
ಕುಂದಾಪುರ, ಜು.16: ಕುಂದಾಪುರ ಸಂತ ಜೋಸೆಫ್ ಕಾನ್ವೆಂಟ್ ಪ್ರಾರ್ಥನ ಮಂದಿರದಲ್ಲಿ ಸಂತ ಜೋಸೆಫ್ ಕಾನ್ವೆಂಟಿನ ಆಪೊಸ್ತಲಿಕ್ ಕಾರ್ಮೆಲ್ ಸಂಸ್ಥೆಯ ಧರ್ಮ ಭಗಿನಿಯರು, ತಮ್ಮ ಪಾಲಕಿ ಕಾರ್ಮೆಲ್ ಮಾತೆಯ ಹಬ್ಬವನ್ನು ಜುಲಾಯ್ 16 ರಂದು ಆಚರಿಸಿದರು. ಹಬ್ಬದ ಬಲಿದಾನವನ್ನು ಕಟ್ಕರೆ ಬಾಲ ಯೇಸುವಿನ ಆಶ್ರಮದ ವಂ| ಫಾ| ಜೋಸೆಫ್ ಸಿರಿಲ್ ಡಿಸೋಜಾ ಇವರ ನೇತ್ರತ್ವದಲ್ಲಿ ದಿವ್ಯ ಬಲಿ ಪೂಜೆಯನ್ನು ಅರ್ಪಿಸಿ ಅವರು “ಕಶ್ಟದ ವೇಳೆಯಲ್ಲಿ ನಮಗೆ ಯೇಸು ಸ್ವಾಮಿ ಮೇರಿಮಾತೆಯನ್ನು ನಮಗೆ ತಾಯಾಗಿ ಕರುಣಿಸಿದ್ದಾರೆ. ಮೇರಿ ಮಾತೆ ಪಾಪರಹಿತಳು, ಅವಳು ದೇವರ ಕ್ರಪಾ ಭರಿತಳು, ಸ್ವರ್ಗದಲ್ಲಿರುವ ತಾಯಿ, ಅವಳು ನಮ್ಮ ಬೇಡಿಕೆಯನ್ನು ಈಡೆರಿಸುತ್ತಾಳೆ. ನಾವು ಆಯಾಯ ವೇಳೆಗೆ ಪ್ರಾರ್ಥನೆ, ಜಪಮಾಲೆ ಮಾಡಿದರೆ ಸಾಲದು, ದಿನದ ಎಲ್ಲಾ ವೇಳೆಯಲ್ಲಿ ಸಮಯ ಸಿಕ್ಕಾಗ ದೇವರನ್ನು ನೆನಪಿಸಿಕೊಳ್ಳುತ್ತಾ ಇರಬೇಕು. ಅವಳ ಮೇಲೆ ಅಖಂಡ ಭರವಸೆ ಇಟ್ಟುಕೊಳ್ಳಬೇಕು. ನಾವು ಬಹಿರಂಗವಾಗಿ ಧಾನ ಧರ್ಮ ಮಾಡಬಾರದು, ಗುಟ್ಟಿನಲ್ಲಿ ಪ್ರಾಥಿಸಬೇಕು” ಎಂದು ಸಂದೇಶ ನೀಡಿದರು.
ಕಾರ್ಮೆಲ್ ಮಾತೆಯ ಬೆಂತಿಣ್ ಗಳನ್ನು ಆಶಿರ್ವದಿಸಲಾಯಿತು. ಅವಗಳನ್ನು ಭಕ್ತಾಧಿಗಳಿಗೆ ವಿತರಿಸಲಾಯಿತು. ಅಂದಿನ ದಿವ್ಯ ಬಲಿದಾನದ ಪ್ರಾರ್ಥನ ವಿಧಿಯನ್ನು ನಡೆಸಿಕೊಟ್ಟರು. ಕಾರ್ಮೆಲ್ ಮೇಳದ ಧರ್ಮಭಗಿನಿನಯರಿಗೆ ಪುನರ್ ಪ್ರತಿಜ್ಞಾ ವಿಧಿ ಮತ್ತು ಅವರಿಗೆ ಸಹಕಾರ ನೀಡುವ ನಾಲ್ವರು ಮಹಿಳೆಯರಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಕಾರ್ಮೆಲ್ ಭಗಿನಿಯರ ಸಂಸ್ಥೆಯ ಸ್ಥಾಪಕರಾದ ಮದರ್ ವೆರೋನಿಕಾರವರ 157 ವರ್ಷಗಳ ನೆನಪನ್ನು ಸ್ಮರಿಸಲಾಯಿತು.
ಕಾನ್ವೆಂಟ್ ಮುಖ್ಯಸ್ಥೆ ಭಗಿನಿ ಸುಪ್ರಿಯಾ, ಸಂತ ಜೋಸೆಫ್ ಕಾನ್ವೆಂಟಿನ ಕಾರ್ಮೆಲ್ ಭಗಿನಿಯರು ಹಾಗೂ ಕಾರ್ಮೆಲ್ ಭಗಿನಿಯರ ಸಹಾಯಕರ ಬ್ಲೊಸಮ್ ಪಂಗಡದವರು ಹಾಜರಿದ್ದು, ಹಲವಾರು ಭಕ್ತರು ಹಾಜರಿದ್ದರು.













































