“Sauharda Tenehabba” (Harmony Festival) organized by Catholic Sabha Mangalore Pradesh® at Nejiguri


ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ಇದರ ಮುಂದಾಳುತ್ವದಲ್ಲಿ, ನೇಜಿಗುರಿ ಗುಂಪು, ಕರಾವಳಿ ಮಾಣಿಕ್ಯ ಸೆವಾ ಸಂಸ್ಥೆ(ರಿ), ಪೃಥ್ವಿ ಸೇವಾ, ಕಥೊಲಿಕ್ ಸಭಾ ಸಿಟಿ ವಾರಾಡೊ ಮತ್ತು ಕಥೊಲಿಕ್ ಸಭಾ ಶಕ್ತಿನಗರ ಘಟಕ ಇವರ ಸಹಯೋಗದೊಂದಿಗೆ ಸೆಪ್ಟೆಂಬರ್ 28 ರಂದು ಶಕ್ತಿನಗರದ ನೇಜಿಗುರಿ ಸುಜಿ ಅಣ್ಣ ತಾರಕ್ಕ ಇವರ ಮನೆಯ ಅಂಗಳದಲ್ಲಿ ಸೌಹಾರ್ದಯುತವಾಗಿ ನಡೆಯಿತು. ಪ್ರಾರ್ಥನೆಯೊಂದಿಗೆ, ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮುಖಾಂತರ ಉದ್ಘಾಟಿಸಲಾಯಿತು.
ಕಥೊಲಿಕ್ ಸಭಾ ಕೇಂದ್ರೀಯ ಸೌಹಾರ್ದ ಸಂಚಾಲಕರಾದ ಶ್ರೀ ಅರುಣ್ ಡಿಸೋಜಾರವರು ಹಾಜರಿದ್ದ ಎಲ್ಲರನ್ನು ಸ್ವಾಗತಿಸಿದರು. ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ಇದರ ಅದ್ಯಕ್ಷರಾದ ಶ್ರೀಯುತ ಸಂತೋಷ್ ಡಿಸೋಜಾರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ತಮ್ಮ ಸಂದೇಶವನ್ನು ನೀಡಿ ದಕ್ಷಿಣ ಕನ್ನಡ ಜಿಲ್ಲೆಯ ಕ್ಯಾಟರಿಂಗ್ ಎಸೋಸಿಯೇಶನ್ ಇವರೂ ಕೂಡಾ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ ಮತ್ತು ಇಂತಹ ಕಾರ್ಯಕ್ರಮಗಳು ನಡೆಯಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಂದನೀಯ ಫಾದರ್ ಜೆರಾಲ್ಡ್ ಲೋಬೊ ಕಾಪುಚಿನ್ ಸಂತ ಅನ್ನಾ ಫ್ರಾಯರಿ ಬಿಜೈ ಇವರು ತಮ್ಮ ಸಂದೇಶವನ್ನು ನೀಡಿ ಶುಭ ಹಾರೈಸಿದರು. ಶ್ರೀಯುತ ಮನೋಜ್ ಕುಮಾರ್, ವಾಮಂಜೂರು, ವಕೀಲರು, ಕಾರ್ಯಕ್ರಮವನ್ನು ಆಯೋಜಿಸಿದ ಪರವಾಗಿ ಸಂತೋಷವನ್ನು ವ್ಯಕ್ತಪಡಿಸಿದರು. ಕಥೊಲಿಕ್ ಸಭಾದ ಸಾರ್ವಜನಿಕ ಸಂಪರ್ಕ ಅಧಿಕಾರಿಯವರಾದ ಶ್ರೀಯುತ ಪೌಲ್ ಲೋಲ್ಫಿ ಡಿಕೋಸ್ತಾರವರು ನೇಜಿಗುರಿ ಗುಂಪನ್ನು ಅವರು ಮಾಡುವ ಒಳ್ಳೆಯ ಕಾರ್ಯಗಳಿಗಾಗಿ ಶ್ಲಾಘಿಸಿದರು. ಶ್ರೀ ನಟರಾಜ್ ಪಚ್ಚನಾಡಿ, ಪ್ರಧಾನ ಕಾರ್ಯದರ್ಶಿ, ಕರಾವಳಿ ಮಾಣಿಕ್ಯ ಸೇವಾ ಸಂಸ್ಥೆ(ರಿ), ಮಂಗಳೂರು, ಶ್ರೀ ಬಾಲಕೃಷ್ಣ ಕುಕ್ಯಾನ್, ಮಾಲಕರು ಶ್ರೀದೇವಿ ಕ್ಯಾಟರಿಂಗ್, ಕುಮಾರಿ ಚೈತ್ರ, ನಿರೂಪಕಿ, ಶ್ರೀ ಪ್ರದೀಪ್ ಗೌರೀಶ್, ಅಧ್ಯಕ್ಷರು ಪ್ರಥ್ವಿ ಸೇವಾ, ಶ್ರೀಮತಿ ವಿಲ್ಮಾ ಮೊಂತೇರೊ, ಪ್ರಧಾನ ಕಾರ್ಯದರ್ಶಿ, ಕಥೊಲಿಕ್ ಸಭಾ ಮತ್ತು ಶ್ರೀ ಡೇವಿಡ್ ಕ್ರಾಸ್ತಾ, ಅಧ್ಯಕ್ಷರು, ಕಥೊಲಿಕ್ ಸಭಾ ಶಕ್ತಿನಗರ್ ಘಟಕ ಇವರು ಗಣ್ಯ ವ್ಯಕ್ತಿಗಳಾಗಿ ವೇದಿಕೆಯಲ್ಲಿ ಅಸೀನರಾಗಿದ್ದರು.
