

ಕುಂದಾಪುರ ; ಸಿ.ಎಸ್.ಐ. ಕೃಪಾ ವಿದ್ಯಾಲಯ ನರ್ಸರಿ ಶಾಲೆಯ ಪ್ಲೇ ಸ್ಕೂಲ್, ಎಲ್.ಕೆ.ಜಿ ಮತ್ತು ಯು.ಕೆ.ಜಿ ಪುಟಾಣಿ ಮಕ್ಕಳಿಗೆ ದಿನಾಂಕ 02/09/2026 ಬುಧವಾರದಂದು ಹಳದಿ ಬಣ್ಣದ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಸವಿತಾ ಸ್ವಾಗತಿಸಿದರು ಮುಖ್ಯ ಅತಿಥಿಗಳಾದ ವಂ। ಇಮ್ಯಾನುವೆಲ್ ಜಯಕರ್ ರವರು ಮಾತನಾಡಿ, “ಹಳದಿ ಬಣ್ಣವು ಸಂತೋಷ, ಶಕ್ತಿ, ಬುದ್ಧಿವಂತಿಕೆ ಹಾಗೂ ಸೂರ್ಯನ ಬೆಳಕನ್ನು ಸೂಚಿಸುತ್ತದೆ” ಎಂದು ಹೇಳಿ ಮಕ್ಕಳಿಗೆ ಹಳದಿ ಬಣ್ಣದ ಶುಭ ಹಾರೈಸಿದರು.
ಶಾಲಾ ಸಂಚಾಲಕರಾದ ಐರಿನ್ ಸಾಲಿನ್ಸ್ ರವರು ಪುಟಾಣಿಗಳಿಗೆ ಹಳದಿ ಬಣ್ಣದ ಹೂ-ಹಣ್ಣುಗಳ ಬಗ್ಗೆ ತಿಳಿಸಿಕೊಟ್ಟರು. ಶಾಲಾ ಪ್ರಾಂಶುಪಾಲರಾದ ಅನಿತಾ ಆಲಿಸ್ ಡಿಸೋಜ ರವರು ಪುಟಾಣಿಗಳಿಗೆ ಅಭಿನಯ ಗೀತೆಯನ್ನು ಮಾಡಿಸಿ ಮನೋರಂಜಿಸಿದರು.
ಪುಟಾಣಿ ಮಕ್ಕಳು ಹಳದಿ ಬಣ್ಣದ ಬಟ್ಟೆಯಲ್ಲಿ ಮುದ್ದಾಗಿ ಕಾಣುತ್ತಿದ್ದು, ಶಿಕ್ಷಕಿ ವಿದ್ಯಾ ಲಕ್ಷ್ಮಿ ಮಕ್ಕಳಿಂದ ಸುಂದರ ನೃತ್ಯಗಳನ್ನು ಮಾಡಿಸಿದರು. ಮಕ್ಕಳು ಹಳದಿ ಬಣ್ಣದ ಹೂ-ಹಣ್ಣುಗಳ ಚಿತ್ರಗಳಿಗೆ ಬಣ್ಣ ಹಚ್ಚಿದರು ಹಾಗೂ ಹಳದಿ ಬಣ್ಣದ ಕಾಗದದ ಚೂರುಗಳನ್ನು ಅಂಟಿಸುವ ಚಟುವಟಿಕೆಗಳನ್ನು ಮಾಡಿದರು. ಎಲ್. ಕೆ.ಜಿ ಯ ರನ್ವಿತ್ ,ಸಾನಿಕಾ ಶೇಟ್ ಮತ್ತು ಯು. ಕೆ.ಜಿ ಯ ಉಮರ್, ಸಯ್ಯದಾ, ಸಂಸ್ಕೃತಿ, ಕೀರ್ತಿ, ಹಳದಿ ಬಣ್ಣದ ವಸ್ತುಗಳ ಬಗ್ಗೆ ಮಾತನಾಡಿದರು.ಎಲ್.ಕೆ.ಜಿ ವಿದ್ಯಾರ್ಥಿನಿ ರೀಶೋನಾ ಹಳದಿ ಬಣ್ಣದ ಬಗ್ಗೆ ಭಾಷಣ ಮಾಡಿದಳು. ಶಿಕ್ಷಕಿ ರೇಖಾ ಆಲ್ಮೆಡಾ ವಂದಿಸಿದರು. ಶಿಕ್ಷಕಿ ವಿಲ್ಮಾ ನಿರೂಪಿಸಿದರು.








