

ಸತತ 170 ಗಂಟೆಗಳು ಅಂದರೆ ನಿರಂತರ ಏಳು ದಿನ ಭರತನಾಟ್ಯ ಪ್ರದರ್ಶನದ ಮೂಲಕ ವಿಶ್ವ ದಾಖಲೆಯೊಂದಿಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗೆ ಸೇರ್ಪಡೆಯಾಗಿರುವ ಕರಾವಳಿಯ ಹೆಮ್ಮೆಯ ಸುಪುತ್ರಿ ಕು. ರೆಮೋನಾ ಪಿರೇರಾ ರವರಿಗೆ ಇಂದು ಉದ್ಯಾವರದಲ್ಲಿ ಅದ್ದೂರಿಯ ಅಭಿನಂದನಾ ಸಮಾರಂಭ..
ಇಂದು ಅಗಸ್ಟ್ 5, ಸಂಜೆ ಗಂಟೆ 5.15ಕ್ಕೆ ಸಭಾಭವನದ ಸಮೀಪವಿರುವ ಪ್ರಮುಖ ರಸ್ತೆಯ ಬಳಿ ಸ್ವಾಗತದೊಂದಿಗೆ, ಸಭಾಭವನದವರೆಗೆ ಮೆರವಣಿಗೆಯ ಮೂಲಕ ಸಾಧಕಿಯನ್ನು ಕರೆತರಲಾಗುವುದು..
ವಿಶೇಷ ಸೂಚನೆ : ಸಂಘ ಸಂಸ್ಥೆಗಳಿಗೆ ಮತ್ತು ವೈಯಕ್ತಿಕವಾಗಿ ಎಲ್ಲರಿಗೂ ಶುಭ ಹಾರೈಸಲು ಅವಕಾಶವಿದೆ..
ನಮ್ಮ ಆಗಮನವೇ ಸಾಧಕೀ ರೆಮೊನ ರವರಿಗೆ ಆಶೀರ್ವಾದವಾಗಲಿ.. ನಮ್ಮ ಆಗಮನವೇ ಇತರ ಸಾಧಕರಿಗೂ ಪ್ರೇರಣೆಯಾಗಲಿ..
ಕಾರ್ಯಕ್ರಮ ಸಮಯಕ್ಕೆ ಸರಿಯಾಗಿ ಆರಂಭವಾಗುವುದು..
ಸ್ಟೀವನ್ ಕುಲಾಸೊ ಉದ್ಯಾವರ
ಕಾರ್ಯಕ್ರಮದ ಸಂಚಾಲಕರು

