

KPC ಆಂಗ್ಲ ಮಾಧ್ಯಮ ಶಾಲೆ ಹೊಸಂಗಡಿಯಲ್ಲಿ ನಡೆದ ಕುಂದಾಪುರ ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ 2025 – 26 ರ U14 ಬಾಲಕಿಯರ ವಿಭಾಗದಲ್ಲಿ ನಮ್ಮ ತುಳಸಿ ವಿದ್ಯಾಮಂದಿರ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರಾದ ಪ್ರಣೀತ ( 8th std ), ಸೃಷ್ಟಿ ಶೆಟ್ಟಿ ( 7th std), ಹಾಗೂ ಅನ್ವಿತ (6th std) ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇವರಿಗೆ ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗ ದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

