

ಬ್ರಹ್ಮಾವರ ; ರಂಗಭೂಮಿ ಶಿಕ್ಷಣವೆಂದರೆ ಮನುಷ್ಯನ ಮೂಲ ಭಾವನೆ ಮತ್ತು ನವರಸಗಳನ್ನು ವ್ಯಕ್ತಪಡಿಸುವ ವಿಧಾನವೇ ಆಗಿದೆ. ಅದು ಕ್ರೋಧ ಅನುಕಂಪ, ಧೈರ್ಯ, ಭೀಭತ್ಸ, ಭಯ, ಶೃಂಗಾರ, ಶಾಂತಿ ಮತ್ತು ದುಃಖ ಆಶ್ಚರ್ಯಗಳನ್ನು ತಮ್ಮ ದೇಹ ಮತ್ತು ಮುಖದ ಭಾವನೆಗಳ ಮೂಲಕ ಅಭಿವ್ಯಕ್ತಗೊಳಿಸುವ ಈ ರಹಸ್ಯ ಪ್ರಪಂಚದಲ್ಲಿ ಹಾಡು, ಕುಣಿತ, ಸಂಗೀತ, ಉಡುಪು ಮತ್ತು ಬಣ್ಣಗಳ ಮೂಲಕ ಕಲ್ಪನೆಯನ್ನು ಪ್ರತಿನಿಧಿಸುತ್ತದೆ ಮತ್ತು ಸೃಜನಾತ್ಮಕತೆಯನ್ನು ವ್ಯಕ್ತಪಡಿಸಿ ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತದೆ ಎಂದು ರೋ. ಚಂದ್ರಶೇಖರ ನಾಯರಿ ಅಧ್ಯಕ್ಷರು, ರೋಟರಿ ರಾಯಲ್ ಬ್ರಹ್ಮಾವರ ಇವರು ಹೇಳಿದರು.
ಅವರು ಇತ್ತೀಚೆಗೆ ಬಾಳ್ಕುದ್ರು ಹಂಗಾರಕಟ್ಟೆ ಅಭಿವೃದ್ಧಿ ಸಂಸ್ಥೆ (ರಿ.) ರೋಟರಿ ರೋಯಲ್ ಬ್ರಹ್ಮಾವರ ಸರಕಾರಿ ಪ್ರೌಢಶಾಲೆ ಕಾವಡಿ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸಂಯುಕ್ತ ಆಶ್ರಯದಲ್ಲಿ ಮಕ್ಕಳಿಗೆ ರಂಗಭೂಮಿ ಶಿಕ್ಷಣ ಮಾಹಿತಿ ಕಾರ್ಯಾಗಾರ – 2025 ಉದ್ಘಾಟಿಸಿ ಮಾತಾಡಿದರು.
ಮುಖ್ಯ ಅತಿಥಿಯಾಗಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಸುಕುಮಾರ್ ಶೆಟ್ಟಿ, ಕಾವಡಿ ಮಾತಾಡಿ ರಂಗಭೂಮಿ ಎಂದರೆ ಕಲ್ಪನೆಯ ಅಥವಾ ಕಥೆ ಹೇಳುವಿಕೆಯ ವಿಸ್ತರಣೆಯಾಗಿದೆ, ಅಲ್ಲದೇ ಅದು ಪುರಾಣ, ಮಹಾಭಾರತ, ರಾಮಾಯಣಗಳನ್ನೊಳಗೊಂಡ ವಸ್ತು ಪ್ರಪಂಚವನ್ನು ಪ್ರತಿನಿಧಿಸುತ್ತದೆ. ಎಂದರು.
ಇನ್ನೋರ್ವ ಮುಖ್ಯ ಅತಿಥಿ ರಾಘವೇಂದ್ರ ಸಾಮಗ, ನಿವೃತ್ತ ಜೀವ ವಿಮಾ ಉದ್ಯೋಗಿ ಮಾತಾಡಿ ರಂಗಭೂಮಿ ಎಂದರೆ ಜನರು ಅಭಿನಯದ ಮುಖಾಂತರ ವಿಚಾರಗಳನ್ನು ಹೊರ ಹೊಮ್ಮುತ್ತಾರೆ ಎಂದು ಅಭಿಪ್ರಾಯ ಪಟ್ಟರು.
