

ಶ್ರೀನಿವಾಸಪುರ;ದಳಸನೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ವಿರುದ್ದ 13 ಮಂದಿ ಸದಸ್ಯರು ಅವಿಶ್ವಾಸ ನಿರ್ಣಯವನ್ನು ಮಂಡಿಸಿದ್ದಾರೆಂದು ಕೋಲಾರ ಉಪವಿಭಾಗಾಧಿಕಾರಿ ಡಾ|| ಮೈತ್ರಿ ತಿಳಿಸಿದರು.
ತಾಲ್ಲೂಕಿನ ಕಸಬಾ ಹೋಬಳಿ, ದಳಸನೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ ವೈ.ಎನ್. ಶ್ರೀನಿವಾಸ್ ರವರ ವಿರುದ್ದ ಅವಿಶ್ವಾಸ ಬಗ್ಗೆ ಎಲ್ಲಾ ಸದಸ್ಯರು ನಮಗೆ ಪತ್ರ ನೀಡಿದ್ದರಿಂದ ನಾವು ಈ ದಿನ ಸೋಮವಾರ ದಿನಾಂಕ ನಿಗದಿಪಡಿಸಿದ್ದು, ಈ ಅವಿಶ್ವಾಸ ನಿರ್ಣಯ ಸಭೆಯಲ್ಲಿ ಒಟ್ಟು 16 ಸದಸ್ಯರ ಪೈಕಿ 13 ಸದಸ್ಯರು ಹಾಜರಾಗಿ 3 ಜನ ಗೈರು ಹಾಜರಾಗಿದ್ದರು. ಅಧ್ಯಕ್ಷ ವೈ.ಎನ್. ಶ್ರೀನಿವಾಸ್ ಹಾಗೂ ಉಪಾಧ್ಯಕ್ಷ ಉಮಾದೇವಿ ರವರ ವಿರುದ್ದ ಕೈ ಎತ್ತುವುದರ ಮೂಲಕ ಅವಿಶ್ವಾಸವನ್ನು ಸದಸ್ಯರು ತೋರಿಸಿದ್ದು. ಈ ಮೂಲಕ ದಳಸನೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳು ತೆರವುಗೊಂಡಿದೆ ಎಂದು ಕೋಲಾರ ಉಪವಿಭಾಗಾಧಿಕಾರಿ ಡಾ||ಮೈತ್ರಿ ತಿಳಿಸುತ್ತಾ ಈ ಸಭೆಯ ನಡಾವಳಿಯ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು.
ಅವರು ಚುನಾವಣೆಯನ್ನು ನಿಗದಿಪಡಿಸಿ 10 ದಿನಗಳ ಮುಂಚೆ ನೊಟೀಸ್ ಕೊಟ್ಟು ಒಬ್ಬ ಚುನಾವಣಾಧಿಕಾರಿಯನ್ನು ನೇಮಿಸಿ ಅವರಿಂದ ಚುನಾವಣೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಈ ಸಮಯದಲ್ಲಿ ಪಿಡಿಓ ಮಂಗಳಾಂಭ, ಗ್ರಾ.ಪಂ. ಕಾರ್ಯದರ್ಶಿ ಜ್ಯೋತಿ, ಗ್ರಾ.ಪಂ. ಸದಸ್ಯರು, ಉಪಸ್ಥಿತರಿದ್ದರು. ಹಾಗೂ ಪಿಎಸ್ಐ ಜಯರಾಮ್ ನೇತೃತ್ವದಲ್ಲಿ ಯಾವು

