

ಮಂಗಳೂರು; ದಿನಾಂಕ: 09/07/2025 ಸೆಂಟ್ ರೀಟಾ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ 2025ರ ಜುಲೈ 9 ರಂದು ವನಮಹೋತ್ಸವವನ್ನು ಉತ್ಸಾಹಭರಿತವಾಗಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಶಾಲೆಯ ನಿವೃತ್ತ ಶಿಕ್ಷಕಿ ಶ್ರೀಮತಿ ಮೇಬಲ್ ಪಿಂಟೋ, ಸಂಚಾಲಕರಾದ ಫಾ. ಎರಿಕ್ ಕ್ರಾಸ್ಟಾ ಹಾಗೂ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮೆಟಲ್ಡಾ ಡಿಕೋಸ್ತಾ ಅವರು ಸಸಿ ನೆಡುವುದರ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಪರಿಸರದ ಮಹತ್ವವನ್ನು ವಿವರಿಸುವ ನೃತ್ಯ, ಪರಿಸರ ಸಂರಕ್ಷಣೆಯ ಕುರಿತಾಗಿ ಹಾಡು, ಮತ್ತು ವನಮಹೋತ್ಸವದ ಮಹತ್ವವನ್ನು ತೋರಿಸುವ ನಾಟಕ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಶಿಕ್ಷಕರು ಮತ್ತು ಮಕ್ಕಳು ಒಟ್ಟಾಗಿ ಶಾಲಾ ಆವರಣದಲ್ಲಿ ಸಸಿ ನೆಡುವ ಮೂಲಕ ಪರಿಸರ ಜವಾಬ್ದಾರಿಯ ಸಂದೇಶವನ್ನು ಹರಡಿದರು.
ಕಾರ್ಯಕ್ರಮದ ನಿರೂಪಣೆಯನ್ನು ಆರನೆಯ ತರಗತಿಯ ರಿಯಾ, ಸ್ವಾಗತ ಭಾಷಣವನ್ನು ನಾಲ್ಕನೇ ತರಗತಿಯ ವಿದ್ಯಾರ್ಥಿನಿ ಝಿಕ್ರಾ ಹಾಗೂ ಧನ್ಯವಾದವನ್ನು ನಾಲ್ಕನೇ ತರಗತಿಯ ಲಿಯೇನ್ ಸಲ್ಲಿಸಿದರು.
ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಿ, ಪ್ರಕೃತಿಯೊಂದಿಗೆ ನಂಟು ಬೆಳೆಸುವ ಪ್ರೇರಣೆಯಾಗಿ ಪರಿಣಮಿಸಿತು.
Mangaluru; Vana Mahotsav Celebration at St. Rita English Medium School, Cascia, Jeppu,

Mangaluru; Date: 09/07/2025St. Rita English Medium School celebrated Vana Mahotsav with great enthusiasm on 9th July 2025 in the school campus.
The program was inaugurated with the symbolic planting of a sapling by the Chief Guest, Mrs. Mable Pinto, a retired teacher of the school, Rev. Fr. Eric Crasta, the Joint Secretary and Mrs.Matilda Dcosta the Headmistress.
The event included a variety of cultural activities such as a tree-themed play, song and a skit highlighting the importance of Vana Mahotsav and environmental protection.
All the teachers along with class representatives actively participated in planting saplings around the campus, spreading the message of environmental responsibility.
The Master of Ceremony for the program was Rhea of class 6th, welcome address was delivered by Zikra of class 4th, and the vote of thanks was proposed by Leanne of class 4th.
The celebration was a success and instilled a sense of environmental awareness and responsibility among the students.












