

ಕುಂದಾಪುರ; ದಿನಾಂಕ 21-06-2025 ರಂದು ಸೈಂಟ್ ಮೇರೀಸ್ ಹಿರಿಯ ಪ್ರಾಥಮಿಕ ಶಾಲೆ ಕುಂದಾಪುರ ಇಲ್ಲಿ ವಿಶ್ವ ಯೋಗ ದಿನಾಚರಣೆ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಶಾಲಾ ಹಳೆ ವಿದ್ಯಾರ್ಥಿ ಇಶಾನಿ ಮೆಡಿಕಲ್ ಸೆಂಟರ್ ಕುಂದಾಪುರ ಇಲ್ಲಿನ ವೈದ್ಯಾಧಿಕಾರಿ ಡಾ. ಸೋನಿ ಡಿ ಕೋಸ್ತಾ ಯೋಗ ಹಾಗೂ ದ್ಯಾನದ ಮಹತ್ವ ತಿಳಿಸಿದರು
ಮುಖ್ಯ ಶಿಕ್ಷಕಿ ಜ್ಯೋತಿ ಡಿಸಿಲ್ವ ಸ್ವಾಗತಿಸಿದರು, ಶಿಕ್ಷಕಿ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ಶಾಂತಿ ರಾಣಿ ಇವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಯೋಗಾಭ್ಯಾಸ ಮಾಡಿದರು. ಶಿಕ್ಷಕಿಯರಾದ ಗೀತಾ ನೊರೊನ್ನ, ಸುಜಾತ ಶೆಟ್ಟಿ, ಪ್ರೀತಿ ಹಾಗೂ ಸುರೇಖಾ ಸಹಕರಿಸಿದರು.










