

ಬಸ್ರೂರು ; ಕನ್ಯಾ ಮರಿಯಮ್ಮನ ಜನ್ಮದಿನ (ಮೊಂತಿ ಫೆಸ್ತ್)ದ ಪೂರ್ವಭಾವಿಯಾಗಿ ಬಸ್ರೂರು ಸ್ಯೆಂಟ್ ಫಿಲಿಪ್ ನೇರಿ ಚರ್ಚನಲ್ಲಿ 9 ದಿನಗಳ ನೋವೆನಾಗೆ ಚಾಲನೆ ನೀಡಲಾಯಿತು. ಚರ್ಚ ಧರ್ಮಗುರು ವಂ। ರೋಯ್ ಲೋಬೊ, ಸಹಾಯಕ ಧರ್ಮಗುರು ವಂ। ಕೆನೊನ್ ಫೆರ್ನಾಂಡೀಸ್ ಧಾರ್ಮಿಕ ವಿಧಿ ನೆರವೇರಿಸಿದರು. ನಂತರ ಮಕ್ಕಳಿಂದ ಮೇರಿಮಾತೆಗೆ ಪುಷ್ಪಾರ್ಚನೆ ನಡೆಯಿತು.






