

ಕುಂದಾಪುರ, ಸ. 16; ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನ ಹಿಂದೆ ವಿಠಲ್ ವಾಡಿಯಲ್ಲಿ ವಾಸಿಸುತ್ತೀರುವ ಮೈಕಲ್ ಬ್ರಗಾಂಜಾ ಮತ್ತು ಮೇಬಲ್ ಬ್ರಗಾಂಜಾರವರ ಹಿರಿಯ ಪುತ್ರ ಬಹ್ರೇನ್ ನಲ್ಲಿ ಉದ್ಯೋಗ ಮಾಡಿಕೊಂಡಿದ್ದ 51 ವರ್ಷ ಪ್ರಾಯದ ಮಾಲ್ಕಂ ಬ್ರಗಾಂಜಾ ಸಪ್ಟಂಬರ್ 6 ರಂದು ತೀವ್ರ ಹೃದಯ ಸ್ತಂಭನಕ್ಕೆ ಒಳಗಾಗಿ ಬಹ್ರೇನ್ ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು.
ಅಲ್ಲಿ ಅವರ ಕುಟುಂಬದವರು ಉನ್ನತ ವೈದರುಗಳ ಚಿಕಿತ್ಸೆಗೆ ಒಳಪಡಿಸಿದ್ದರು. ಆದರೂ ಗುಣಮುಖರಾಗಿರಲಿಲ್ಲಾ. ಕೊನೆಗೆ ಅವರು ಕೋಮಾಗೆ ತೆರಳಿದ್ದರು. ಅವರು ಇಂದು ಸೆಪ್ಟಂರ್ 16 ರಂದು ಬಹ್ರೇನ್ ನಲ್ಲಿ ಕೊನೆಯುಸಿರು ಎಳೆದಿದ್ದಾರೆ. ಅವರ ತಮ್ಮ ಧರ್ಮಗುರುಗಳಾದ ವಂ।ಮನೋಜ್ ಬ್ರಗಾಂಜಾ, ಇಟೆಲಿಯ ರೋಮ್ ನಲ್ಲಿ ಸೇವೆ ಮಾಡುತಿದ್ದವರು, ಅಣ್ಣನ ಯೋಗ ಕ್ಷೇಮ ನೋಡಿಕೊಳ್ಳಲು ಬಹ್ರೇನ್ ಗೆ ಧಾವಿಸಿ ಬಂದಿದ್ದರು. ಮಾಲ್ಕಮ್ ರವರ ಮಾತ ಪಿತರು ಬಹಳ ವ್ರದ್ದರಾಗಿದ್ದು ಅಸಹನೀಯ ದುಖದಲ್ಲಿದ್ದಾರೆ. ಈ ಆಘಾತಕಾರಿ ಘಟನೆಯಿಂದ ಅವರ ಕುಟುಂಬ, ಕುಂದಾಪುರ ಚರ್ಚ್ ಬಾಂಧವರಿಗೆ ತೀವ್ರ ನೋವನ್ನಂಟು ಮಾಡಿದೆ. ಮಾಲ್ಕಂ ಬ್ರಗಾಂಜಾ ಅವರು ಇತ್ತೀಚಿಗಷ್ಟೆ ಡಾವ್ನ್ ಟಾವ್ನ್ ನಲ್ಲಿ ನೂತನ ಮನೆ ಕಟ್ಟಿ ಕಟ್ಟಿ ಕೊಂಡಿದ್ದರು. ಅವರು ಪತ್ನಿ ಜೆನಿಫರ್, ಸಣ್ಣ ಪ್ರಾಯದ ಮಕ್ಕಳಾದ ಮೆಲೋನಾ ಮತ್ತು ಮೈಯೋಲಾ ಇಬ್ಬರು ಹೆಣ್ಣು ಮಕ್ಕಳನ್ನು, ಹಾಗೂ ಪ್ರೀತಿಬಾಂಧವರನ್ನು ಅಗಲಿದ್ದಾರೆ. ಅವರ ಮ್ರತ ಶರೀರವನ್ನು, ಬಹ್ರೇನ್ ದೇಶದ ಕಾನೂನು ಕ್ರಮಗಳನ್ನು ಮುಗಿದ ಬಳಿಕ, ಭಾರತಕ್ಕೆ ಕಳುಹಿಸುವ ಏರ್ಪಾಟು ಮಾಡಲಾಗುತ್ತದೆ ಎಂದು ಈಗ ಬಹ್ರೇನ್ ನಲ್ಲಿರುವ ವಂ।ಮನೋಜ್ ಬ್ರಗಾಂಜಾ ಮಾಧ್ಯಮಕ್ಕೆ ತಿಳಿಸಿದ್ದಾರೆ

