

ಸಾಗರ; ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶಿವಮೊಗ್ಗ ಧರ್ಮ ಪ್ರಾಂತ್ಯದಲ್ಲಿ ಕಥೋಲಿಕ್ ಕೈಸ್ತ ಮಕ್ಕಳಲ್ಲಿ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಇಸಬೆಲಾ ಬಾಂಜ್ ಇವರ ಜ್ಞಾಪಕಾರ್ಥವಾಗಿ ಅವರ ಮೊಮ್ಮಕ್ಕಳು ನೀಡುವ ಪ್ರತಿಭಾ ಪುರಸ್ಕಾರವನ್ನುಪ್ರಥಮವಾಗಿ ಸಾಗರದ ಸಂತ ಜೋಸೆಪರ ಇಗರ್ಜಿಯಲ್ಲಿ 14-6-26 ರಂದು, 2026ರ SSLC ಪರೀಕ್ಷೆಯ ಲ್ಲಿ ಶಿವಮೊಗ್ಗ ಧರ್ಮ ಪ್ರಾಂತ್ಯದಲ್ಲಿ ಕಥೋಲಿಕ್ ಕೈಸ್ತ ಮಕ್ಕಳಲ್ಲಿ ಹೆಚ್ಚು (617) ಅಂಕ ಪಡೆದ ವಿದ್ಯಾರ್ಥಿ ಕೆವಿನ್ ಪ್ರಾನ್ಸಿಸ್ ಡಿ ಸೋಜ, ಸಾಗರ ಇವರಿಗೆ ದಕ್ಕಿದ್ದು, ಪುರಸ್ಕಾರವಾಗಿ ಇವರ ತಂದೆ ಪ್ರಾನಿಸ್ ಅಗ್ನೆಲ್ ಡಿ ಸೋಜ ಇವರಿಗೆ ರೂ.15,000/ರ ಚೆಕ್ಕನ್ನು ಕುಟುಂಬದ ಸದಸ್ಯರಾದ ಶ್ರೀ ರೋಷನ್ ಡಿ ಸೋಜ ಇವರು ಫಾ.ರಿಚರ್ಡ್ ಅನಿಲ್ ಡಿ ಸೋಜ ಇವರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.
ಅದೇ ರೀತಿ 2 ಮತ್ತು 3 ನೇ ಪುರಸ್ಕಾರವಾಗಿ ಮೊತ್ತ ರೂ.5,000/ ರಂತೆ, ಭದ್ರಾವತಿಯ ಮೇರಿ ಇಮ್ಯಾಕುಲೇಟ್ ಚರ್ಚ ನ ಅವಿಶೈ ರೆಬೆಲೊ (Avishai Rebello) ಮತ್ತು ಪ್ರಿಥಮ್ ಎ.ಬಿ ಇವರಿಗೆ, ಧರ್ಮ ಗುರುಗಳಾದ ರೆ.ಫಾ.ಲ್ಯಾನ್ಸಿ ಡಿ ಸೋಜ ಇವರು ದಿನಾಂಕ 21-6-26 ರಂದು ನೀಡಿದರು.
ದಿವಂಗತ ಇಸಬೆಲ್ ಬಾಂಜ್ ಇವರ ಮೊಮ್ಮಕ್ಕಳು 1977ರಿಂದಲೂ ಇಂತಹ ಪುರಸ್ಕಾರವನ್ನು ನಡೆಸಿಕೊಂಡು ಬಂದಿರುತ್ತಾರೆ.



