

ಕುಂದಾಪುರ, ಜೂ.7; ನಗರದ ಸೈಂಟ್ ಮೇರಿಸ್ ಪ. ಪೂ. ಕಾಲೇಜಿನಲ್ಲಿ ದೀಪ ಬೆಳಗುವುದರ ಮೂಲಕ ಸೈಂಟ್ ಮೇರಿಸ್ ಪ. ಪೂ. ಕಾಲೇಜಿನಲ್ಲಿ 2026 ನೇ ಸಾಲಿನ ನೂತನ ವಿದ್ಯಾರ್ಥಿಗಳಿಗೆ ಸ್ವಾಗೋತ್ಸವ ಹಾಗೂ ಶಿಕ್ಷಕ ರಕ್ಷಕ ಸಭೆಯ ಕಾರ್ಯಕ್ರಮವನ್ನು, ಭಾಗ್ಯವಂತೆ ರೋಜರಿ ಮಾತಾ ಚರ್ಚಿನ ಧರ್ಮಗುರು, ವಿದ್ಯಾ ಸಂಸ್ಥೆಯ ಜಂಟಿ ಕಾರ್ಯದರ್ಶಿ ಅ|ವಂ|ಪಾವ್ಲ್ ರೇಗೊ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಅವರು ‘ನಮ್ಮ ಕಾಲೇಜಿನಲ್ಲಿ ಬೇಕಾದ್ದು ಎಲ್ಲ ವ್ಯವಸ್ಥೆ ಇದೆ, ಅನುಭವವುಳ್ಳ ಪ್ರಾಧ್ಯಪಕರಿದ್ದಾರೆ, ಹಾಗಾಗಿ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ವರ್ಷವನ್ನು ಚೆನ್ನಾಗಿ ಆರಂಭಿಸಬೇಕು, ವಿದ್ಯಾರ್ಥಿಗಳು ಕಾಲೇಜು ಜೀವನ ಬರೆ ಮೋಜಿಗೆ ಅಲ್ಲವೆಂದು ತಿಳಿದುಕೊಳ್ಳಬೇಕು, ಈ ಸಮಯದಲ್ಲಿ ನಮ್ಮ ಶಿಕ್ಷಣಕ್ಕೆ ಮಹತ್ವ ನೀಡಬೇಕು, ಈ ಕಾಲೇಜಿನಲ್ಲಿ ಬರೆ ಶಿಕ್ಷಣ ಮಾತ್ರವಲ್ಲ ಸಂಸ್ಕಾರವನ್ನು ಕಲಿಸಿಕೊಡುತ್ತಾರೆ, ಹೆತ್ತವರು ತಮ್ಮ ಮಕ್ಕಳ ಬಗ್ಗೆ ಗಮನ ಇಡಬೇಕು, ಹೊಸ ವಿದ್ಯಾರ್ಥಿಗಳು ಇಂದು ಅತಿಥಿಗಳು ನೀಡಿದ ಹಿತನುಡಿಗಳನ್ನು ಪಾಲಿಸಬೇಕು’ ಎಂದು ನೂತನವಾಗಿ ಆಗಮಿಸಿದ ವಿದ್ಯಾರ್ಥಿಗಳಿ ಶುಭವನ್ನು ಹಾರೈಸಿದರು.
ಈ ಸಂಧರ್ಭದಲ್ಲಿ ಗೌರವ ಅತಿಥಿಯಾಗಿ ಆಗಮಿಸಿದ ಕಾಲೇಜಿನ ಹಳೆ ವಿದ್ಯಾರ್ಥಿ ಯುವ ವೈದ್ಯ ಡಾ.ವಿಕ್ಟರ್ ಡಿಕೋಸ್ತಾ ಇವರನ್ನು ಸನ್ಮಾನಿಸಲಾಯಿತು ಅದಕ್ಕೆ ಉತ್ತರವಾಗಿ ಕ್ರಜ್ಞತೆಯನ್ನು ಸಲ್ಲಿಸುತ್ತಾ ‘ಉತ್ತಮ ಅಂಕ ಗಳಿಸಲು ಪರಿಶ್ರಮ ಪಡಬೇಕು, ಶಿಸ್ತನ್ನು ಅಳವಡಿಸಿಕೊಳ್ಳಬೇಕು, ನಾವು ಸಾಧಿಸಬೇಕೆಂಬ ಛಲವಿರಲಿ, ಮುಂದಿನ ದಿನಗಳಲ್ಲಿ ಸಾಧನೆ ಮಾಡಿ ನನ್ನಂತೆ ವೇದಿಕೆಯ ಮೇಲೆ ಬಂದು ಗೌರವನ್ನು ಪಡೆದುಕೊಳ್ಳಬೇಕು’ ಎಂದು ಹಿತ ನುಡಿಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಜುಡಿತ್ ಮೆಂಡೋನ್ಸಾ ಮಾತನಾಡಿ ‘ಈ ಕಾಲದಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಕಾನೂನು ಅರಿವನ್ನು ಪಡೆಯಬೇಕು, ಅಪ್ರಾಪ್ತ ವಯಸಿನಲ್ಲಿ ವಾಹನ ಚಾಲನೆ ಮಾಡಿ ಅಪಘಾತವಾದರೆ ತಂದೆತಾಯಂದರಿಗೆ ಶಿಕ್ಷ ಆಗುತ್ತೆ ಎಂದು ಮಕ್ಕಳು ಪೋಷಕರಿಗೆ ಅರಿವಿರಬೇಕು, ಇವತ್ತು ಪೋಕ್ಸೋ ಕಾಯ್ದೆಯ ಬಗ್ಗೆ ಹೆಣ್ಣು ಮಕ್ಕಳಿಗೆ ಅರಿವಿರಬೇಕು, ಅಲ್ಲದೆ ಚಿಕ್ಕವರಿರುವಾಗಲೇ ಆರ್ಥಿಕತೆಯ ಅರಿವಿಬೇಕು, ಉಳಿತಾಯ ಮಾಡುವ ಗುಣವನ್ನು ಬೆಳೆಸಿಕೊಳ್ಳಬೇಕು. ಕೆಟ್ಟ ಚಟಗಳಿಂದ ದೂರವಿರಬೇಕು, ಸಾಮಾಜಿಕ ಜಾಲತಾಣಗಳನ್ನು ಒಳ್ಳೆದಕ್ಕಾಗಿ ಬಳಸಬೇಕೆ ವಿನಹ ಕೆಟ್ಟದಕ್ಕೆ ಬಳಸಿಕೊಳ್ಳಬಾರದು, ಹೆತ್ತವರು ಮಕ್ಕಳಿಗಾಗಿ ಸಮಯವನ್ನು ನೀಡಬೇಕು, ಅವರ ಬಗ್ಗೆ ಆಗಿದ್ದಾಂಗೆ ತಿಳಿದುಕೊಂಡು, ನಿಮ್ಮ ಸಲಹೆ ಸೂಚನೆಗಳು ನೀಡಿ ಅವರಿಗೆ ದಾರಿ ದೀಪದಂತೆ’ ಇರಬೇಕು ಎಂದು ತಿಳುವಳಿಕೆ ನೀಡಿದರು
ಈ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 6 ನೇ ರ್ಯಾಂಕ್ ಪಡೆದ ಪ್ರಥ್ವಿರಾಜ್ ಆರ್. ಗಾಣಿಗ, 10 ನೇ ರ್ಯಾಂಕ್ ಪಡೆದ ವಿದ್ಯಾಶ್ರೀ, 13 ನೇ ರ್ಯಾಂಕ್ ಪಡೆದ ವೈಷ್ಣವಿ, ವಿಜ್ಞಾನ ವಿಭಾಗದಲ್ಲಿ ಕಾಲೇಜಿನಲ್ಲಿ ಅತ್ಯುತ್ತಮ ಅಂಕ ಪಡೆದ ಕನ್ನಿಕಾ ಇವರಿಗೆ ಫಲ ಪುಷ್ಪ, ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಸನ್ಮಾನಿತರಲ್ಲಿ ಪ್ರಥ್ವಿರಾಜ್ ಆರ್. ಗಾಣಿಗ, ಕ್ರಜ್ಞತೆಯನ್ನು ಸಲ್ಲಿಸಿದರು. ಇದೇ ಸಂಸ್ಥೆಯಲ್ಲಿ 5 ವರ್ಷ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ ಅಧ್ಯಾಪಕಿ ರೇಶ್ಮಾ ಫೆರ್ನಾಂಡಿಸ್ ಅವರನ್ನು ಸನ್ಮಾನಿಸಲಾಯಿತು, ಅವರಿಗೆ ಶೈಕ್ಷಣಿಕ ವರ್ಷದ ಸಂಯೋಕೀಯ ಜವಾಬ್ದಾರಿ ನೀಡಿದ್ದಾರೆ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಅತ್ತ್ಯುತ್ತಮ ಶ್ರೇಣಿಯಲ್ಲಿ ತೆರ್ಗಡೆ ಒಂದಿದ ವಿದ್ಯಾರ್ಥಿಳನ್ನು ಗೌರವಿಸಲಾಯಿತು.
ಕಾಲೇಜಿನ ನೂತನ ಪ್ರಾಂಶುಪಾಲರಾದ ವಂ।ಧರ್ಮಗುರು ರೊಲ್ವಿನ್ ಫೆರ್ನಾಂಡಿಸ್ ಸ್ವಾಗತಿಸಿ, ಇಂದು ಕಾಲ ಬದಲಾಗಿದೆ, ಮೊದಲು ಹತ್ತನೇ ತರಗತಿ ನಮಗೆ ಜೀವನದಲ್ಲಿ ಮುಖ್ಯವಾಗಿತ್ತು, ಆದರೆ ಇಂದು ಜೀವನಕ್ಕೆ ತಿರುವು ನೀಡುವುದು ಪಿಯುಸಿ ಆಗಿದೆ ಎಂದು ಒತ್ತಿ ಹೇಳಿದರು. ಕಾಲೇಜಿನ ನೀತಿ ನಿಯಮಗಳನ್ನು ತಿಳಿಸಿದರು. ಅಧ್ಯಾಪಕಿ ಶರ್ಮೀಳಾ ಮಿನೆಜೇಸ್ ಕಾರ್ಯಕ್ರಮದ ಸಂಯೋಜಕಿಯಾಗಿದ್ದು, ಹಿರಿಯ ಅಧ್ಯಾಪಕ ನಾಗರಾಜ್ ಮತ್ತು ಅಧ್ಯಾಪಕಿ ಬೀನು ಸನ್ಮಾನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಅಧ್ಯಾಪಕಿ ಗೌರಿ ಕಾಮತ್ನಿರೂಪಿಸಿದರು, ಅಧ್ಯಾಪಕ ಯೋಗೇಶ್ ವಂದಿಸಿದರು.
























































































