

ಗಂಗೊಳ್ಳಿ ; ದಿನಾಂಕ 05.06. 2026ರಂದು, ವಿಶ್ವ ಪರಿಸರ ದಿನ ಆಚರಿಸಲಾಯಿತು. ಪೂರ್ವಾಹ್ನ ಅಸೆಂಬ್ಲಿಯಲ್ಲಿ ಪರಿಸರಕ್ಕಾಗಿ ಪ್ರಾರ್ಥನೆ, ಪರಿಸರ ಘೋಷ ವಾಕ್ಯಗಳು, ಪರಿಸರ ಕವನ ಹಾಗೂ ಪರಿಸರ ಗೀತೆ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಮುಖ್ಯ ಶಿಕ್ಷಕಿ ಹಾಗೂ ಶಿಕ್ಷಕರ ಉಪಸ್ಥಿತಿಯಲ್ಲಿ ವಿದ್ಯಾರ್ಥಿಗಳು ಹಸಿರು ಉಟ್ಟು ಶಾಲಾ ಆವರಣದಲ್ಲಿ ದಾಳಿಂಬೆ ಹಣ್ಣಿನ ಗಿಡ ನೆಡುವುದರ ಮೂಲಕ ಪರಿಸರ ದಿನವನ್ನು ಸಂಭ್ರಮಿಸಿದರು.



