

ಬಾಲಿವುಡ್ನ ಹಿರಿಯ ನಟ ಸತೀಶ್ ಶಾ ನಿನ್ನೆ ಮದ್ಯಾನ್ಹಾ ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ಸದ್ಯ ಶಾ ಅವರ ಮೃತದೇಹವನ್ನು ಆಸ್ಪತ್ರೆಯಲ್ಲಿ ಇರಿಸಲಾಗಿದೆ ಎಂದು ಮ್ಯಾನೇಜರ್ ತಿಳಿಸಿದ್ದಾರೆ.
ಭಾನುವಾರ ಅಂತ್ಯಕ್ರಿಯೆ ನಡೆಯಲಿದೆ. ಅವರು ದೀರ್ಥಕಾಲದದರೆಗೆ ಮೂತ್ರಪಿಂಡದ ಸಮಸ್ಯೆಗಳಿಂದ ಬಳಲುತ್ತಿದ್ದರು ಮತ್ತು ಇತ್ತೀಚೆಗೆ ಮೂತ್ರಪಿಂಡ ಕಸಿ ಮಾಡಿಸಿಕೊಂಡಿದ್ದರು.ಸಾರಾಭಾಯ್ ವರ್ಸಸ್ ಸಾರಾಭಾಯ್ ಮತ್ತು ಜಾನೆ ಭಿದೋ ಯಾರೋ ಎಂಬ ಟಿವಿ ಸೀರಿಯಲ್ಗಳ ಮೂಲಕ ಸತೀಶ್ ಶಾ ಖ್ಯಾತಿ ಪಡೆದಿದ್ದರು. ಅದರೊಂದಿಗೆ ಅವರು ಮೈ ಹೂನಾ (2004), ಕಲ್ ಹೋ ನಾಹೋ (2003), ಫನಾ (2006), ಮತ್ತು ಓಂ ಶಾಂತಿ ಓಂ (2007) ಸೇರಿದಂತೆ ಹಲವಾರು ಜನಪ್ರಿಯ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. 2008 ರಲ್ಲಿ, ಅವರು ಅರ್ಚನಾ ಪರಾನ್ ಸಿಂಗ್ ಅವರೊಂದಿಗೆ ಕಾಮಿಡಿ ಸರ್ಕಸ್ ಎಂಬ ಟಿವಿ ಶೋನಲ್ಲಿ ಬಡ್ಡ್ ಆಗಿ ಕಾಣಿಸಿಕೊಂಡಿದ್ದರು.ಸತೀಶ್ ಶಾ ಅವರ ನಿಧನಕ್ಕೆ ಹಾಸ್ಯನಟ ಜಾನಿ ದುಃಖ ವ್ಯಕ್ತಪಡಿಸಿದ್ದು, ಅವರು ಸುಮಾರು 40 ವರ್ಷಗಳ ಕಾಲ ನನ್ನ ಸ್ನೇಹಿತ ಎಂದು.ಹೇಳಿದರು. ಸತೀಶ್ ಮೂತ್ರಪಿಂಡ ಕಾಯಿಲೆಯಿಂದಬಳಲುತ್ತಿದ್ದರು. ಅವರಿಗೆ ಕೋಲ್ಕತ್ತಾದಲ್ಲಿ ಮೂತ್ರಪಿಂಡ ಕಸಿ ಮಾಡಲಾಗಿತ್ತು. ಅವರು ಒಂದೂದರೆ ತಿಂಗಳು ಅಲ್ಲೇ ಇದ್ದು, ಸಂಪೂರ್ಣವಾಗಿ ಗುಣಮುಖರಾಗಿ ಮರಳಿದರು. ಇಂದು ರಾತ್ರಿ ಊಟ ಮಾಡಿದ ನಂತರ ಇದ್ದಕ್ಕಿದ್ದಂತೆ ಕುಸಿದು ಬಿದ್ದು ನಿಧನರಾದರು

