

ಪಡುಕೋಣೆ; 15.9.2025; ಸಂತ ಅಂತೋನಿ ಚರ್ಚ್ ಪಡುಕೋಣೆಯಲ್ಲಿ ಸೀನಿಯರ್ ಸಿಟಿಜನ್ ಸಂಘದ ಸದಸ್ಯರಿಂದ ವಾರ್ಷಿಕ ದಿನಾಚರಣೆಯನ್ನು ಆಚರಿಸಲಾಯಿತು. ಸಭೆಯಲ್ಲಿ ಹಿರಿಯ ಸದಸ್ಯರು ತಾವು ಈ ಹಿಂದೆ ಮಾಡಿದ ಮೊಂತಿ ಹಬ್ಬದ ಮತ್ತು ಈಗ ಆಚರಿಸುವ ಮೊಂತಿ ಹಬ್ಬದ ಆಚರಣೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪಡುಕೋಣೆ ಇಗರ್ಜಿಯ ಧರ್ಮಗುರುಗಳಾದ ಹಿರಿಯ ಖ್ಯಾತ ಸಂಗೀತ ಸಂಯೋಜಕರಾದ ವಂದನೀಯ ಫಾ! ಪ್ರಾನ್ಸಿಸ್ ಕರ್ನೆಲಿಯೊರವರು ಸಂಗೀತ ಕ್ಶೇತ್ರದಲ್ಲಿ, 50 ವರ್ಷದ ಹಿಂದೆ ಸೆಮಿನರಿಯಲ್ಲಿದ್ದಾಗ ರಚಿಸಿದ “ಮರಿಯೇ ಕ್ರಿಸ್ತಾ ಮಾಯೇ, ತುಂ ಆಮ್ಚಿ ಮಾಯ್ ಸರ್ಗಿಂಚಿಂ” ಅಂದಿನಿಂದ ಇಂದಿನವರೆಗೆ ಲೋಕಪ್ರಿಯವಾಗಿದ್ದು, ಇದು ಸೇರಿ ಅನೇಕ ಲೋಕ ಪ್ರಿಯ ಗೀತೆಗಳನ್ನು ರಚಿಸಿದ ಅವರನ್ನು ಹಾಗೇ ಸಂಗೀತದಲ್ಲಿ ಸಾಧನೆ ಮಾಡಿದಕ್ಕಾಗಿ, ಹಿರಿಯ ಕ್ಲಬಿನ ಸದಸ್ಯರು ಅವರಿಗೆ ಗೌರವ ಸಲ್ಲಿಸಿದರು.
ಸಂಘದ ಹಿರಿಯ ಸದಸ್ಯರು ಮನೋರಂಜನೆಯ ಚಟುವಟಿಕೆಗಳು ಮಿಮಿಕ್ರಿ, ಹಾಡುಗಳು, ಒಗಟುಗಳು, ಹಾಗೂ ಆಟಗಳನ್ನು ಆಡಿಸಿ, ವಿಜೇತರಿಗೆ ಕಾರ್ಯಕ್ರಮದ ಅಧ್ಯಕ್ಷರಾದ ವಂ।ಫ। ಪ್ರಾನ್ಸಿಸ್ ಕರ್ನೆಲಿಯೊರವರು ಬಹುಮಾನ ನೀಡಿ, ಗೌರವಿಸಿ, ‘ನೀವು ಮಾಡಿದ ಚಟುವಟಿಕೆಗಳು ಉತ್ತಮವಾದವು. ನಿಮ್ಮ ಹುಮ್ಮಸ್ಸು ಈಗೇ ಮುಂದುವರಿಯಲಿ’ ಎಂದು ಹಾರೈಸಿದರು. ಸೀನಿಯರ್ ಸಿಟಿಜನ್ ಸಂಘದ ಅಧ್ಯಕ್ಷರಾದ ಜೀನಾ ಮಥಾಯಸ್ ಕ್ರಾಸ್ತಾ ಸ್ವಾಗತಿಸಿದರು. ಕಾರ್ಯದರ್ಶಿ ಡೇರಿ ಸುವಾರಿಸ್ ವರದಿ ಮಂಡಿಸಿ, ನಿರೂಪಿಸಿದರು. ಮುಂದಿನ ಅಧ್ಯಕ್ಷರಾಗಿ ಆಯ್ಕೆಯಾದ ಡೊಲ್ಫಿ ಡಿ’ಸಿಲ್ವಾ ವಂದಿಸಿದರು.












