
ರೋಟರಿ ಕ್ಲಬ್ ಕುಂದಾಪುರ ರಿವರ್ ಸೈಡ್ ಇವರ ವತಿಯಿಂದ ರೋಟೋರಿಯ ಜಿಲ್ಲಾ ಕಾರ್ಯಕ್ರಮದ ಭಾಗವಾಗಿ ರಸ್ತೆ ಸುರಕ್ಷತಾ ಕಾರ್ಯಕ್ರಮದ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು .ಸಾರ್ವಜನಿಕ ವಾಹನಗಳಿಗೆ ಸ್ಟಿಕ್ಕರ್ ಹಚ್ಚುವ ಮೂಲಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಉಡುಪಿ ಹಿರಿಯ ಮೋಟಾರು ವಾಹನ ನಿರೀಕ್ಷಕರಾದ ಮಾರುತಿ ನಾಯಕ್ ಹಾಗೂ ಮೋಟಾರು ವಾಹನ ನಿರೀಕ್ಷಕರಾದ ತೇಜಸ್ ಇವರು ಉದ್ಘಾಟಿಸಿದರು. ಕಾರ್ಯಕ್ರಮ ಅಧ್ಯಕ್ಷತೆಯನ್ನು ರೋಟರಿ ರಿವರ್ ಸೈಡ್ ಅಧ್ಯಕ್ಷರಾದ ಸದಾನಂದ ಉಡುಪ ಅವರು ಮತನಾಡುತ್ತಾ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವುವ ಉದ್ದೇಶ ದಿಂದ ವಾಹನಗಳಿಗೆ ಸುರಕ್ಷಾ ಫಲಕವನ್ನು ಅಳವಡಿಸಿಕೊಳ್ಳುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಚಾಲಕರು ವಾಹನ ಚಲಾಯಿಸುವಾಗ ಸುರಕ್ಷತೆಯ ಬಗ್ಗೆ ಎಚ್ಚರ ವಹಿಸಬೇಕು ಎಂದು ಹೇಳಿದರು.ವಲಯ ಸೇನಾನಿ ಕೌಶಿಕ್ ಯಡಿಯಾಳರು ರಸ್ತೆ ಸುರಕ್ಷತೆಯ ಬಗ್ಗೆ ಮಾಹಿತಿ ನೀಡಿ ಸರ್ವರಿಗೂ ವಂದಿಸಿದರು.

