

ಶ್ರೀನಿವಾಸಪುರ ಪಟ್ಟಣದ ವಾಸವಿಕನ್ಯಕಾ ಪರಮೇಶ್ವರಿ ದೇವಾಲಯದಲ್ಲಿ ಲಲೀತಾ ಮಹಿಳಾ ಸಂಘದ ವತಿಯಿಂದ ಗುರುವಾರ ಕನ್ಯಕಾಪರಮೇಶ್ವರಿ ದೇವಿಯ ಪುರಾಣ ಪಾರಾಯಣ ಮಾಡಿರುವ 160 ಮಹಿಳೆಯರಿಗೆ ಮಡಲ ಅಕ್ಕಿ ತುಂಬಲಾಯಿತು.ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ನೇತೃತ್ವದಲ್ಲಿ ಕಾಯ೯ಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಲಲೀತಾ ಮಹಿಳಾ ಮಂಡಳಿ ವತಿಯಿಂದ ಅಖಿಲ ಕರ್ನಾಟಕ ಆರ್ಯವೈಶ್ಯ ಮಹಿಳಾ ಸಭಾ ರಾಜ್ಯಾಧ್ಯಕ್ಷರು ಉಮಾ ಸಾಯಿ ರಾಮ್, ಪ್ರಧಾನ ಕಾರ್ಯದರ್ಶಿ ಸಂಧ್ಯಾ ಜಗದೀಶ್, ಉಪಾಧ್ಯಕ್ಷ ರಾದ ಚೈತನ್ಯ ಲವಕುಮಾರ್, ಶೀಲ ಸುರೇಶ್ , ರವರನ್ನು ಸನ್ಮಾನಿಸಲಾಯಿತು.


