

ಕುಂದಾಪುರ ; ಸಂತ ಜೋಸೆಫರ ಪ್ರೌಢಶಾಲೆ ಕುಂದಾಪುರ ಇಂಟ್ರಾಕ್ಟ್ ಕ್ಲಬ್ ಉದ್ಘಾಟನೆ (30-07-2025 ರೋಟರಿ ಕ್ಲಬ್ ಕುಂದಾಪುರ ರಿವರ್ಸ್ ಸೈಡ್ ವತಿಯಿಂದ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ಇಂಟ್ರಾಕ್ಟ್ ಕ್ಲಬ್ ಉದ್ಘಾಟನಾ ಕಾರ್ಯಕ್ರಮ (30-07-2025) ನೆರವೇರಿತು. ರೋಟೀರಿಯನ್ ನರಸಿಂಹ ಹೊಳ್ಳ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯನಿ ಭಗಿನಿ ಐವಿ ಇವರು ಸ್ವಾಗತಿಸಿದರು. ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ರೋಟರಿ ಕ್ಲಬ್ ಕುಂದಾಪುರ ರಿವರ್ ಸೈಡ್ ಇದರ ಅಧ್ಯಕ್ಷರಾಗಿರುವ ರೋ. ಸದಾನಂದ ಉಡುಪ ಇವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಇಂಟ್ರಾಕ್ಟ್ ಕ್ಲಬ್ಬಿನ ಪಾತ್ರ ಮಹತ್ತರವಾದದ್ದು .ವಿದ್ಯಾರ್ಥಿ ಜೀವನದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಕೊಂಡು ಮುಂದೆ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಬೆಳೆಯಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಮುಂದೆ ಉತ್ತಮ ಮಾರ್ಗದರ್ಶಕರಾಗುತ್ತಾರೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಜೋನಲ್ ಲೆಫ್ಟಿನೆಂಟ್ ರೋ. ಕೌಶಿಕ್ ಎಡಿಯಾಳ್ ಇವರು ಪದಪ್ರಧಾನ ಕಾರ್ಯಕ್ರಮವನ್ನು ನೆರವೇರಿಸಿದರು. ಅವರು ಮಾತನಾಡುತ್ತಾ, ನೀವು ಮೂರು ರೀತಿಯಲ್ಲಿ ಅದೃಷ್ಟವಂತರು ತಂತ್ರಜ್ಞಾನದ ಬಳಕೆ, ಅತ್ಯುತ್ತಮ ಶಿಕ್ಷಕರು, ಹಾಗೂ ಇಂಟ್ರಾಕ್ಟ್ ಕ್ಲಬ್ ನಿಮ್ಮ ಪಾಲಿಗೆ ಒಲಿದಿದೆ. ಉತ್ತಮವಾಗಿ ಬಳಸಿಕೊಂಡರೆ ನಿಮ್ಮ ಜೀವನದಲ್ಲಿ ಗುರಿ ಮುಟ್ಟಲು ಸಾಧ್ಯವಾಗುತ್ತದೆ ಎಂದರು. ರೋಟರಿ ಕ್ಲಬ್ಬಿನ ಕಾರ್ಯದರ್ಶಿಯಾಗಿರುವ ರೋ. ಭಾಸ್ಕರ್ ಬಿ, ರೋ. ರಾಜು ಪೂಜಾರಿ, ರೋ. ರೊನಾಲ್ಡ್ ಡಿ ಮೆಲ್ಲೋ, ರೋ. ವಿನ್ಸೆಂಟ್ ಬರೇಟೋ ಇವರು ಉಪಸ್ಥಿತರಿದ್ದರು. ಇಂಟ್ರಾಕ್ಟ್ ಕೋ ಆರ್ಡಿನೇಟರ್ ಮೈಕಲ್ ಸರ್ ಇವರು ಸ್ವಾಗತಿಸಿದರು.
ಶಿಕ್ಷಕರಾದ ಅಶೋಕ್ ದೇವಾಡಿಗ ಇವರು ನಿರೂಪಿಸಿದರು.