ಸಭಾದ್ಯಕ್ಷತೆಯನ್ನು ಮೋಹನ್ ಪೂಜಾರಿ ಅಧ್ಯಕ್ಷರು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸರಕಾರಿ ಪ್ರೌಢಶಾಲೆ ಕಾವಡಿ ಮಾತಾಡಿ ರಂಗ ಶಿಕ್ಷಣ ಎಂದರೆ ದೇಶಿಯ ಶಿಕ್ಷಣ ಮತ್ತು ಪ್ರದರ್ಶನ ಕಲೆಗಳ ಮೂಲಕ ವಿಚಾರ ಮತ್ತು ಭಾವನೆಗಳನ್ನು ವ್ಯಕ್ತಪಡಿಸಿ ಸೃಜನಾತ್ಮಕ ಬುದ್ಧಿ ಮತ್ತು ಜಾಗೃತಿಯನ್ನು ಮೂಡಿಸುವ ಪ್ರಕ್ರಿಯೆ ಎಂದು ತಿಳಿಸಿದರು. ಇದನ್ನು ವಿದ್ಯಾರ್ಥಿ ದೆಸೆಯಿಂದಲೇ ಇಂತಹ ದೇಶೀಯತೆಯನ್ನು ತಿಳಿಸುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದರು.
ಸಂಪನ್ಮೂಲ ವ್ಯಕ್ತಿ ರಾಮ್ ಶೆಟ್ಟಿ ಹಾರಾಡಿ ಮತ್ತು ಅನಿಷಾ ಬಾಯರಿ ಪೇತ್ರಿ ಹಾಗೂ ಶಾರದಾ ಅಂಪಾರ್ ಇವರು ಮಕ್ಕಳನ್ನು ಗುಂಪುಗಳನ್ನಾಗಿ ವಿಂಗಡಿಸಿ ವಿವಿಧ ಚಟುವಟಿಕೆಯನ್ನು ಪ್ರದರ್ಶಿಸಿ ರಂಗಭೂಮಿಯ ವಿವಿಧ ಭಂಗಿ, ಸ್ವರ, ಆಲಿಸುವಿಕೆ ಮತ್ತು ಭಾವಾರ್ಥ ಪ್ರಕಟಣೆ ಬಗ್ಗೆ ವಿವರಿಸಿ ಪ್ರಾತ್ಯಕ್ಷಿತೆ ನೀಡಿ ಮಾರ್ಗದರ್ಶನ ನೀಡಿದರು.
ಸಭೆಯಲ್ಲಿ ಶ್ರೀಮತಿ ಸುಗುಣ ಬಿ.ಕೆ ಶೇಖರ್, ಮಾಲಕರು, ಗುರುಮಾರುತಿ ಪ್ಲಾಸ್ಟಿಕ್ ಕಾವಡಿ, ಉಮಾಶಂಕರ್ ಶೆಟ್ಟಿ, ಕಾರ್ಯದರ್ಶಿ, ರೋಟರಿ ರೋಯಲ್ ಬ್ರಹ್ಮಾವರ, ಜಯಶ್ರೀ ಜಿ. ಮುಖ್ಯ ಶಿಕ್ಷಕರು, ಸರಕಾರಿ ಪ್ರೌಢ ಶಾಲೆ ಕಾವಡಿ, ರಮೇಶ್ ವಕ್ವಾಡಿ ಕಾರ್ಯದರ್ಶಿ ಅಭಿವೃದ್ಧಿ ಸಂಸ್ಥೆ (ರಿ.) ಬಾಳ್ಕುದ್ರು ಹಂಗಾರಕಟ್ಟೆ ಇವರು ಸ್ವಾಗತಿಸಿ ಪ್ರಸ್ತಾವನೆ ಮಾಡಿ ವಂದಿಸಿದರು. ಶ್ರೀಮತಿ ದಿವ್ಯ ಉಡುಪಿ ನಿರೂಪಿಸಿದರು. ಸುಮಾರು 59 ವಿದ್ಯಾರ್ಥಿಗಳು ಈ ಶಿಬಿರದಿಂದ ಪ್ರಯೋಜನ ಪಡೆದರು.

