

ಕುಂದಾಪುರ; ಸಂತ ಪಿಯುಸ್ ಹತ್ತನೇ ಚರ್ಚ್ ಹಂಗ್ಳೂರಿನಲ್ಲಿ ವೈ.ಸಿ.ಎಸ್ ಸಂಘಟನೆಯವತಿಯಿಂದ ಯುವಜನರಲ್ಲಿ ಕೃಷಿಯ ಬಗ್ಗೆ ಆಸಕ್ತಿಯನ್ನು ಉಂಟು ಮಾಡಲು ಸ್ಥಳೀಯ ಗದ್ದೆಯಲ್ಲಿ ಸಸಿಯನ್ನು ಕೀಳುವುದು ಮತ್ತು ನಟ್ಟಿ ಮಾಡುವುದು ಹಾಗೆಯೇ ಕೃಷಿಯ ಬಗ್ಗೆ ಮಾಹಿತಿಯನ್ನು ನೀಡುವ ಕಾರ್ಯಕ್ರಮವನ್ನು ಜು.6 ರಂದು ಹಮ್ಮಿಕೊಳ್ಳಲಾಗಿತ್ತು. ಧರ್ಮಕೇಂದ್ರದ ವಂ. ಗುರು ಆಲ್ಬರ್ಟ್ ಕ್ರಾಸ್ತಾ,ಪಾಲನಾ ಮಂಡಳಿಯ ಉಪಾಧ್ಯಕ್ಷಾರಾದ ಜೇಮ್ಸ್ ಡಿಮೆಲ್ಲೊ ಮಕ್ಕಳಿಗೆ ಶುಭ ಹಾರೈಸಿದರು. ಕಾರ್ಯದರ್ಶಿ ರೇಶ್ಮಾ ಡಿಸೋಜಾರವರು ವೈ.ಸಿ.ಎಸ್ ಮಕ್ಕಳಿಗೆ ಗದ್ದೆಯಲ್ಲಿ ಸಸಿಯನ್ನು ಕೀಳುವ ಮತ್ತು ನಡೆಯುವ ತರಬೇತಿ ನೀಡಿದರು.
ಸುನೀತಾ ಡಿಮೆಲ್ಲೊ ರವರು ಸಾಂಪ್ರಾದಾಯಿಕ ಭತ್ತದ ಕೃಷಿ ಮಾಡುವ ಮತ್ತು ಈಗಿನ ರೈತರ ಸ್ಥಿತಿಗತಿಯ ಬಗ್ಗೆ ಮಾಹಿತಿ ನೀಡಿದರು. ಅಧ್ಯಕ್ಷೀಯ ಭಾಷಣದಲ್ಲಿ ವಂ. ಗುರು ಆಲ್ಬರ್ಟ್ ಕ್ರಾಸ್ತಾರವರು ಮಕ್ಕಳಿಗೆ ಕೃಷಿಯ ಮಹತ್ವವನ್ನು ತಿಳಿ ಹೇಳಿದರು. ಮಕ್ಕಳಿಗೆ ಶುಭ ಹಾರೈಸಿದರು. ಸಂತ ಅನ್ನ ಕಾನ್ವೆಂಟಿನ ಮುಖ್ಯಸ್ಥೆ ಸಿ. ವೆರೊನಿಕಾ ಮಿನೇಜಸ್, ಸಂತ ಪಿಯುಸ್ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿ. ಶಾಂತಾ, ವೈ.ಸಿ.ಎಸ್ ಅಧ್ಯಕ್ಷ ಜೈಸನ್, ಸೆಕ್ರೆಟರಿ ಸಾವಿಯೋ ವೇದಿಕೆಯಲ್ಲಿ ಉಪಸ್ಥಿರಿದ್ದರು, 20 ಆಯೋಗಗಳ ಸಂಯೋಜಕಿ ಲೀನಾ ತಾವ್ರೊ, ಐ.ಸಿ.ವೈ.ಎಮ್. ಅಧ್ಯಕ್ಷೆ ಪ್ರಮೀಳಾ ಕರ್ವಾಲ್ಲೊ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಸ್ಲೀಟಾ ಮಸ್ಕರೇನ್ಹಸ್ ಸ್ವಾಗತಿಸಿದರು, ಸಂದೀಪ್ ವಂದಿಸಿದರು, ಒಲ್ಗಾ ಡಿಮೆಲ್ಲೊ ಕಾರ್ಯಕ್ರಮ ನಿರ್ಮಹಿಸಿದರು. ವೈ.ಸಿ.ಎಸ್ ಸಚೇತಕಿ ಜ್ಯೋತಿ ಡಿಮೆಲ್ಲೊ ರವರು ಮತ್ತು ಮರೀನಾ ಗೊನ್ಸಾಲ್ವೀಸ್ ರವರು ಈ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.





































