

ಬಸ್ರೂರು ಮಾರ್ಗೋಳಿಯಲ್ಲಿ ಕುಂದಾಪುರ ರೋಟರಿ ಕ್ಲಬ್ ರಿವರ್ಸ್ ಸೈಡ್ ನಿಂದ ನಿರ್ಮಾಣಗೊಂಡ ನೂತನ ಬಸ್ ತಂಗುದಾಣವನ್ನು ರೋಟರಿ ಜಿಲ್ಲಾ ಮಾಜಿ ಗವರ್ನರ್ ಅಭಿನಂದನ್ ಶೆಟ್ಟಿ ಉದ್ಘಾಟಿಸಿದರು. ಅವರು ತಮ್ಮ ಉದ್ಘಾಟನಾ ಮಾತುಗಳನ್ನಾಡುತ್ತಾ ಶಾಲಾ ಪರಿಸರ ಮತ್ತು ಧಾರ್ಮಿಕ ಕ್ಷೇತ್ರದ ಸಮೀಪ ಭಕ್ತರಿಗೆ ಮತ್ತು ಶಾಲಾ ವಿದ್ಯಾರ್ಥಿ ಗಳಿಗೆ ಹಾಗೂ ಸಾರ್ವಜನಿಕ ಉಪಯೋಗ ಆಗುವ ಸ್ಥಳದಲ್ಲಿ ಈ ತಂಗುದಾಣ ನಿರ್ಮಿಸಿರುವುದು ಅಭಿನಂದನಾರ್ಹ ಎಂದು ಶ್ಲಾಘಿಸಿದರು .ರೋಟರಿ ಕ್ಲಬ್ಬಿನ ಅಧ್ಯಕ್ಷ ಯು .ಸದಾನಂದ ಉಡುಪ ಇವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಈ ಬಸ್ ತಂಗುದಾಣವನ್ನು ಸಾರ್ವಜನಿಕರು ಸಮರ್ಪಕವಾಗಿ ಉಪಯೋಗಿಸಿಕೊಂಡು ಇದರ ಸದುಪಯೋಗ ಪಡೆಯುವಂತಾಗಲಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ವಲಯ ಒಂದರ ಸಹಾಯಕ ಗೌವರ್ನರ್ ಐ .ನಾರಾಯಣ, ಬಸ್ರೂರು ಗ್ರಾಮ ಪಂಚಾಯತ್ ಅಧ್ಯಕ್ಷ ಬೇಳೂರು ದಿನಕರ್ ಶೆಟ್ಟಿ. ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಶೀನ ಪೂಜಾರಿ, fr. ಸುನಿಲ್ ಮಾರ್ಟಿನ್ ವಲಯ ಒಂದರ ಸೇನಾನಿ ಕೌಶಿಕ್ ಯಡಿಯಾಳ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರ್ವಹಣೆಯನ್ನು ಸದಾನಂದ ಬಳ್ಕೂರು ನಿರ್ವಹಿಸಿದರು, ಕಾರ್ಯದರ್ಶಿ ಭಾಸ್ಕರ್ ಬಿ ವಂದಿಸಿದರು. ಪ್ರಾರ್ಥನೆಯನ್ನು ತ್ಯಾಗರಾಜ್ ಬಳ್ಕೂರು ಇವರು ನೆರವೇರಿಸಿದರು .ಮಾಜಿ ಸಹಾಯಕ ಗವರ್ನರ್ ಡಾ.ಸಂದೀಪ್ ಕುಮಾರ್ ಶೆಟ್ಟಿ , ನಾಗೇಶ್ ಶೇರಿಗಾರ್ ,ನಟೇಶ್, ಕೆ .ಎಸ್. ಮಂಜುನಾಥ್ ,ರಾಜು ಮೂಡಲ್ಕಟ್ಟೆ ,ನಿತೀಶ್ ರಾವ್, ರೊನಾಲ್ಡ್ ಡಿಮೆಲ್ಲೊ,ಅತಿಥಿಗಳನ್ನು ಗೌರವಿಸಿದರು.ಡಾ.ವಿಲಾಸ್ ಕೃತಿಕ್,ಉಲ್ಲಾಸ್ ಕ್ರಾಸ್ತ,ಮಂಜುನಾಥ ಗಾಣಿಗ,ವಿನ್ಸೆಂಟ್ ಬೆರೆಟ್ಟೊ,ಸುಭಾಸ್ ಪೂಜಾರಿ,ಗೌತಮ ಕಾಮತ್,ಡಾ.ದಿನಕರ್ ಶೆಟ್ಟಿ, ಓಂ ಪ್ರಕಾಶ್,ಸಾಗರ್, ಮುಂತಾದ ಸದಸ್ಯರು ಉಪಸ್ಥಿತರಿದ್ದರು.


