

ಕುಂದಾಪುರ; ಸೈoಟ್ ಮೇರಿಸ್ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಜೂನ್ 23 ರಂದು ವಿದ್ಯಾರ್ಥಿ ಸಂಸತ್ತು ಉದ್ಘಾಟನಾ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರೋಜರಿ ಚರ್ಚಿನ ಪ್ರಧಾನ ಧರ್ಮಗುರುಗಳು ಹಾಗೂ ವಿದ್ಯಾಸಂಸ್ಥೆಗಳ ಜಂಟಿ ಕಾರ್ಯದರ್ಶಿ ಅ। ವಂ। ಫಾ. ಪಾವ್ಲ್ ರೇಗೊ ಮಾತನಾಡಿ ಕಾಲೇಜು ಸಂಸತ್ತಿನ ಅಧ್ಯಕ್ಷರು ಹಾಗೂ ಎಲ್ಲಾ ಪದಾಧಿಕಾರಿಗಳಿಗೆ ಶುಭ ಹಾರೈಸಿ, “ನಾಯಕತ್ವ ಗುಣಗಳು ನಿಮ್ಮಲ್ಲಿ ಬೆಳೆಯಬೇಕು.ಇಂದು ನೀವು ಸ್ವೀಕರಿಸಿರುವ ಈ ಹುದ್ದೆ ಸಮಾಜ ಸೇವೆಯಲ್ಲಿ ತೊಡಗುವಂತಾಗಬೇಕು.ನೀವು ವಿದ್ಯಾ ಸಂಸ್ಥೆಯಲ್ಲಿ ಮೀನುಗಬೇಕು, ನಿಮ್ಮ ಗುರಿ ಸಾಕಾರಗೊಳ್ಳಬೇಕು, ಎಲ್ಲರಿಗೂ ಶುಭವಾಗಲಿ” ಎಂದು ಹೇಳಿ ಪ್ರಮಾಣವಚನ ಬೋಧಿಸಿ ಎಲ್ಲಾ ಪದಾಧಿಕಾರಿಗಳಿಗೆ ಹರಸಿದರು
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬಸ್ರುರು ಫಿಲಿಫ್ ನೇರಿ ಸೆಂಟ್ರಲ್ ಸ್ಕೂಲ್ ನ ಪ್ರಾಂಶುಪಾಲರಾಗಿರುವ ವಂ। ಧರ್ಮಗುರು ಡ್ಯಾನ್ಸಿ ಸುನಿಲ್ ಮಾರ್ಟೀಸ್ “ನೀವೆಲ್ಲ ಭಾವಿ ಪ್ರಜೆಗಳು, ಸತತ ಪ್ರಯತ್ನ ನಿಮ್ಮದಾಗಿರಲಿ, ಧೈರ್ಯದಿಂದ ಮುನ್ನಡೆದು ನಿಮ್ಮ ಜೀವನ ಸಮಾಜ ಸೇವೆಗೆ ಮೀಸಲಾಗಿಡಿ. ಹಂತ ಹಂತವಾಗಿ ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಶ್ರಮವಹಿಸಿ ಕಾರ್ಯ ಸಾಧಿಸಿದರೆ ಗೆಲುವು ಖಂಡಿತ ಎಂದು’ ಪದಾಧಿಕಾರಿಗಳಿಗೆ ಪುಷ್ಪ ನೀಡಿ ಶುಭ ಹಾರೈಸಿಸಿದರು
ವಿದ್ಯಾರ್ಥಿ ನಾಯಕನಾಗಿ ಆಯ್ಕೆಯಾಗಿದ್ದ ಮಿ. ಇಷಾನ್ ಡಿಸೋಜ ತನ್ನನ್ನು ಮತನೀಡಿ ಆರಿಸಿದ್ದಕ್ಕೆ ವಂದನೆ ಸಲ್ಲಿಸಿ, ಕಾಲೇಜಿನ ಅಭಿವೃದ್ಫಿಗೆ ಶ್ರಮಿಸುತ್ತೇನೆ. ಶಿಸ್ತನ್ನು ಕಾಪಾಡುತ್ತೇನೆ ಎಂದು ನುಡಿದರು.
ಸಭೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ವಂ।ಧರ್ಮಗುರು ರೋಲ್ವಿನ್ ಫೆರ್ನಾಂಡಿಸ್, ಕಾಲೇಜಿನ ಶೈಕ್ಷಣಿಕ ಮಾರ್ಗದರ್ಶಕರಾದ ಪ್ರಾದ್ಯಪಕಿ ರೇಷ್ಮಾ ಫೆರ್ನಾಂಡಿಸ್ ವಿದ್ಯಾರ್ಥಿ ಸಂಸತ್ತಿನ ಪದಾಧಿಕಾರಿಗಳಿಗೆ ಪುಷ್ಪ ನೀಡಿ ಸನ್ಮಾನಿಸಿದರು.ಸಂಸತ್ತಿನ ಬೇರೆ ಬೇರೆ ವಿದ್ಯಾರ್ಥಿ ಮಂತ್ರಿಗಳು ಉಪಸ್ಥಿತರಿದ್ದರು
ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡು, ಉಪನ್ಯಾಸಕಿ ಕಾರ್ಯಕ್ರಮದ ಸಂಯೋಜಕಿ ಪ್ರಫುಲ್ಲಾ ಸ್ವಾಗತಿಸಿದರು, ವಿದ್ಯಾರ್ಥಿ ಪರಿಷತನ ಕಾರ್ಯದರ್ಶಿ ಪ್ರಿನ್ಸಿಯ ಬರೆಟ್ಟೋ ವಂದಿಸಿದರು, ಪ್ರಥಮ ಪಿ.ಯು ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಜೆನೆಸ್ಸಾ ಬರೆಟ್ಟೊ ಕಾರ್ಯಕ್ರಮ ನಿರೂಪಿಸಿದರು.


































