

ಶ್ರೀನಿವಾಸಪುರ : ಸರ್ಕಾರ ಬೆಂಬಲ ಬೆಲೆ ನೀಡುವುದಕ್ಕೆ 24 ರಂದು ಕೊನೆ ದಿನವೆಂದು ಘೋಷಿಸಿದ್ದು, ತಮ್ಮಲ್ಲಿ ಇರತಕ್ಕಂತ ರಶೀದಿ, ತೂಕದ ಬಿಲ್ಲು, ಆದಾರ್ಕಾರ್ಡ್ , ಮಂಡಿ ಬಿಲ್ಲು ಎಲ್ಲಾ ದಾಖಲೆಗಳನ್ನು 26 ರ ರಂದು ಸಂಜೆ ಒಳಗಾಗಿ ಶ್ರೀನಿವಾಸಪುರ ಕೃಷಿ ಮಾರುಕಟ್ಟೆ ಸಲ್ಲಿಸಬೇಕು. ಕೋಲಾರು, ಮುಳಬಾಗಿಲು, ಚಿಕ್ಕಬಳ್ಳಾಪುರದ ಮಾರುಕಟ್ಟೆಗೆ ಹಾಕಿದವರು ಅಲ್ಲಿ ಮೇಲಿನ ಎಲ್ಲಾ ದಾಖಲೆಗಳನ್ನು ಸಲ್ಲಿಸಿ ಬೆಂಬಲ ಬೆಲೆಯನ್ನು ಪಡೆಯಬೇಕೆಂದು ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ಮನವಿ ಮಾಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದತಿಯಿಂದ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಕೇಂದ್ರ , ರಾಜ್ಯ ಸರ್ಕಾರ ಘೋಷಿಸಿರುವ ಬೆಂಬಲ ಬೆಲೆಯಲ್ಲಿ ಸುಮಾರು ಹಣ ಉಳಿಯುತ್ತಿದ್ದು, ಉಳಿದ ಹಣವನ್ನು ಮಾವು ಮಂಡಲಿಗೆ ವರ್ಗಾಯಿಸಿದರೆ, ಮುಂದಿನ ದಿನಗಳಲ್ಲಿ ಅನುಕೂಲವಾಗುತ್ತದೆ. ಅಲ್ಲದೆ ಮಾವು ಮಂಡಲಿಯಲ್ಲಿ ಹಣವಿಲ್ಲದೆ ಮಾವು ಮಂಡಲಿ ಹಣದ ಕೊರತೆಯಿಂದ ನಿರ್ಗತಿಕವಾಗಿ ಹೋಗಿದೆ. ಆದ್ದರಿಂದ ಬೆಂಬಲ ಬೆಲೆಯಲ್ಲಿ ಉಳಿದ ಹಣವನ್ನು ಮಾವು ಮಂಡಲಿಯಲ್ಲಯೇ ಉಳಿಸಿ ಮಾವು ಮಂಡಲಿಯನ್ನು ಚೇತರಿಕೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಮಾವು ಬೆಳಗಾರರ ಮಧ್ಯೆ ಹಾಗು ಸರ್ಕಾರದ ನಡುವೆ ಸೇತುವೆಯಂತೆ ಕೆಲಸ ಮಾಡಿ ಮಾವು ಬೆಳೆಗಾರರಿಗೆ ಅನುಕೂಲ ಮಾಡಿಕಟ್ಟಿದ್ದಾರೆ ನಮ್ಮ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತಂದು ನಮಗೆ ಅನುಕೂಲ ಮಾಡಿಕೊಟ್ಟಿದ್ದು, ಈ ವಿಚಾರವಾಗಿ ಜಿಲ್ಲಾಧಿಕಾರಿಗಳಿಗೆ ಮಾವು ಬೆಳೆಗಾರರ ಸಂಘದವತಿಯಿಂದ ಕೃತಜ್ಞತೆ ಸಲ್ಲಿಸಿದರು.
ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಪ್ರದಾನ ಕಾರ್ಯದರ್ಶಿ ಪಾತಕೋಟೆ ನವೀನ್ಕುಮಾರ್ ಮಾತನಾಡಿದರು. ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಬೈರಾರೆಡ್ಡಿ, ಜಿಲ್ಲಾ ಸಂಚಾಲಕ ಸೈಯದ್ ಫಾರುಕ್, ಪದಾಧಿಕಾರಿಗಳಾದ ವೀರಪ್ಪರೆಡ್ಡಿ, ಅಸ್ಲಾಂಪಾಷ, ವೀರಪ್ಪ, ಗಟ್ಟಹಳ್ಳಿ ಅಂಬರೀಶ್, ಚೌಡರೆಡ್ಡಿ ಇದ್ದರು.