ಮುಗ್ರೋಡಿ ಟೈಗರ್ಸ್ ಪಂಗಡದಿಂದ ಹುಲಿವೇಷ ಪ್ರದರ್ಶನ ಮತ್ತು ಕರಡಿ ಕುಣಿತ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿತು. ಹುಲಿವೇಷ ಪ್ರದರ್ಶನದಲ್ಲಿ ಮಕ್ಕಳು ಭಾಗವಹಿಸಿ ಅದರಲ್ಲೂ ಹೆಣ್ಣು ಹುಲಿ ಮತ್ತು ಕ್ರೈಸ್ತ ಧರ್ಮದ ಮಗು ಭಾಗವಹಿಸಿದ್ದು ಎಲ್ಲರಲ್ಲೂ ಸಂತೋಷ ಹಾಗೂ ಸಾಮರಸ್ಯ ಮೂಡಿ ಬಂತು. ಸಮಾಜ ಸೇವಕರಾದ ಶ್ರೀಯುತ ಶುಭಕರ್ ಮುಗ್ರೋಡಿ ಇವರನ್ನು ಈ ಸಂದರ್ಭದಲ್ಲಿ ಸಮಾಜಕ್ಕೆ ನೀಡಿದ ಸೇವೆಗಾಗಿ ಗೌರವಿಸಲಾಯಿತು. ಚಿಕ್ಕ ಮಕ್ಕಳ ನೃತ್ಯವು ಕಾರ್ಯಕ್ರಮದ ಆಕರ್ಷಣೆಯಾಗಿತ್ತು. ಕಾರ್ಯಕ್ರಮದ ಸವಿನೆನಪಿಗಾಗಿ ಎರಡು ಬಡ ಕುಟುಂಬಕ್ಕೆ ಧನರೂಪದಲ್ಲಿ ಚೆಕ್ ನೀಡಿ ಸಹಾಯ ಮಾಡಲಾಯಿತು. ಕಥೊಲಿಕ್ ಸಭಾದ ಪ್ರಧಾನ ಕಾರ್ಯದರ್ಶಿಯವರಾದ ಶ್ರೀಮತಿ ವಿಲ್ಮಾ ಮೊಂತೇರೊರವರು ಎಲ್ಲರನ್ನು ವಂದಿಸಿದರು. ಶ್ರೀ ರಾಕೇಶ್ ನೇಜಿಗುರಿ ಇವರು ಕಾರ್ಯನಿರ್ವಾಹಕರಾಗಿದ್ದರು. ಮಧ್ಯಾಹ್ನದ ಸಸ್ಯಾಹಾರಿ ಭೋಜನದೊಂದಿಗೆ ಕಾರ್ಯಕ್ರಮವನ್ನು ಸಮಾಪ್ತಗೊಳಿಸಲಾಯಿತು.
“Sauharda Tenehabba” (Harmony Festival) organized by Catholic Sabha Mangalore Pradesh® at Nejiguri

A joint event called “Sauharda Tenehabba” (Harmony Festival) was organized on September 28 at the residence of Mr. Suji Anna (Tarakka) in Nejiguri.
This event was jointly organized by:
Nejiguri Gumpu, Catholic Sabha Mangalore Pradesh (R) – City Deanery , Karavali Manikya Seva Samsthe (R), Prithvi Seva, Catholic Sabha City Varado and Catholic Sabha Shaktinagar Unit.
The program was presided over by Mr. Santosh D’Souza, Bajpe, President of Catholic Sabha Mangalore Pradesh (R).
The main guests included:
Rev. Fr. Gerald Lobo, Capuchin, Superior, St. Anne’s Friary, Jail Road, Mr. Manoj Kumar, Advocate, Vamanjoor, Mr. Paul Rolphy D’Costa, Former President of Catholic Sabha Mangalore Pradesh / PRO, Mr. Nataraj Pachchanadi, Chief Secretary, Karavali Manikya Seva Samsthe (R), Mangalore, Mr. Balakrishna Kukkiyan, Proprietor, Shri Devi Catering, Ms. Chaitra, Program Coordinator, Mr. Pradeep Gaurish, President, Prithvi Seva, Mrs. Wilma Monteiro, General Secretary, Catholic Sabha Mangalore Pradesh (R) / President, Catholic Sabha City Varado, and Mr. David Crasta, President, Catholic Sabha Shaktinagar Unit.
The event began with a prayer song and lighting the lamp. Baby Saachi welcomed the gathering by a dance performance.
Mr. Arun D’Souza, Interfaith Dialogue Coordinator of Catholic Sabha Mangalore Pradesh (R), welcomed the gathering. The “Mugrody Tigers” group performed a tiger dance. Mr. Subhakar Mugrody, a social worker, was felicitated. Children presented a dance performance. All the dignitaries present were honored with mementos. As part of the social outreach, financial aid was handed over (in the form of cheques) to two families.
Ms. Wilma Monteiro delivered the vote of thanks. Mr. Rakesh Nejiguri anchored and managed the event. The program concluded with a fellowship meal.





















































