

ಬೈಂದೂರು ; ಇಲ್ಲಿನ ಹೋಲಿಕ್ರಾಸ್ ಚರ್ಚಿನ ವಾರ್ಷಿಕ ತೆರಾಲಿ ಹಬ್ಬವು ಫೆಬ್ರವರಿ 11ನೇ ಬುಧವಾರ ಬೆಳಿಗ್ಗೆ 10.15ಕ್ಕೆ ಚರ್ಚಿನ ಧರ್ಮಗುರು ವಂದನೀಯ ವಿನ್ಸೆಂಟ್ ಕುವೆಲ್ಲೊರವರ ನೇತ್ರತ್ವದಲ್ಲಿ ಜರುಗಲಿರುವುದು. ಇದಕ್ಕೆ ಪೂರ್ವಭಾವಿಯಾಗಿ ಫೆಬ್ರವರಿ 10 ಮಂಗಳವಾರ ಸಂಜೆ 7ಕ್ಕೆ ಹಬ್ಬದ ಪೂರ್ವಭಾವಿ ಧಾರ್ಮಿಕ ವಿಧಿವಿಧಾನಗಳು ಜರುಗಲಿರುವುದು. ಫೆಬ್ರವರಿ 15 ಭಾನುವಾರ ಸಂಜೆ 5ಕ್ಕೆ ಇತಿಹಾಸ ಪ್ರಸಿದ್ಧ ಇಗರ್ಜಿಗುಡ್ಡೆಯ ಮೇಲೆ ಗುಡ್ಡೆ ಫೆಸ್ತ್ ಜರುಗಲಿರುವುದು.
ಸಂಜೆ 6.೦೦ ಕ್ಕೆ ಹಬ್ಬದ ಪ್ರಯುಕ್ತ ಖ್ಯಾತ ನಾಟಕಕಾರ ಬರ್ನಾಡ್ ಜೆ.ಕೋಸ್ತಾ ಇವರು ರಚಿಸಿದ “ಸ್ವಾರ್ಥಾಚಿ ದಾವ್ಲಿ” ಉತ್ತಮ ಸಾಮಾಜಿಕ, ಕೂತುಹಲ ಭರಿತ, ಹಾಸ್ಯಮಯ ನಾಟಕ “ಕ್ರೀಸ್ತಿ ಕಲಾಂಗಣ್” ಬೈಂದೂರು, ಪಂಗಡದ ಕಲಾಕಾರರು ಆಡಿ ತೋರಿಸುವರು. ಈ ನಾಟಕ ಹಲವು ಕಡೆ ಯಶಸ್ವಿ ಪ್ರದರ್ಶನಗಳಾಗಿವೆ. ಬೈಂದೂರಿನಲ್ಲಿ ಉತ್ತಮ ಕಲಾವಿದರಿದ್ದು ಉತ್ತಮ ಸಂಗೀತದ ಜೊತೆ ಈ ನಾಟಕ ಭರ್ಜರಿ ಪ್ರದರ್ಶನವಾಗಲಿದೆ.


