

ಶ್ರೀನಿವಾಸಪುರ : ಇಂಜನೀಯರ್ಗೆ, ಡಾಕ್ಟರ್ಗೆ ಅವರದೇ ಆದ ಗುರಿ ಇರುತ್ತದೆ ಹಾಗೆ ನಿಮ್ಮಲ್ಲೂ ಒಂದು ಗುರಿ ಇರಬೇಕು ಆಗ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಎಂದು ಅಭಿವೃದ್ಧಿ ಅಧಿಕಾರಿ ರವೀಂದ್ರಯ್ಯ. ಆರ್.ಕುಲಕರ್ಣಿ ಹೇಳಿದರು.
ಪಟ್ಟಣದ ಎಲ್ಐಸಿ ಉಪಶಾಖೆಯಲ್ಲಿ ಗುರುವಂದನ ಕಾರ್ಯಕ್ರಮದಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ಭವಿಷ್ಯದ ದೃಷ್ಟಿಯಿಂದ ಎಲ್ಐಸಿ ಪ್ರತಿನಿಧಿಗಳು ಜೀವ ವಿಮೆ ಮಹತ್ವ ಕುರಿತು ಜನರಲ್ಲಿ ಅರಿವು ಮೂಡಿಸಬೇಕು. ಪಾಲಸಿದಾರರ ಸಮಸ್ಯೆಗಳಿಗೆ ಸ್ಪಂದಿಸುವುದರ ಮೂಲಕ ಅವರ ವಿಶ್ವಾಸ ಗಳಿಸಬೇಕು.
ಎಲ್ಐಸಿ ಉಪಶಾಖ ವ್ಯವಸ್ಥಾಪಕಿ ಡಿ.ಎಂ.ವಿಜಯಕುಮಾರಿ ಮಾತನಾಡಿ ನಮ್ಮ ದೇಶದ ಸಂಸ್ಕøತಿಯಲ್ಲಿ ತಾಯಿ, ತಂದೆ , ಗುರುವಿಗೆ ಆಗ್ರಸ್ಥಾನ ನೀಡಿದ್ದಾರೆ. ಅದರಂತೆ ನಮಗೆ ಯಾವುದೇ ವಿಷಯದಲ್ಲಿ ಜ್ಞಾನ ನೀಡಿರುವವರನ್ನ ಗೌರವಿಸುವುದು , ಸ್ಮರಣೆ ಮಾಡುವುದು ಅತ್ಯಗತ್ಯ ಎಲ್ಐಸಿ ಕಂಪನಿಯು ಒಂದು ಸಮುದ್ರವಿದ್ದಂತೆ ಅದರಲ್ಲಿ ನೂರಾರು ಪಾಲಿಸಿಗಳು ಇರುತ್ತವೆ ಅವುಗಳನ್ನು ಸಾರ್ವಜನಿಕರಿಗೆ ಒಂದಿಷ್ಟು ಮಾಹಿತಿಯನ್ನು ನೀಡಿ ಕಂಪನಿಯನ್ನ ಬಲಪಡಿಸಿ , ನೂತನ ಪಾಲಿಸಿಗಳ ಬಗ್ಗೆ ಅರಿವು ಮೂಡಿಸಬೇಕು. ಎಲ್ಐಸಿ ಸಮಾಜಮುಖಿ ಕೆಲಸಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದೆ
ಸಿಬ್ಬಂದಿಗಳಾದ ಹರ್ಷ, ಶಬ್ಬೀರ್, ಅಭಿವೃದ್ದಿ ಅಧಿಕಾರಿಗಳಾದ ಶ್ರೀನಿವಾಸ್, ಲಿಖಿತ್ಕುಮಾರ್, ಪ್ರತಿನಿದಿಗಳಾದ ಎಸ್.ಲಕ್ಷ್ಮಣಬಾಬು, ಕೆ.ಎಂ.ಚೌಡಪ್ಪ, ಬೈರಪಲ್ಲಿ ಗೋಪಾಲ್, ಪೆದ್ದನ್ನ, ಅಖಿಲೇಶ್, ಬಾಬು, ಶ್ರೀರಾಮಶೆಟ್ಟಿ ಇದ್ದರು.

