

ಕುಂದಾಪುರ,ಅ.21 ; ಕುಂದಾಪುರ ಭಾಗ್ಯವಂತೆ ರೋಜರಿ ಮಾತಾ ಇಗರ್ಜಿಯ ಸ್ರ್ತೀ ಆಯೋಗ ಮತ್ತು ಕುಂದಾಪುರ ಕಥೊಲಿಕ್ ಸ್ತ್ರೀ ಸಂಘಟನೆಯ ಸಹಭಾಗಿತ್ವದಲ್ಲಿ ಅ.19 ರಂದು ಕೊಂಕಣಿ ಕ್ರೈಸ್ತರ ಮದುವೆ ರೋಸ್ ಕಾರ್ಯಕ್ರಮದಲ್ಲಿ ಹಾಡಲಾಗುವ ವೊವಿಯೊ ಮತ್ತು ವೇರ್ಸ್ ಗಾಯನದ ತರಬೇತಿ ಕಾರ್ಯಕ್ರಮ ನಡೆಯಿತು.
ತರಬೇತಿ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರಿನ ಐರಿನ್ ರೆಬೆಲ್ಲೊ ಮತ್ತು ಅನಿಲ್ ಡಿಕುನ್ಹಾ ಆಗಮಿಸಿ, ಸ್ವತಹ ಹಾಡಿ ತೋರಿಸಿ, ಮಹಿಳೆಯರನ್ನು ಗುಂಪುಗಳನ್ನಾಗಿ ವಿಂಗಡಿಸಿ ಅವರಿಂದ ಹಾಡಿಸಿ, ತಿದ್ದಿ ತಿಳುವಳಿಕೆ ನೀಡಿ ತರಬೇತಿ ನೀಡಿದರು. ಕಾರ್ಯಕ್ರಮವು ಚರ್ಚಿನ ಧರ್ಮಗುರು ಅ।ವಂ। ಪೌಲ್ ರೇಗೊರವರ ಮುಂದಾಳತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಪ್ರಸ್ತಾವವಿಕ ಮಾತುಗಳನ್ನು ಮಾತಾನಾಡಿ, ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಸುಮಾರು 40 ಜನರು ಪ್ರಯೋಜನ ಪಡೆದ ಈ ಕಾರ್ಯಕ್ರಮಕ್ಕೆ ಸ್ತ್ರೀ ಸಂಘಟನೆಯ ಅಧ್ಯಕ್ಷೆ ಶಾಂತಿ ಕರ್ವಾಲ್ಲೊ ಸ್ವಾಗತಿಸಿದರು. ಕಾರ್ಯದರ್ಶಿ ವಿಕ್ಟೋರಿಯಾ ಡಿಸೋಜಾ ಧನ್ಯವಾದ ಅರ್ಪಿಸಿದರು.











