

ಗಂಗೊಳ್ಳಿ ; ತೌಹೀದ್ ಮಹಿಳಾ ವಾಣಿಜ್ಯ ಕಾಲೇಜು ಮತ್ತು ತೌಹೀದ್ ಬಾಲಕಿಯರ ಪಿಯು ಕಾಲೇಜು, ಗಂಗೊಳ್ಳಿ ಇದರ ನೂತನ ಸಾಲಿನ ವಿದ್ಯಾರ್ಥಿ ಪರಿಷತ್ತಿನ ಪದಗ್ರಹಣ ಸಮಾರಂಭವು ಗಂಗೊಳ್ಳಿ ಮೌಲಾನಾ ಅಬುಲ್ ಕಲಾಂ ಆಜಾದ್ ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮವನ್ನು ತೌಹೀದ್ ಮಹಿಳಾ ವಾಣಿಜ್ಯ ಕಾಲೇಜು ಮತ್ತು ತೌಹೀದ್ ಬಾಲಕಿಯರ ಪಿಯು ಕಾಲೇಜು, ಗಂಗೊಳ್ಳಿ ಜಂಟಿಯಾಗಿ ಆಯೋಜಿಸಿದ್ದವು.
ಸಭಾಧ್ಯಕ್ಷತೆಯನ್ನು ವಹಿಸಿದ್ದ ತೌಹೀದ್ ಎಜುಕೇಷನಲ್ ಟ್ರಸ್ಟ್ನ ಎನ್ಆರ್ಐ ಟ್ರಸ್ಟಿ ಜನಾಬ್ ಫಜ್ಲುರ್ ರೆಹಮಾನ್ ಕೊಲ್ಕಾರ್ ಅವರು ಶಾಲಾ ಘನತೆ,ಹಿರಿಮೆಯನ್ನು ಎತ್ತಿ ಹಿಡಿಯುವಂತೆ ನೂತನ ವಿದ್ಯಾರ್ಥಿನಿ ಸಂಘಕ್ಕೆ ಕರೆ ನೀಡಿದರು
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬ್ಯಾರೀಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ನ ನಿರ್ದೇಶಕಿ ಶ್ರೀಮತಿ ಅಶ್ವಿನಿ ಶೆಟ್ಟಿ, ವಿದ್ಯಾರ್ಥಿನಿಯರು ಆತ್ಮವಿಶ್ವಾಸ, ಜವಾಬ್ದಾರಿ ಮತ್ತು ಸಮರ್ಪಣಾ ಭಾವದಿಂದ ನಾಯಕತ್ವ ವಹಿಸಬೇಕು ಎಂದು ಕಿವಿ ಮಾತು ಹೇಳಿದರು
ವೇದಿಕೆಯಲ್ಲಿ ಅತಿಥಿಗಳಾಗಿ ಉಪಸ್ಥಿತರಿದ್ದ ಸಂಸ್ಥೆಯ ಟ್ರಸ್ಟಿ ಪಿ. ಎಂ. ಇಕ್ಬಾಲ್, ತೌಹೀದ್ ಆಡಳಿತ ವ್ಯವಸ್ಥಾಪಕರಾದ ಶ್ರೀ ಅಮ್ಜದ್ ಅಲಿ ಇಬ್ರಾಹಿಂ ಶೇಖ್ ಹಾಗೂ ಎರಡೂ ವಿದ್ಯಾ ಸಂಸ್ಥೆಗಳ ಪ್ರಾಂಶುಪಾಲರು ಸ್ಫೂರ್ತಿದಾಯಕ ಹಿತ ನುಡಿಗಳಿಂದ ವಿದ್ಯಾರ್ಥಿನಿಯರಲ್ಲಿ ಸ್ಥೈರ್ಯ ತುಂಬಿದರು .
ದ್ವಿತೀಯ ಬಿ.ಕಾಂನ ಫಾತಿಮಾ ನುಹಾ ಅವರ ಖಿರಾಅತ್ ನೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿಯ ಜುಹಾ ಅವರು ನಾತ್ ಹಾಡಿದರು. ಬಳಿಕ ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿನಿ ನಾಯಕಿಯರು ಪ್ರಮಾಣ ವಚನ ಸ್ವೀಕರಿಸಿ, ಸಂಸ್ಥೆಯ ಮೌಲ್ಯಗಳನ್ನು ಎತ್ತಿ ಹಿಡಿಯುವುದಾಗಿ ಪ್ರತಿಜ್ಞೆ ಮಾಡಿದರು. ಅಂತಿಮ ಬಿ.ಕಾಂ ನ ಯುಸ್ರಾ ಎಂ. ಹೆಚ್. ಅವರು ಸ್ವಾಗತಕೋರಿ , ಪ್ರಥಮ ಬಿ.ಕಾಂನ ಆಯಿಷಾ ಸಲ್ವಾ ವಂದನಾರ್ಪಣೆಗೈದರು. ಫಾತಿಮಾ ಮದ್ಹಾ ನಿರೂಪಿಸಿದರು.

