

ಮಂಗಳೂರು: ಸಂತ ಅಲೋಶಿಯಸ್ ಗೊನ್ಝಾಗ ಶಾಲೆ ಮಂಗಳೂರಿನ 8ನೇ ತರಗತಿ ವಿದ್ಯಾರ್ಥಿನಿ ಸ್ವರ ಶೆಟ್ಟಿ ಅವರು20 ಸೆಪ್ಟೆಂಬರ್2026 ರಂದು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ಸ್ವರ ಅವರು 400 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರುಅಲ್ಲದೆ, ಉದ್ದ ಜಿಗಿತ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದು ಕಂಚಿನ ಪದಕವನ್ನು ಗಳಿಸಿದರು. ತಮ್ಮ ಕ್ರೀಡಾ ಪ್ರತಿಭೆ, ದೃಢಸಂಕಲ್ಪ ಹಾಗೂ ಪರಿಶ್ರಮದ ಮೂಲಕ ಸ್ವರ ಅವರು ಶಾಲೆಗೆ ಕೀರ್ತಿ ತಂದಿದ್ದಾರೆ.
ಸ್ವರ ಶೆಟ್ಟಿ ಅವರ ಈ ಸಾಧನೆಯನ್ನು ಶಾಲೆಯ ಪ್ರಾಂಶುಪಾಲರಾದ ವಂ. ಫಾ. ರೋಹನ್ ಡಿ’ಅಲ್ಮೇಡಾ ಎಸ್.ಜೆ. ಉಪ ಪ್ರಾಂಶುಪಾಲರಾದ ಶ್ರೀಮತಿ ಲಾರೆಲ್ ಡಿ’ಸೋಜಾ, ಶ್ರೀಮತಿ ಅಪರ್ಣಾ ಸುರೇಶ್, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿ, ಅವರ ಮುಂದಿನ ಕ್ರೀಡಾ ಪಯಣಕ್ಕೆ ಶುಭ ಹಾರೈಸಿದರು.
St Aloysius Gonzaga Student Svara Shetty Wins Gold at District Athletics Meet
Mangaluru: Svara Shetty of Class VIII, St Aloysius Gonzaga School, Mangaluru, put up an impressive performance at the District Level Athletics Meet held at Mangala Stadium on September 20.
Svara won the gold medal in the 400m event and secured a bronze medal in the long jump, showcasing her talent, determination and sporting prowess. The Principal Rev. Fr Rohan D’Almeida SJ, Vice-principals Ms Laurel D Souza, Ms Aparna Suresh, staff and students congratulated Svara on her remarkable achievement

