

ಪಡುಕೋಣೆ; ಪಡುಕೋಣೆ ಸಂತ ಅಂತೋನಿ ಚರ್ಚಿನಲ್ಲಿ ದಿನಾಂಕ 21.5.2026 ರಿಂದ ದಿ. 23.5.2026 ರ ವರೆಗೆ 1ನೇ ತರಗತಿಯಿಂದ 10ನೇ ತರಗತಿಯ ತರಗತಿಯ ಮಕ್ಕಳಿಗೆ 3 ದಿನಗಳ ಬೇಸಿಗೆ ಶಿಬಿರವನ್ನು ನಡೆಸಲಾಯಿತು.
ಶಿಬಿರವನ್ನು ಅತಿಥಿಗಳು ದೀಪ ಬೆಳಗಿಸಿ,ಗುಲಾಬಿ ಹೂವಿನ ಗಿಡ ಕುಂಡದಲ್ಲಿ ನೆಟ್ಟು ಆ ಗಿಡಕ್ಕೆ ನೀರು ಎರೆದು ಉದ್ಘಾಟಿಸಿದರು. ಚರ್ಚಿನ ಧರ್ಮಗುರುಗಳಾದ ವಂ। ಫಾ।ಪ್ರಾನ್ಸಿಸ್ ಕರ್ನೆಲಿಯೊ, ಚರ್ಚಿನ ಪಾಲನಾ ಮಂಡಳಿ ಉಪಾಧ್ಯಕ್ಷರಾದ ಜೋಸೆಫ್ ಡಿ’ಸಿಲ್ವಾ ಶುಭ ಕೋರಿದರು. ಅನುಗ್ರಹ ಕೇಂದ್ರ ಉಡುಪಿಯಿಂದ ಮಿಶಿನರಿ ಸಂಘದ ಕೇಂದ್ರಿಯ ನಿರ್ದೇಶಕರಾದ ವಂದನೀಯ ಫಾ।ಅಶ್ವಿನ್ ಅರಾನ್ನ, ಮಕ್ಕಳಿಗೆ ಕೆಲವು ಚಟುವಟಿಕೆಗಳನ್ನು ಮಾಡಿಸಿ, ಉತ್ತಮ ಮೌಲ್ಯಗಳನ್ನು ಬೋಧಿಸಿದರು. ಮಿಶಿನರಿ ಮಕ್ಕಳು ಇತರರಿಗೆ ಸಹಾಯ ನೀಡುವಾಗ, ಮನೆಯಲ್ಲಿ ಹಿರಿಯವರು ಕೊಟ್ಟ ಹಣವನ್ನು ಉಪಯೋಗಿಸದೇ ತಾವೇ ಸ್ವತಾಹ ತಮಗೆ ನೀಡಿದ ಹಣದಲ್ಲಿ ಉಳಿಸಿ ಇತರರಿಗೆ ಸಹಾಯ ಮಾಡಬೇಕೆಂದು ತಿಳಿಸಿ, ಅನೇಕ ಮೌಲ್ಯಾಧಾರಿತ ಉತ್ತಮ ವಿಷಯಗಳನ್ನು ಮಕ್ಕಳಿಗೆ ಮಾಹಿತಿ ನೀಡಿದರು.
