

ಗಂಗೊಳ್ಳಿ : ದಿನಾಂಕ 19.07.2025 ಶನಿವಾರದಂದು ಸ್ಟೆಲ್ಲಾ ಮಾರಿಸ್ ಆಂಗ್ಲ ಮಾಧ್ಯಮ ಶಾಲೆ ಮತ್ತು ಕನ್ನಡ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿಗಳ ಪಾಲಕರ ಸಭೆ ನೆರವೇರಿತು. ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯನಿ ಸ್ವಾಗತಿಸಿದರು. ಮುಖ್ಯ ಅತಿಥಿ, ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ಕರುಣಾಕರ ಶೆಟ್ಟಿ, ಸಹ ಶಿಕ್ಷಕರು, ನಾವುಂದ ಪದವಿ ಪೂರ್ವ ಕಾಲೇಜು,ಇವರು ಪಾಲಕರನ್ನು ಉದ್ದೇಶಿಸಿ ಮಾತನಾಡಿ “ಮನೆಯಲ್ಲಿ ವಿದ್ಯಾರ್ಥಿಗಳಿಗೆ ಕಲಿಕಾ ವಾತಾವರಣ ನಿರ್ಮಿಸುವು ಪಾಲಕರ ಮಹತ್ತರ ಜವಾಬ್ದಾರಿ ಇದೆ” ಎಂದರು. ಭಗಿನಿ. ಗ್ರೇಸಿ ಲೋಬೋ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದರು. ಉಭಯ ಶಾಲೆಗಳ ಮುಖ್ಯೋಪಾಧ್ಯಾಯಿನಿಯರಾದ ಭಗಿನಿ ಕ್ರೆಸೆನ್ಸ್ ಮತ್ತು ಭಗಿನಿ ವಿಜಯಾ ಉಪಸ್ಥಿತರಿದ್ದರು. ಶಿಕ್ಷಕರಕ್ಷಕ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷೆ ಶ್ರೀಮತಿ ಶಾಂತಿ ಖಾರ್ವಿ, ಸದಸ್ಯರು ಭಾಸ್ಕರ್ ಖಾರ್ವಿ, ಶ್ರೀಧರ ಖಾರ್ವಿ, ನವೀನ ಶೆಟ್ಟಿ, ರಾಮ ಖಾರ್ವಿ, ದಿನೇಶ ಖಾರ್ವಿ, ಶ್ರೀಮತಿ ರೇಣುಕಾ, ಶಶಿಕಲಾ,ಕವಿತಾ ಸರ್ವಾನುಮತದಿಂದ ಆಯ್ಕೆಯಾದರು. ಶಿಕ್ಷಕ ಗಣೇಶ ಹೆಬ್ಬಾರ್ ವಂದಿಸಿದರು. ದಿವ್ಯ ಭಾರತಿ ಕಾರ್ಯಕ್ರಮ ನಿರೂಪಿಸಿದರು.


