

ಉಡುಪಿ ಶ್ರೀ ಕೃಷ್ಣ ಮಠ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ನಮ್ಮ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ “ವಿಶ್ವ ಗೀತ ಪರ್ಯಾಯಕ್ಕೆ ವಿಶ್ವ ನಾಯಕ ಎಂಬ ಧ್ಯೇಯದೊಂದಿಗೆ; ಉಡುಪಿಗೆ ಸ್ವಾಗತ ಬಯಸುವ ಮರಳು ಶಿಲ್ಪದ ರಚನೆ ‘ಸ್ಯಾಂಡ್ ಥೀಂ’ ಉಡುಪಿ ತಂಡದಿಂದ ಮಲ್ಪೆ ಕಡಲ ತೀರದಲ್ಲಿ ಇಂದು ನಡೆಯಲಿದೆ. ಶ್ರೀ ಕೃಷ್ಣ ದೇವರ ಮುಂದೆ ಮೋದಿಯವರ ಭಾವ ಶಿಲ್ಪದ ಭಾವೈಕ್ಯದೊಂದಿಗೆ ಆತ್ಮೀಯತೆಯನ್ನು ಸಾರುವ ಈ ಕೃತಿಯು’ಸ್ಯಾಂಡ್ ಥೀಂ’ ಉಡುಪಿಯ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ, ಉಜ್ವಲ್ ರವರಿಂದ ರಚಿತ ಆಕರ್ಷಕ ಕಲಾಕೃತಿ ಇದಾಗಿದೆ.






