


ಕುಂದಾಪುರ, ಜು.16; ನಮ್ಮ ಸಂಸ್ಥೆಯಾದ ಹೋಲಿ ರೋಸರಿ ಆಂಗ್ಲ ಮಾಧ್ಯಮ ಶಾಲೆ, ಕುಂದಾಪುರ ಇಲ್ಲಿ ಸರಿ ಸುಮಾರು 13 ವರ್ಷಗಳ ಕಾಲ (2000 ರಿಂದ 2013ರವರೆಗೆ) ಮುಖ್ಯೋಪಾಧ್ಯಾಯಿನಿಯಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ಶ್ರೀಮತಿ ಕೊನಿ ರೆಬೆಲ್ಲೋ ಅವರು ದಿನಾಂಕ 16.07.2025ರಂದು ನಿಧನ (74 ವರ್ಷ) ಹೊಂದಿದ್ದು, ಅವರ ನಿಧನದ ಸುದ್ದಿ ನಮ್ಮೆಲ್ಲರಿಗೂ ತುಂಬಾ ದುಃಖ ತಂದಿದೆ.
ಅವರು ಅಪಾರ ಬದ್ಧತೆ ಮತ್ತು ಶ್ರದ್ಧೆಯಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ನಿಷ್ಠಾವಂತ ಶಿಕ್ಷಕಿ ಹಾಗೂ ಕರುಣಾಮಯಿ ತಾಯಿಯಾಗಿದ್ದರು. ವಿದ್ಯಾರ್ಥಿಗಳ ಸಂಪೂರ್ಣ ಬೆಳವಣಿಗೆಯತ್ತ ಕಾಳಜಿಯುಳ್ಳ ಅವರ ದೃಷ್ಠಿಕೋನ ಮತ್ತು ಶೈಕ್ಷಣಿಕತೆಯಿಂದ ಅವರ ಕಾಲಘಟ್ಟದಲ್ಲಿ ಶಾಲೆಗೆ 2004ರಲ್ಲಿ ರಾಜ್ಯ ಮಂಡಳಿಯಿಂದ ಮಾನ್ಯತೆ ದೊರೆತಿರುವುದು ನಮ್ಮ ಸಂಸ್ಥೆಗೆ ಹೆಮ್ಮೆಯ ವಿಷಯ. ಅವರು ಹೊಂದಿದ ಅಪಾರ ನಿಷ್ಠೆ ಅವರಿಗೆ ಎಲ್ಲರ ಮನಸ್ಸಿನಲ್ಲಿ ಸ್ಥಾನ ಗಳಿಸಿಕೊಟ್ಟಿದೆ. ಶಾಲೆಯ ಶಿಸ್ತು, ನೈತಿಕತೆ ಮತ್ತು ಮೌಲ್ಯಾಧಾರಿತ ಸಂಸ್ಕøತಿಯನ್ನು ಕಟ್ಟುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
ಅವರು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪಾಲಕರ ಜೀವನದಲ್ಲಿ ಅವರು ಬಿತ್ತಿದ ಪ್ರೇರಣಾದಾಯಕ ಶಿಕ್ಷಣ, ಶಿಸ್ತಿನ ಬದುಕಿನ ಬಿತ್ತನೆ ಇಂದು ಕೂಡ ಅದರ ಕಂಪನ್ನು ಪಸರಿಸುತ್ತಿದೆ. ಅವರ ಉಜ್ವಲ ಮೌಲ್ಯಗಳು, ಪ್ರೀತಿಪೂರ್ಣ ಇರುವಿಕೆ ಮತ್ತು ಶಿಕ್ಷಣದ ಮೇಲಿನ ನಿರಂತರ ಸಮರ್ಪಣೆ ಶಾಶ್ವತವಾಗಿ ನಮ್ಮ ನೆನಪಿನಲ್ಲಿ ಉಳಿಯಲಿದೆ. ಅವರ ಆತ್ಮಕ್ಕೆ ಚಿರಾ ಶಾಂತಿ ಸಿಗಲಿ ಎಂದು ಬೇಡಿಕೊಳ್ಳುತ್ತೇವೆ. ಹೋಲಿ ರೋಜರಿ ಹಾಗೂ ಸಂತ ಮೇರಿ ಸಮೂಹ ಸಂಸ್ಥೆಗಳ ಸಂಚಾಲಕರು, ಆಡಳಿತ ಮಂಡಳಿ, ಸಂಸ್ಥೆಯ ಮುಖ್ಯಸ್ಥರು, ಶಿಕ್ಷಕ- ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು ಹಾಗೂ ಹಳೆ ವಿದ್ಯಾರ್ಥಿಗಳು.










