

ಶಿವಮೊಗ್ಗ; ದಿನಾಂಕ: 22- 06-2025 ರಂದು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶಿವಮೊಗ್ಗ ಧರ್ಮ ಪ್ರಾಂತ್ಯದಲ್ಲಿ ಹೆಚ್ಚಿನ ಅಂಕ ಪಡೆದವರಿಗೆ ಶೀಮತಿ ಇಸ್ಬೆಲ್ ಬಾಂಜ್, ವಿಜಯವಾತೆ ಚರ್ಚ್, ನಗರ, ಶಿವಮೊಗ್ಗ ಜಿಲ್ಲೆ ಇವರ ಜ್ಞಾಪಕಾರ್ಥವಾಗಿ ಅವರ ಮೊಮ್ಮಕ್ಕಳಾದ ಡಾ. ಎಕ್ಸ್ಎ.ಡಿ’ಸೋಜ ಎಂ.ಎಸ್., ಎಂ.ಸಿ.ಹೆಚ್(ಯುರಾಲಜೆ), ಮೆಡಿಕಲ್ ಸೂಪರಿಂಡೆಂಟ್, ಸೈಂಟ್ ಜೋಸೆಪ್ಟ್ ಆಸ್ಪತ್ರೆ, ಮೈಸೂರು, ಮತ್ತು ಶ್ರೀ ರಾಬರ್ಟ್ ಡಿ ಸೋಜ, ನಿವೃತ್ತ ಆಡಳಿತ ಅಧಿಕಾರಿಗಳು, ಕೃಷಿ ಇಲಾಖೆ ಇವರುಗಳು ಪ್ರತಿ ವರ್ಷ 1978ರಿಂದಲೂ ಆಗಿನ ಚಿಕ್ಕಮಗಳೂರು ಈಗ ಶಿವಮೊಗ್ಗ ಧರ್ಮಪ್ರ್ಯಾಂತ್ಯದ ಹೆಚ್ಚಿನ ಅಂಕ ಪಡೆದ ಮಕ್ಕಳಿಗೆ ಬಹುಮಾನ ನೀಡುತ್ತಾ ಬಂದಿರುತ್ತಾರೆ. ಅದೇ ರೀತಿ 2೦25ನೇ ಸಾಲಿನಲ್ಲಿ ಶಿವಮೊಗ್ಗ ಧರ್ಮಪ್ರ್ಯಾಂತ್ಯದ (ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಹರಪನಹಳ್ಳಿ)ದ ಈ ಕೆಳಕಂಡ 3 ವಿದ್ಯಾರ್ಥಿಗಳಿಗೆ ದಿನಾಂಕ 22-06-2025ರಂದು ಶಿವಮೊಗ್ಗ ನಗರ ಶರಾವತಿನಗರದ ಬಾಲ ಯೇಸು ದೇವಾಲಯದಲ್ಲಿ ಸನ್ಮಾನಿಸಿ ಧನಸಹಾಯ ನೀಡಿ ಗೌರವಿಅಸಲಾಯಿತು.
ಕು.ರಿಯಾ ಡಿ ಸಿಲ್ದಾರವರು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 620 ಅಂಕ ಪಡೆದಿದ್ದು ಇವರನ್ನು ಶ್ರೀ ರಾಬರ್ಟ್ ಡಿ ಸೋಜರವರು ಸನ್ಮಾನಿಸಿ ರೂ.15ಸಾವಿರದ ಚಿಕ್ ನೀಡಿದರು, ಕು.ಪ್ರೀತಿ ಸುಸನ್ನಾರವರು 615 ಅಂಕ ಪಡೆದು ರೂ. 5ಸಾವಿರ ಬಹುಮಾನದ ಚೆಕ್ಕನ್ನು ಶ್ರೀಮತಿ ಗ್ರೇಸಿ ಲಸ್ರಾದೋ, ನಿವೃತ್ತ ಶಿಕ್ಷಕಿ ಸೈಂಟ್ ಮೇರೀಸ್ ಶಾಲೆ, ತೀರ್ಥಹಳ್ಳಿ, ಶ್ರೀಯುತ ರಾಬರ್ಟ್ ಡಿ ಸೋಜ ಇವರ ಪತ್ನಿಇವರು ಮತ್ತು ಕು. ನಮಿತ ರಾಣಿ ಇವರು 614 ಅಂಕ ಪಡೆದಿರುವ ರೂ.5ಸಾವಿರ ಬಹುಮಾನದ ಚೆಕ್ ನ್ನು ಶ್ರೀಯುತ ಕಿರಣ್ ಫರ್ನಾಂಡಿಸ್, ಶಿವಮೊಗ್ಗ ಕಾರುಣ್ಯ ಟ್ರಸ್ಟ್ನ ಸದಸ್ಯರು ಮತ್ತು ಕರ್ನಾಟಕ ಸರ್ಕಾರದ ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ, ಗ್ರಾಹಕರ ಸಲಹಾ ಸಮಿತಿಯ ಶಿವಮೊಗ್ಗ ಘಟಕ-2ರ ಸದಸ್ಯ ಇವರಿಂದ ಪಡೆದರು.
ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಯ ಮೇರಿ ಇಮ್ಯಾಕುಲೇಟ್ ಹೈಸ್ಕೂಲ್, ಶಿವಮೊಗ್ಗದ. ಇವರ ಪರವಾಗಿ ಸಿಸ್ಟರ್ ಡೈಸಿಯಾ ಇವರನ್ನು ಧರ್ಮಗುರುಗಳಾದ ಫಾ. ಬಿಜು ಥಾಮಸ್ರವರು ಸನ್ಮಾನಿಸಿದರು.
ಪ್ರಾಸ್ತಾವಿಕ ಮಾತಿನಲ್ಲಿ ಫಾ. ಬಿಜು ಥಾಮಸ್, ಬಾಲಯೇಸು ದೇವಾಲಯದ ಧರ್ಮಗುರುಗಳು, ಈ ಹಿಂದೆ ಬಹುಮಾನ ಪಡೆದ ಇದೇ ಚರ್ಚ್ನ ವಿದ್ಯಾರ್ಥಿಗಳನ್ನು ಸ್ಮರಿಸಿ, ಈ ಸಲವೂ ಬಾಲ ಯೇಸು ದೇವಾಲಯದ ಮೂರು ವಿದ್ಯಾರ್ಥಿಗಳು ಪಡೆದಿದ್ದು ವ್ಯಕ್ತ ಪಡಿಸಿದಾಗ, ಭಕ್ತಾಧಿಗಳು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತ ಪಡಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಬಾಲಯೇಸು ದೇವಾಲಯದ ಶಿಕ್ಷಕಿ ಶ್ರೀಮತಿ ಅಲ್ವಿನರವರು ನಿರೂಪಿಸಿದರು.




















