

ಶ್ರೀನಿವಾಸಪುರ : ಜು 11 ರಂದು ಮ. 2.30 ಗಂಟೆಗೆ ಪಟ್ಟಣಕ್ಕೆ ಆಗಮಿಸಲಿದ್ದು, ಉಳಿದಂತೆ ಅವರ ಸ್ವಾಗತಕ್ಕೆ ಎಲ್ಲಾ ಸಿದ್ದತೆಗಳನ್ನು ಹಮ್ಮಿಕೊಳ್ಳಲಾಗಿದೆ. ಅದರಂತೆ ಚಿಂತಾಮಣಿ ವೃತ್ತ ಬಳಿ ಭವ್ಯವಾಗಿ ಸ್ವಾಗತಿಸಲಿದ್ದು, ಅಲ್ಲಿಂದ ಬ್ಯಕ್ ರ್ಯಾಲಿ ಮೂಲಕ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಇರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಮೂಲಕ ಪುಂಗನೂರು ಕ್ರಾಸ್ ನಲ್ಲಿ ನಡೆಯುವ ಕಾರ್ಯಕರ್ತರ ಸಭೆಗೆ ಹಾಜರಾಗಲಿದ್ದಾರೆ. ಈ ಸಭೆಯಲ್ಲಿ ನಮ್ಮ ಪಕ್ಷದ ಮುಂದಿನ ಚುಟುವಟಿಕೆಗಳ ಬಗ್ಗೆ ಹಾಗು ಪಕ್ಷದ ಸಂಘಟನೆಯ ಬಗ್ಗೆ ಮಾತನಾಡಲಿದ್ದಾರೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾಹಿತಿ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಜೆಡಿಎಸ್ ಪಕ್ಷ ವಿಚಾರವಾಗಿ ಪಟ್ಟಣಕ್ಕೆ ನಿಖಿಲ್ ಕುಮಾರಸ್ವಾಮಿ ಬರಲಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳ ರೂಪರೇಷಗಳ ಬಗ್ಗೆ ಪತ್ರಿಕಾ ಗೋಷ್ಟಿ ನಡೆಸಿ ಮಾತನಾಡಿದರು.
ಈ ಸಭೆಯಲ್ಲಿ ಸಂಸದ ಮಲ್ಲೇಶ್‍ಬಾಬು, ಮುಳಬಾಗಿಲು ಶಾಸಕ ಸಂವೃದ್ಧಿ ಮಂಜುನಾಥ್, ಎಂಎಲ್‍ಸಿ , ಚಿಂತಾಮಣಿ ಮಾಜಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ಮುಖಂಡ ರವಿ ಹಾಗು ಎರಡು ಜಿಲ್ಲೆಯ ಮುಖಂಡರು ಹಾಗು ರಾಜ್ಯ ಮುಖಂಡರು ಬರಲಿದ್ದು, ಈ ಸಭೆಯ ಮೂಲ ಉದ್ದೇಶ ಪಕ್ಷ ಸಂಘಟನೆ ಮಾಡುವುದಕ್ಕೆ, ನಾನು ಸಾಯುವ ವರೆಗೂ ಕಾರ್ಯಕರ್ತರ ಬಗ್ಗೆ ಪ್ರೀತಿ , ವಿಶ್ವಾಸವನ್ನು ಇಟ್ಟುಕೊಂಡಿದ್ದಾರೆ , ಕಾರ್ಯಕರ್ತರು ಸಹ ನನ್ನ ಮೇಲೆ ಪ್ರೀತಿ, ವಿಶ್ವಾಸ ಇಟ್ಟುಕೊಂಡಿದ್ದಾರೆ. ವೇದಿಕೆಯ ಮೇಲೆ ಪ್ರೋಟೋಕಾಲ್ ಪ್ರಕಾರ ವ್ಯವಸ್ಥೆ ಮಾಡಲಾಗುತ್ತದೆ.
ಆದ್ದರಿಂದಾಗಿ ಈ ಸಭೆಗೆ ಕಾರ್ಯಕರ್ತರಲ್ಲಿ ಏನೇ ಬಿನ್ನಾಭಿಪ್ರಾಯಗಳು ಇದ್ದರು, ಸಹ ಅದನ್ನೆಲ್ಲಾ ಮರೆತು, ತಾಲೂಕಿನ ಎಲ್ಲಾ ಕಾರ್ಯಕರ್ತರು , ಸಾರ್ವಜನಿಕರು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶ್ವಸಿಗೊಳಿಸಬೇಕೆಂದು ಮನವಿ ಮಾಡಿದರು.
ಜಿ.ಪಂ.ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ತಾ.ಪಂ.ಮಾಜಿ ಸದಸ್ಯ ಗೊಟ್ಟಿಕುಂಟೆ ಕೃಷ್ಣಾರೆಡ್ಡಿ, ಜೆ.ತಿಮ್ಮಸಂದ್ರ ಗ್ರಾ.ಪಂ.ಅಧ್ಯಕ್ಷ ಶಂಕರರೆಡ್ಡಿ, ಅತ್ತಿಕುಂಟೆ ಹರೀಶ್‍ಕುಮಾರ್, ಯಲ್ದೂರು ಮಣಿ, ನೆಲವಂಕಿ ಸುಬ್ರಮಣಿ, ಉಪ್ಪಕುಂಟೆ ಚಂಗಪ್ಪ, ವೆಂಕಟೇಶ್, ತೂಪಲ್ಲಿ ಮಧುಸೂದನರೆಡ್ಡಿ, ದುರ್ಗಾಪ್ರಸಾದ್, ಸಿ.ಮಣಿ, ಬದರಿ ಇದ್ದರು.

