

ಹಳ್ನಾಡಿನ ತುಳಸಿ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಒಂದು ದಿನದ ದಂತ ತಪಾಸಣಾ ಶಿಬಿರ ನಡೆಯಿತು. ಮಣಿಪಾಲದ ದಂತ ವಿಜ್ಞಾನ ಕಾಲೇಜಿನ ವೈದ್ಯರು ಆಗಮಿಸಿ ಮಕ್ಕಳಿಗೆ ಉಚಿತವಾಗಿ ದಂತ ಚಿಕಿತ್ಸೆಯನ್ನು ನೀಡಿದರು.
ಜೊತೆಗೆ ಬಾಯಿಯ ನೈರ್ಮಲ್ಯವನ್ನು ಕಾಪಾಡಿಕೊಳ್ಳುವ ಪ್ರಾಮುಖ್ಯತೆ, ಸರಿಯಾಗಿ ಹಲ್ಲುಜ್ಜುವ ತಂತ್ರಗಳು ಮತ್ತು ದಂತ ಆರೋಗ್ಯದಲ್ಲಿ ನಿರ್ಲಕ್ಷ್ಯ ತಾಳಿದರೆ ಅದರಿಂದ ಆಗುವ ಸಮಸ್ಯೆಗಳ ಬಗ್ಗೆ ತಿಳಿಸಿ ಹಲ್ಲಿನ ತಪಾಸಣೆಯನ್ನು ನಿಯಮಿತವಾಗಿ ಮಾಡುವುದು ಅವಶ್ಯಕ ಎಂದರು. ಸುಮಾರು 100 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪರೀಕ್ಷಿಸಿ ಸಂಭಾವ್ಯ ದಂತ ಸಮಸ್ಯೆಗಳನ್ನು ಗುರುತಿಸಿ ಸಲಹೆ ಸೂಚನೆಗಳನ್ನು ನೀಡಿದರು.
ವೇದಿಕೆಯಲ್ಲಿ ಮಣಿಪಾಲ ದಂತ ವಿಜ್ಞಾನ ಕಾಲೇಜಿನ ವೈದ್ಯೆಯಾದ ಡಾ. ಸ್ಫೂರ್ತಿ ಹಾಗೂ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ರೇಷ್ಮ ಪ್ರದೀಪ್ ಉಪಸ್ಥಿತರಿದ್ದರು. ಶಿಬಿರ ನಡೆಸಿದ ಮಣಿಪಾಲ್ ದಂತ ವೈದ್ಯಕೀಯ ವಿದ್ಯಾಲಯದ ವೈದ್ಯರು ಮತ್ತು ಸಿಬ್ಬಂದಿ ವರ್ಗದವರನ್ನು ತುಳಸಿ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕೃಷ್ಣರಾಯ ಶಾನುಬಾಗ್ ರವರು ಸ್ಮರಣಿಕೆ ನೀಡಿ ಗೌರವಿಸಿದರು. ಹಿರಿಯ ಶಿಕ್ಷಕಿ ಶ್ರೀಮತಿ ಜಯಶೀಲ ರವರು ಸ್ವಾಗತಿಸಿ, ಶಿಕ್ಷಕಿ ದಿವ್ಯ ವಂದಿಸಿದರು.

