಿಸ್ ಕರ್ನೆಲಿಯೊರವರು ಸುಮಾರು 200 ಭಕ್ತರ ಜೊತೆಗೂಡಿ ವೀಶೆಷ ಆರಾಧನೆ ಪ್ರಾರ್ಥನೆಯನ್ನು ನಡೆಸಿ, ಚರ್ಚಿನ ದೇವ ಪ್ರಜೆಗಳ ಮನಸ್ಸಿನಲ್ಲಿ ಈ ಜುಬಿಲಿ 2025 ವರ್ಷದ ಪವಿತ್ರ ಶಿಲುಬೆಯ ಪಯಣ ಎಲ್ಲರ ಮನದಲ್ಲಿ ಅಳಸಿ ಹೋಗದಂತೆ ಸಂಪನ್ನ ಗೊಳಿಸಿದರು.

















