

ಕುಂದಾಪುರ, ಜೂ.28 : ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೂನ್ 28 ರಂದು ಶಾಲಾ ಶಿಕ್ಷಕ ರಕ್ಷಕ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರು ಹಾಗೂ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರುಗಳಾಗಿರುವ ಅತೀ ವಂದನೀಯ ಗುರು ಪೌಲ್ ರೆಗೋರವರು ಇಂದಿನ ಮಕ್ಕಳು ನಾಳಿನ ಪ್ರಜೆಗಳು, ಮಕ್ಕಳ ಸರ್ವತೋಮುಖ ಬೆಳವಣಿಗೆಯಾಗುವಲ್ಲಿ ಪೋಷಕರು ಮತ್ತು ಶಿಕ್ಷಕರು ಸಮಾನ ಪಾತ್ರ ವಹಿಸುತ್ತಾರೆ. ಮಕ್ಕಳಿಗೆ ಸಮಯವನ್ನು ನೀಡಿ ಎಂದು ಪೋಷಕರಿಗೆ ಅಧ್ಯಕ್ಷೀಯ ನುಡಿಯನ್ನು ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಮಾಹೆ ಮಣಿಪಾಲ ನರ್ಸಿಂಗ್ ಕಾಲೇಜಿನ ಉಪನ್ಯಾಸಕಿಯಾಗಿರುವ ಪ್ರತಿಭಾ ಲಿಡಿಯಾ ಬ್ರಾಗ್ಸ್ ಇವರು ಪೋಷಕರು ತಮ್ಮ ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕು, ಮಕ್ಕಳಲ್ಲಿ ಪೋಷಕರು ತಮ್ಮ ಕಷ್ಟ ಸುಖವನ್ನು ಹೇಳಿ ಅವರ ಭಾವನೆಯನ್ನು ಅರ್ಥಮಾಡಿಕೊಂಡು ಅವರ ಮೇಲೆ ಒತ್ತಡ ಹೇರಬಾರದು ಮತ್ತು ಮಕ್ಕಳನ್ನು ಯಾವ ರೀತಿ ಪ್ರೀತಿ ಮಾಡಬೇಕು, ಯಾವ ರೀತಿಯ ಆಹಾರವನ್ನು ನೀಡಬೇಕು “ಮಕ್ಕಳ ಮೇಲೆ ಭರವಸೆಯಿಡಿ ಕುರುಡು ನಂಬಿಕೆ ಇಡಬೇಡಿ” ಎಂದು ಪೋಷಕರಿಗೆ ಕಿವಿ ಮಾತು ಹೇಳಿದರು.
ಶಾಲಾ ಮುಖ್ಯ ಶಿಕ್ಷಕಿ ತೆರೆಜ್ ಶಾಂತಿಯವರು ಶಾಲೆಯ ನೀತಿ ನಿಯಮಗಳ ಬಗ್ಗೆ ಪೋಷಕರಿಗೆ ತಿಳಿಸಿದರು. ಶಾಲಾ ವರದಿಯನ್ನು ಕನ್ನಡ ಅಧ್ಯಾಪಕ ಲೂವಿಸ್ ಪ್ರಶಾಂತ್ ರೆಬೆರೋರವರು ವಾಚಿಸಿದರು. ಸಹ ಶಿಕ್ಷಕಿ ರಮ್ಯ ಮುಖ್ಯ ಅತಿಥಿಗಳ ಪರಿಚಯವನ್ನು ಮಾಡಿ ಸ್ವಾಗತಿಸಿದರು. ಸಹ ಶಿಕ್ಷಕ ಓರನ್ ಡಿ’ಸೋಜಾ ನಿರೂಪಿಸಿ, ಸಹ ಶಿಕ್ಷಕ ಲೂವಿಸ್ ಪ್ರಶಾಂತ್ ರೆಬೆರೋ ವಂದಿಸಿದರು.

















