

ಪಡುಕೋಣೆ ; ದಿನಾಂಕ 1.3.2026 ರಿಂದ ದಿ.4.3.2026 ರ ತನಕ 4 ದಿನಗಳ “ಬನ್ನಿ ದೇವರ ಪ್ರೀತಿಯ ಅನುಭವಿಸೋಣಾ” ಎಂದು ವಾರ್ಷಿಕ ಅಧ್ಯಾತ್ಮಿಕ ಧ್ಯಾನ ಕೂಟವನ್ನು, ಪ್ರಸಿದ್ಧ ಪ್ರಸಂಗದವರಾದ ಶಿವಮೊಗ್ಗಧರ್ಮಪ್ರಾಂತ್ಯದ ಕಬಳೆ ಚರ್ಚಿನ ಧರ್ಮಗುರು ವಂ।ರೋಮನ್ ಪಿಂಟೋ,, ಇವರು ನಡೆಸಿಕೊಟ್ಟರು. ಚರ್ಚಿನ ಧರ್ಮ ಗುರುಗಳಾದ ವಂದನೀಯ ಫಾ। ಪ್ರಾನ್ಸಿಸ್ ಕರ್ನೆಲಿಯೊರವರು ಎಲ್ಲಾ ಯುವಕರನ್ನು ಒಗ್ಗೂಡಿಸಿ ಪ್ರಾರ್ಥನೆ ಕೂಟಕ್ಕೆ ಚಾಲನೆ ನೀಡಿದರು.
ವಂದನೀಯ ಫಾ। ರೋಮನ್ ಪಿಂಟೋ ರವರು ಯುವಕರನ್ನು ಉದ್ದೇಶಿಸಿ, ಅನೇಕ ಚಟುವಟಿಕೆಗಳ ಮುಖಾಂತರ ಯುವಕರು ತಮ್ಮ ಜೀವನವನ್ನು ಹೇಗೆ ಪರಿವರ್ತನೆ ಮಾಡಬಹುದು. ಈಗೀನ ಈ ಕಾಲದ ಲೌಕಿಕ ವಾತಾವರಣದಲ್ಲಿ ವಿವಿಧ ರೀತಿಯಲ್ಲಿ ಯುವಕರ ಮನಸ್ಸನ್ನು ಸೂರೆ ಮಾಡಿ ನಾಶಪಡಿಸುವ ಈ ಯುಗದಲ್ಲಿ ಬಣ್ಣ ಬಣ್ಣದ ದುಷ್ಟರ ನುಡಿಗಳ ಶಕ್ತಿಗೆ ಬಲಿಯಾಗದೇ ಒಳ್ಳೆಯ ಜೀವನವನ್ನು ತಾವೇ ರೂಪಿಸಿ ಕೊಳ್ಳಬೇಕೆಂದು, ನಾವು ಅಪ್ಪಿ ತಪ್ಪಿ ಎಡವಿ ಬಿದ್ದರೂ ಅದನ್ನು ಲೆಕ್ಕಿಸದೆ ಮತ್ತೆ ಎದ್ದು ಮುಂದೆ ಒಳ್ಳೆಯ ವ್ಯಕ್ತಿಗಳಾಗಿ ಬಾಳುವುದೇ ನಮ್ಮ ಸಾಧನೆ, ಜೀವನದ ಗುರಿ ಆಗಬೇಕು ಎಂದು ತಮ್ಮ ಅನುಭವದ ಅನೇಕ ಉದಾಹರಣೆ ಗಳನ್ನು ಯುವ ಮಕ್ಕಳಿಗೆ ಅರ್ಥೖಸಿ, ಮನಸ್ಸಿಗೆ ನಾಟಿ ಪರಿಣಾಮ ಬೀರುವಂತೆ ಬೋಧನೆ ಮಾಡಿದರು.
ದಿನಾಂಕ 2.3.26.ರಂದು ಪೂರ್ವಹ್ನ ಚರ್ಚಿನ ಹಿರಿಯ ಭಕ್ತಾದಿಗಳಿಗೆ ಉತ್ತಮ ಪ್ರಸಂಗ, ಪ್ರಾರ್ಥನೆ, ಆರಾಧನೆ,ಪವಿತ್ರ ಬಲಿಪೂಜೆಯನ್ನು ಯಥಾ ಪ್ರಕಾರ ಮೂರು ದಿನಗಳು ನಡೆಸಿದರು. ಪ್ರತಿದಿನ ತಮ್ಮ ಪ್ರಸಂಗದಲ್ಲಿ ಭಕ್ತರಿಗೆ ಮನಮುಟ್ಟುವಂತೆ ಪವಿತ್ರ ಗ್ರಂಥದಲ್ಲಿ ಏಸು ಸ್ವಾಮಿಯ ಜೊತೆಯೇ ಇದ್ದು, ಅವರ ಅದ್ಬುತ ಮಹಿಮೆಗಳನ್ನು ಕಣ್ಣಾರೆ ನೋಡಿ, ಆನ಼ಂದಿಸಿ, ಸುರ್ವಾತೆಗಳನ್ನು ನಾವು ಈ ದೇವರ ಸ್ರಷ್ಟಿಯಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಬಾಳಲು ನಾಲ್ಕು ಜನ ಸುರ್ವಾತಗಾರರು ಬರೆದ ಸುರ್ವಾತದಿಂದ ಸರ್ಮಪಕವಾದ ಘಟನೆಗಳನ್ನು ಆರಿಸಿ ಅನೇಕ ದೖವಿಕ ರೀತಿಯಲ್ಲಿ ಭಕ್ತರ ಆತ್ಮೀಯ ಶುಧೀಕರಣದ ಭೋದನೆ ನೀಡಿ ಮನಪರಿವರ್ತನೆ ಮಾಡಲು ಈ ಪ್ರಾಯಸ್ಚಿತ್ತ ಕಾಲದಲ್ಲಿ ನಮ್ಮ ಆತ್ಮ ಶುದ್ದಿ ಮಾಡಲು ಸಹಕರಿಸಿದರು.
ಧ್ಯಾನ ಕೂಟವುಯಶಸ್ವಿಯಾಗಿ ಸಂಪನ್ನವಾಗಿದ್ದರಿಂದ ಧರ್ಮಗುರುಗಳು ಎಲ್ಲರನ್ನು ಧನ್ಯವಾದ ನೀಡಿದರು.


