ಬ್ರದರ್ ಲಿಸ್ಟ್ ನ್ ಗೊನ್ಸಾಲಿಸ್, ಬ್ರದರ್ ಆಶಿಷ್, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಿಶಿನರಿ ಸ಼ಂಘದ ನಿರ್ದೇಶಕರಾದ ವಂದನೀಯ ಫಾ!ಅಶ್ವಿನ್ ರವರು ಮಕ್ಕಳಿಗೆ ಕೆಲವು ಚಟುವಟಿಕೆಗಳನ್ನು ಮಾಡಿಸಿ, ಉತ್ತಮ ಮೌಲ್ಯಗಳನ್ನು ಬೋಧಿಸಿದರು. ಮಿಶಿನರಿ ಮಕ್ಕಳು ಇತರರಿಗೆ ಸಹಾಯ ನೀಡುವಾಗ, ಮನೆಯಲ್ಲಿ ಹಿರಿಯವರು ಕೊಟ್ಟ ಹಣವನ್ನು ಉಪಯೋಗಿಸದೇ ತಾವೇ ಸ್ವತಾಹ ತಮಗೆ ನೀಡಿದ ಹಣದಲ್ಲಿ ಉಳಿಸಿ ಇತರರಿಗೆ ಸಹಾಯ ಮಾಡಬೇಕೆಂದು ತಿಳಿಸಿ, ಅನೇಕ ಮೌಲ್ಯಾಧಾರಿತ ಉತ್ತಮ ವಿಷಯಗಳನ್ನು ಮಕ್ಕಳಿಗೆ ಮಾಹಿತಿ ನೀಡಿದರು. 2ನೇ ದಿನದ ಶಿಬಿರದಲ್ಲಿ ನಿರ್ದೇಶಕರಾದ ವಂದನೀಯ ಫಾ।ಜೀತೇಶ್ ಕ್ಯಾಸ್ತೆಲಿನೊ ಬೈಬಲ್ ಪುಸ್ತಕದಲ್ಲಿ ಬರುವ ಹೊಸ ಒಡಂಬಡಿಕೆ ಕುರಿತು,ಒಡಂಬಡಿಕೆಯಲ್ಲಿ ವಿಷಯಗಳನ್ನು ಸವಿಸ್ತಾರವಾದ ವಿವರಣೆ ನೀಡಿದರು. 3ನೇ ದಿನದಲ್ಲಿ , Y.C.S ಮತ್ತು I.C.M.Y ನ ನಿರ್ದೇಶಕರಾದ ವಂದನೀಯ ಫಾ।ಸ್ಟೀವನ್ ಡಿ’ಸೋಜ ರವರು ದೖವಿಕ ಕರೆ ಎಂಬ ವಿಷಯದ ಕುರಿತು ಮಾಹಿತಿಯನ್ನು ಕೊಟ್ಟರು. ಬ್ರದರ್ ಲಿಸ್ಟನ್ ಮತ್ತು ಬ್ರದರ್ ಆಶಿಷ್ ರವರು 3 ದಿನದ ಶಿಬಿರ ದಲ್ಲಿ ಮಕ್ಕಳಿಗೆ ಅನೇಕ ರೀತಿಯ ಚಟುವಟಿಕೆ, ಆಟ ಮತ್ತು ನೀತಿ, ಚಟುವಟಿಕೆಗಳಲ್ಲಿ ಭಾಗವಹಿಸಿ ಮಾಹಿತಿ ನೀಡಿದರು. ಶಿಬಿರದಲ್ಲಿ ಆಟಗಳು, ಕಿರು ನಾಟಕ, ನೃತ್ಯ, ನೀತಿ ಕಥೆ ಉತ್ತಮ ರೀತಿಯ ಚಟುವಟಿಕೆಗಳನ್ನು ಮಕ್ಕಳು ಪ್ರದರ್ಶಿಸಿದರು. ವಿಜೇತ ರಾದವರಿಗೆ ಚರ್ಚಿನ ಧರ್ಮ ಗುರುಗಳಾದ ಫಾ!ಪ್ರಾನ್ಸಿಸ್ ಕರ್ನೆಲಿಯೊರವರು ಸಮಾರೋಪ ಸಮಾರಂಭ ಕಾರ್ಯ ಕ್ರಮದಲ್ಲಿ ಬಹುಮಾನ ವಿತರಿಸಿದರು. ಶಿಬಿರಕ್ಕೆ ಸಿಸ್ಟರ್ ಲೂಸಿ,ಸಿಸ್ಟರ್ ಪಾವನಾ,ಡೇರಿ ರೆಬೆಲ್ಲೊ, ಗ್ಲ್ಯಾಡ್ಸನ್, ಪ್ರಿಯಾಂಕಾ, ಸಿಂತಿಯಾ ವಾಜ್, ಟ್ರಿಜಾ ಸಿಕ್ವೇರಾ, ಶಾಂತಿ ಡಿ’ ಸಿಲ್ವಾ, ಫಿಲೋಮಿನಾ ಡಿ’ಸೋಜಾ, ಶಿಬಿರದಕ್ಕೆ ಸಹಕರಿಸಿದರು.























