

ಉರ್ವ; “ವಿದ್ಯಾರ್ಥಿಗಳ ಜ್ಞಾನದ ಹಸಿವನ್ನು ನೀಗಿಸುವ ಗುರುಗಳು ದೇಶ ಕಟ್ಟಲು ವಿದ್ಯಾರ್ಥಿಗಳಿಗೆ ಸದಾ ದಾರಿದೀಪ ವಾಗಿರುತ್ತಾರೆ” ಎಂಬುದಾಗಿ ಸಂತ ಅಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆ ಉರ್ವ ಇಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಶಿಕ್ಷಕರನ್ನು ಉದ್ದೇಶಿಸಿ ಅಧ್ಯಕ್ಷ ಭಾಷಣದಲ್ಲಿ ಶಾಲಾ ಸಂಚಾಲಕರು ವಂ.ಫಾ.ಬೆಂಜಮಿನ್ ಪಿಂಟೋ ತಿಳಿಸಿದರು. ಚರ್ಚ್ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರ ಕ್ಷೇತ್ರ ಸಂಘದ ಸದಸ್ಯರು ಪ್ರಾರ್ಥನೆ ನೆರವೇರಿಸಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಶ್ರೀಯುತ ಅಲೋಶಿಯಸ್ ಡಿಸೋಜ ಶಾಲಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಶೈಲಶ್ರೀ, ಹಿರಿಯ ಶಿಕ್ಷಕರಾದ ಲವಿನ ದಿಕ್ಕುನ್ನ , ಮತ್ತು ಲವೀನಾ ಪಿಂಟೋ ವೇದಿಕೆಯಲ್ಲಿದ್ದರು. ಡಾ| ಸರ್ವಪಲ್ಲಿ ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯೊಂದಿಗೆ ಗೌರವ ವಂದನೇ ಸಲ್ಲಿಸಲಾಯಿತು. ಶಿಕ್ಷಕರಿಗೆ ಮನೋರಂಜನ ಆಟಗಳನ್ನು ಆಯೋಜಿಸಲಾಯಿತು. ಶಿಕ್ಷಕ ರಕ್ಷಕ ಸಂಘದ ಸದಸ್ಯರಾದ ಶಹಾನಾಜ್ ಕಾರ್ಯಕ್ರಮ ನಿರೂಪಿಸಿ ಶ್ರುತಿ ವಂದಿಸಿದರು.




























