


ಸೆಪ್ಟೆಂಬರ್ ೬ ಭಾನುವಾರದಂದು ಸಂತ ಜೋಸೆಫರ ಇಗರ್ಜಿ ಕೋಟದಲ್ಲಿ ಕುಟುಂಬ ದಿನಾಚರಣೆಯನ್ನು ಆಚರಿಸಲಾಯಿತು. ಚರ್ಚಿನ ಧರ್ಮಗುರುಗಳಾದ ವಂದನೀಯ ಸ್ಟ್ಯಾನಿ ತಾವ್ರೊ ಅವರು ಪವಿತ್ರ ಬಲಿಪೂಜೆಯನ್ನು ಅರ್ಪಿಸಿದರು. ಚರ್ಚಿನ ಕುಟುಂಬಗಳಿಗಾಗಿ ವಿಶೇಶವಾಗಿ ಈ ಸಂದರ್ಬದಲ್ಲಿ ಪ್ರಾರ್ಥಿಸಲಾಯಿತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಉಡುಪಿ ಧರ್ಮ ಪ್ರಾಂತ್ಯದ ಕುಟುಂಬ ಆಯೋಗದ ನಿರ್ದೇಶಕರಾದ ಲೆಸ್ಲಿ ಅರೋಜಾ ಅವರು ಆಗಮಿಸಿ ಕುಟುಂಬ ಜೀವನದ ಮಹತ್ವದ ಕುರಿತು ಭಾಶಣ ಮಾಡಿದರು.
ನಂತರ ಮನೋರಂಜನಾ ಕಾರ್ಯಕ್ರಮದಲ್ಲಿ ಚಿಕ್ಕ ಮಕ್ಕಳು ಎಲ್ಲರನ್ನು ತಮ್ಮ ಪ್ರತಿಭೆಗಳಿಂದ ರಂಜಿಸಿದರು.
ಚರ್ಚಿನ ಆಡಳಿತ ಮಂಡಳಿಯ ಉಪಾಧ್ಯಕ್ಶರಾದ ಹೆರಾಲ್ಡ್ ಫೆರ್ನಾಂಡಿಸ್ ಅವರು ಸ್ವಾಗತಿಸಿದರು. ಕುಟುಂಬ ಆಯೋಗದ ಸಂಚಾಲಕೀ ಒಲಿವಿಯಾ ಫೆರ್ನಾಂಡಿಸ್ ಅವರು ಧನ್ಯವಾದ ಸಮರ್ಪಣೆ ಮಾಡಿದರು. ಸಮೂಹ ಸಹ ಭೋಜನದೊಂದಿಗೆ ಕಾರ್ಯಕ್ರಮ ಅಂತ್ಯಗೊಂಡಿತು.
























