

ಕುಂದಾಪುರ; ದಿನಾಂಕ12/07/2025 ಶನಿವಾರದಂದು ಎಲ್.ಕೆ.ಜಿ ಮತ್ತು ಯು.ಕೆ.ಜಿ ಪುಟಾಣಿ ಮಕ್ಕಳಿಗೆ ಕೆಂಪು ಬಣ್ಣದ ದಿನಾಚರಣೆಯನ್ನು ಆಚರಿಸಲಾಯಿತು. ಪುಟ್ಟ ಮಕ್ಕಳಲೆಲ್ಲರೂ ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸಿ ಬಂದಿದ್ದರು.
ಯುಬಿಎಂಸಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ಅನಿತಾ ಡಿ ಸೋಜಾರವರು ಮಕ್ಕಳಿಗೆ ಕೆಲವು ಆಟಗಳನ್ನು ಆಡಿಸಿ ಮಕ್ಕಳಿಗೆ ಖುಷಿ ನೀಡಿದರು. ‘ಕೆಂಪು ಉಡುಗೆಯಲ್ಲಿ ತುಂಬಾ ಮುದ್ದಾಗಿ ಕಾಣುತ್ತಿದ್ದಿರಿ, ಕೆಂಪು ಬಣ್ಣ ಪ್ರೀತಿ, ಉತ್ಸಾಹದ ಸಂಕೇತವಾಗಿದೆ’ ಎಂದು ಪುಟಾಣಿ ಮಕ್ಕಳಿಗೆ ಹೇಳಿದರು.
ಪುಟಾಣಿ ಮಕ್ಕಳು ಕೆಂಪು ಬಣ್ಣಗಳ ಹಾಡನ್ನು ಹಾಡಿದರು.ಮತ್ತು ಯು.ಕೆ.ಜಿ ಪುಟಾಣಿಗಳಾದ ಪುನೀತ್ ಮತ್ತು ಸುಕ್ರತಿ ಕೆಂಪು ಬಣ್ಣದ ಬಗ್ಗೆ ಭಾಷಣವನ್ನು ಮಾಡಿದರು. ಶಿಕ್ಷಕಿಯರು ಮಕ್ಕಳಿಗೆ ಕೆಂಪು ಬಣ್ಣದ ಅನೇಕ ಚಟುವಟಿಕೆಗಳನ್ನು ಮಾಡಿದರು.
ಸಿ.ಎಸ್.ಐ ಕ್ರಪಾ ವಿದ್ಯಾಲಯ ಶಾಲೆಯ ಮುಖ್ಯೋಪಾಧ್ಯಾಯಿನಿ ಸವಿತಾ ಸ್ವಾಗತಿಸಿದರು. ಕಾರ್ಯಕ್ರಮಕ್ಕೆ ಸಿಎಸ್.ಐ ಕ್ರಪಾ ವಿದ್ಯಾಲಯ ಹಾಗೂ ಯು.ಬಿ.ಎಮ್.ಸಿ.ಶಾಲಾ ಶಿಕ್ಷಕಿಯರು ಮತ್ತು ಸಹಾಯಕಿಯರು ಹಾಗೂ ಅಂಗನವಾಡಿ ಶಿಕ್ಷಕಿ ಉಪಸ್ಥಿತಿತರಿದ್ದರು. ಶಿಕ್ಷಕಿ ರೇಖಾ ಅಲ್ಮೇಡಾ ಧನ್ಯವಾದ ಅರ್ಪಿಸಿದರು.
Red Color Day Celebration at CSI Kripa Vidyalaya Nursery School, Kundapur

Kundapur; On Saturday, 12/07/2025, Red Color Day was celebrated for LKG and UKG children. All the children came dressed in red clothes.
UBMC English Medium School Principal Anita D’Souza played some games with the children and entertained them. ‘You looked very cute in red clothes, red color is a symbol of love and enthusiasm’ she told the children.
The children sang a song about red color. And UKG children Puneeth and Sukrati gave a speech about red color. The teachers did many red color activities for the children.
Savita, Headmistress of CSI Krapa Vidyalaya School, welcomed the children. Teachers and assistants of CSI Krapa Vidyalaya and UBMC School and Anganwadi teacher were present for the program. Teacher Rekha Almeida offered a vote of thanks.












