

ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ಇದರ 2024-25ನೇ ಸಾಲಿನ ವಾರ್ಷಿಕ ಮಹಾ ಸಭೆಯು ದಿನಾಂಕ 14/9/2025 ರಂದು ಮಂಗಳೂರಿನ ಬಿಷಪ್ಸ್ ಹೌಸ್ ಸಭಾಂಗಣದಲ್ಲಿ ನಡೆಸಲಾಯಿತು. ಸಭೆಯನ್ನು ಪ್ರಾರ್ಥನೆಯೊಂದಿಗೆ ಆರಂಭಿಸಿ ಕಳೆದ ವರ್ಷದಲ್ಲಿ ಸೇವೆ ಸಲ್ಲಿಸಿ ದೈವಾಧೀನರಾದ ಸಂಘಟನೆಯ ಸದಸ್ಯರಿಗೆ ಹಾಗೂ ಆಧ್ಯಾತ್ಮಿಕ ನಿರ್ದೇಶಕರಾಗಿ ಸೇವೆ ಸಲ್ಲಿಸಿ ದೈವಾಧೀನರಾದ ವಂದನೀಯ ಫಾದರ್ ವಿನ್ಸೆಂಟ್ ಮೊಂತೆರೊರವರಿಗೆ ಮತ್ತು ಕೊಂಕಣಿ ಕಲಾರತ್ನ ದಿ|ಎರಿಕ್ ಒಝೇರಿಯೋರವರ ಆತ್ಮಕ್ಕೆ ಶೃದ್ಧಾಂಜಲಿಯನ್ನು ಅರ್ಪಿಸಿ ಪ್ರಾರ್ಥಿಸಲಾಯಿತು.
ಸಭಾಧ್ಯಕ್ಷರಾದ ಶ್ರೀ ಸಂತೋಷ್ ಡಿಸೋಜಾರವರು ಹಾಜರಿದ್ದ ಎಲ್ಲರನ್ನು ಸ್ವಾಗತಿಸಿದರು. ಪ್ರಸ್ತುತ ವರ್ಷದ ಕಾರ್ಯದರ್ಶಿಯವರಾದ ಶ್ರೀಮತಿ ವಿಲ್ಮಾ ಮೊಂತೆರೊವರು ಕಳೆದ ವಾರ್ಷಿಕ ಸಭೆಯ ಹಾಗೂ ವಾರ್ಷಿಕ ವರದಿಯನ್ನು ವಾಚಿಸಿದರು. 2025-26ನೇ ವರ್ಷಕ್ಕಾಗಿ ಲೆಕ್ಕ ಪರಿಶೋಧಕರನ್ನು ನೇಮಿಸಲಾಯಿತು. ಖಜಾಂಚಿಯವರಾದ ಶ್ರೀ ಫ್ರಾನ್ಸಿಸ್ ಮೊಂತೆರೊರವರು ಲೆಕ್ಕಪತ್ರವನ್ನು ಮಂಡಿಸಿದರು. ತದನಂತರ ಭಾರತೀಯ ಸಂವಿಧಾನದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ವಂದನೀಯ ಫಾದರ್ ಫ್ರಾನ್ಸಿಸ್ ಆಸ್ಸಿಸಿ ಡಿ ಆಲ್ಮೇಡಾರವರು ಮಾಹಿತಿಯನ್ನು ನೀಡಿದರು. ಆಧ್ಯಾತ್ಮಿಕ ನಿರ್ದೇಶಕರಾದ ವಂದನೀಯ ಡಾ|ಜೆ.ಬಿ.ಸಲ್ಡಾನ್ಹಾರವರು ತಮ್ಮ ಸಂದೇಶವನ್ನು ನೀಡಿದರು.
ಕಳೆದ ವರ್ಷದಲ್ಲಿ ಸಭೆಗೆ ಅತ್ಯಧಿಕ ಸದಸ್ಯತ್ವದ ನೋಂದಣಿ ಮಾಡಿದ ಘಟಕಗಳಿಗೆ, ಆಮ್ಚೊ ಸಂದೇಶ್ ಪತ್ರಿಕೆಗಾಗಿ ಅತ್ಯಧಿಕ ಚಂದಾದಾರಿಕೆ ಮಾಡಿದ ಹಾಗೂ ಜಾಹೀರಾತು ನೀಡಿ ಸಹಕರಿಸಿದ ಘಟಕಗಳಿಗೆ ಮತ್ತು ವಲಯಗಳಿಗೆ ಬಹುಮಾನವನ್ನು ನೀಡಿ ಗೌರವಿಸಲಾಯಿತು. ಕಳೆದ ವರ್ಷದ ಮಾಸಿಕ ಸಭೆಗೆ ನೂರು ಪ್ರತಿಶತ ಹಾಜರಿದ್ದ ಸದಸ್ಯರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಪ್ರಸ್ತುತ ವರ್ಷದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ವಿಲ್ಮಾ ಮೊಂತೇರೊರವರು ವಂದನಾರ್ಪನೆಗೈದರು. ಮಧ್ಯಾಹ್ನದ ಭೋಜನದೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.
ANNUAL GENERAL BODY MEETING OF CATHOLIS SABHA MANGALORE PRADESH® 2024-25

The Annual General Body Meeting of Catholic Sabha Mangalore ® for the year 2024-25 was held on September 14, 2025 at the Bishop’s House Auditorium in Mangalore. The meeting commenced with a prayer and paid homage and offered prayers to the members of the organization who passed away in the previous year after serving and to Rev.Fr.Vincent Monteiro who served as the spiritual Director and passed away.
President Mr. Santhosh D Souza welcomed all attendees. Mrs.Vilma Monteiro , the Secretary for the year 2024-25, read out the miniutes of the previous annual general meeting and the annual report. Auditors for the year 2025-26 were appointed. Treasurer Mr.Francis Monteiro presented the accounts. Subsequently, a programme to raise awareness about the Indian Constitution was organized. Rev. Fr. Francis Assissi D Almeida provided information as a resource person. Spiritual Director Rev. Dr. J.B.Saldanha delivered his message.
Units and varados that achieved the highest membership enrolment in the previous year, highest subscriptions for Amcho Sandesh magazine and those who supported by providing advertisements along with the zones were honoured with awards. Members with 100% attendance at the monthly meetings of the previous year were honoured with mementos. Mrs.Vilma Monteiro the current General Secretary delivered the vote of thanks. The meeting concluded with lunch in the afternoon.


















