

ಶ್ರೀನಿವಾಸಪುರ 1: ತಾಲೂಕಿನ ಲಕ್ಷ್ಮೀಸಾಗರ ಗ್ರಾಮಪಂಚಾಯಿತಿ ಮುಂಭಾಗ ಮಂಜಲನಗರ ರಘುನಾಥ್ ನನ್ನ ಮೇಲೆ ಆರೋಪ ಮಾಡಿರುವುದು ನಿರಾಧಾರ ಎಂದು ಪಿಡಿಒ ಮಹೇಶ್ಕುಮಾರ್.ಕೆ ಹೇಳಿಕೆ ನೀಡಿದರು.
ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಗುರುವಾರ ಪತ್ರಿಕಾ ಗೋಷ್ಟಿ ನಡೆಸಿ ಮಾತನಾಡಿದರು.
ಮಂಜಲನಗರ ರಘುನಾಥ್ರವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದಿರುವುದು ಅವರ ಸಾಂವಿಧಾನಿಕ ಹಕ್ಕು, ಅದಕ್ಕೆ ನನ್ನ ಆಕ್ಷೇಪಣೆ. ಇಲ್ಲ. ಆದರೆ ಪ್ರತಿಭಟನೆಯು ಕಾನೂನು ರೀತಿಯ ಇರಬೇಕು ಮತ್ತು ಯಾವುದಾದರೂ ಆಧಾರ ಸಹಿತ ಆರೋಪಗಳಿರಬೇಕು.
ಪ್ರತಿದಿನ ಕಚೇರಿಗೆ ಬಂದು ನನ್ನ ಕೆಲಸ ಕಾರ್ಯಗಳನ್ನು ಕಾಯವಾಚ ಮನಸ ಕಾರ್ಯನಿರ್ವಹಿಸುತ್ತಿದ್ದೇನೆ. ತಾಲೂಕಿನಲ್ಲಿ ಪಿಡಿಒರವರ ಕೊರತೆ ಇರುವುದರಿಂದ ಇಒ ರವರು ಶಾಸಕರೊಂದಿಗೆ ಸಮಾಲೋಚಿಸಿ ನನಗೆ 3 ಪಂಚಾಯಿತಿಗಳು ಜವಾಬ್ದಾರಿ ಕೊಟ್ಟಿದ್ದಾರೆ. ಆದರೂ ಸಹ ನಾನು ಎಲ್ಲಾ ನನಗೆ ಜವಾಬ್ದಾರಿ ಕೊಟ್ಟಿರುವ ಪಂಚಾಯಿತಿಗಳಲ್ಲಿ ಕಾಯವಾಚ ಮನಸ ಕಾರ್ಯನಿರ್ವಹಿಸುತ್ತಿದ್ದೇನೆ ಎಂದರು.
ನಾನು ಇಲ್ಲಿ ಒಬ್ಬ ನೌಕರನಾಗಿ ಬಂದಿದ್ದೇನೆಯೇ ಹೊರತು ನಾನು ಇಲ್ಲಿ ಶಾಶ್ವತವಾಗಿ ಇರುವವನಲ್ಲ ಎಂದರು. ಬುಧವಾರ ಗ್ರಾಮಸ್ಥರು ಸೇರಿ ಪಂಚಾಯಿತಿಗೆ ಸಂಬಂದಿಸಿದಂತೆ ಕೆಲವರು ಪ್ರತಿಭಟನೆ ಮಾಡಿರುವುದು ನಿರಧಾರ ಎಂದರು.
ಈ ಪತ್ರಿಕಾ ಗೋಷ್ಟಿಯಲ್ಲಿ ಇಒ ಕೆ.ಸರ್ವೇಶ್, ಪಿಡಿಒಗಳಾದ ಏಜಾಜ್ಪಾಷ, ಸಂಪತ್ಕುಮಾರ್, ರವಿಕುಮಾರ್, ಶ್ರೀನಿವಾಸರೆಡ್ಡಿ, ರಾಮಪ್ಪ, ಚಿನ್ನಪ್ಪ, ಕೃಷ್ಣ, ಗೋಪಾಲರೆಡ್ಡಿ, ವಿಜಯಮ್ಮ,ಕಲ್ಯಾಣ ಇದ್ದರು.

