

ಪಡುಕೋಣೆ,10.8.2025 ರಂದು ಭಾನುವಾರ ಸಂತ ಅಂತೋನಿ ಚರ್ಚ್ ಪಡುಕೋಣೆಯಲ್ಲಿ ದೇವರ ಪೀಠದ ಸೇವೆ ಮಾಡುವ ಮಕ್ಕಳ ಪಾಲಕರಾದ ಸಂತ ಜೋನ್ ಬರ್ಕ್ ಮನ್ಸ್, ಹಬ್ಬದ ದಿನವನ್ನು ಆಚರಿಸಲಾಯಿತು. ಚರ್ಚಿನ ಧರ್ಮ ಗುರುಗಳಾದ ವಂ। ಫಾ.ಫ್ರಾನ್ಸಿಸ್ ಕರ್ನೆಲಿಯೊ, ಅತಿಥಿಗಳಾಗಿ ಆಗಮಿಸಿದ ಡೊನ್ ಬೊಸ್ಕೊ ಸಂಸ್ಥೆ ತ್ರಾಸಿಯ ವಂ। ಫಾ.ಬ್ರೈಸ್, ದೇವರ ಪೀಠದ ಸೇವೆ ಮಾಡುವ ಮಕ್ಕಳು, ಮಕ್ಕಳಿಗೆ ಪ್ರೇರಣೆ ನೀಡುವ ಪ್ರೇರಕರಾದ ಭಗಿನಿ ಲೂಸಿ, ಮತ್ತು ಶೀಯುತ ಆಲ್ವಿನ್ ಡಿ’ಆಲ್ಮೇಡಾ ಹಾಗೂ ಚರ್ಚಿನ ಭಕ್ತಾದಿಗಳು ಸೇರಿ ಬಲಿ ಪೂಜೆಯನ್ನು ಅರ್ಪಿಸಿದರು.
ಅನಂತರ ಚರ್ಚಿನ ಸಭಾಂಗಣದಲ್ಲಿ ಮಕ್ಕಳಿಗೆ ವಿವಿಧ ರೀತಿಯ ಒಳಾಂಗಣ ಆಟ, ಮನೋರಂಜನೆಯ ಕಾರ್ಯಕ್ರಮ, ಸಂತ ಜೋನ್ ಬರ್ಕ್ ಮನ್ಸ್ ರವರ ಜೀವನ ಚರಿತ್ರೆಯ ಬಗ್ಗೆ ಕ್ವಿಜ್ ನಡೆಸಲಾಯಿತು. ಫಾ.ಫ್ರಾನ್ಸಿಸ್ ಕರ್ನೆಲಿಯೊ ‘ಉತ್ತಮ ಗುಣ ಸಂಸ್ಕಾರವನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು’ ಸಂದೇಶ ನೀಡಿ, ಫಾ।ಬ್ರೈಸ್ ಜೊತೆ ಮಕ್ಕಳಿಗೆ ಬಹುಮಾನವನ್ನು ನೀಡಿ ಗೌರವಿಸಿದರು, ಶಿಕ್ಷಕಿ ಐವಿ ರೇಗೊ ಮತ್ತು ಡೇರಿ ಸುವಾರಿಸ್ ಆಡೋಟಕ್ಕೆ, ಮನೋರಂಜನೆಗೆ ಸಹಕರಿಸಿದರು. ಆಲ್ವಿನ್ ಡಿ’ಆಲ್ಮೇಡಾ ಕಾರ್ಯಕ್ರಮದ ನಿರೂಪಣೆ ಮಾಡಿದರು.










