

ಗಂಗೊಳ್ಳಿ; ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ) ಗಂಗೊಳ್ಳಿ ಘಟಕದ ಆಶ್ರಯದಲ್ಲಿ ನ್ಯಾಯ ಮತ್ತು ನೀತಿ ಆಯೋಗದ ಸಹಭಾಗಿತ್ವದಲ್ಲಿ, ನ್ಯಾಯ ಮತ್ತು ನೀತಿ ಆದಿತ್ಯವಾರದ ಅಂಗವಾಗಿ” ಭಾರತದ ಸಂವಿಧಾನದಲ್ಲಿ ಅಲ್ಪಸಂಖ್ಯಾತರಿಗಿರುವ ಹಕ್ಕುಗಳು ” ಎನ್ನುವ ವಿಷಯದಲ್ಲಿ ಕಾನೂನು ಮಾಹಿತಿ ಕಾರ್ಯಕ್ರಮವನ್ನು ಆಗಸ್ಟ್ 17, 2025 ರಂದು ಗಂಗೊಳ್ಳಿ ಕೊಸೆಸಾಂವ್ ಮಾತೆಯ ಚರ್ಚ್ ನಲ್ಲಿ ಜರುಗಿತು.
ಪ್ರಖ್ಯಾತ ವಕೀಲರಾದ ಶ್ರೀಮತಿ ಅಶ್ವಿನಿ ಡಿಸೋಜರವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ , ಭಾರತದ ಸಂವಿಧಾನ ಹಾಗೂ ಅದರಲ್ಲಿ ಅಲ್ಪಸಂಖ್ಯಾತರಿಗಿರುವ ಕಾನೂನುಗಳು ಮತ್ತು ಹಕ್ಕುಗಳು ಎನ್ನುವ ವಿಷಯದ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ನೀಡಿದರು.
ಕಥೊಲಿಕ್ ಸಭಾ ಉಡುಪಿ ಪ್ರದೇಶ್(ರಿ) ಗಂಗೊಳ್ಳಿ ಘಟಕದ ಅಧ್ಯಕ್ಷರಾದ ಶ್ರೀ ಎಡ್ವರ್ಡ್ ಫರ್ನಾಂಡಿಸ್ ರವರು ಅಧ್ಯಕ್ಷತೆ ವಹಿಸಿದಂತಹ ಕಾರ್ಯಕ್ರಮದಲ್ಲಿ , ಗಂಗೊಳ್ಳಿ ಕೊಸೆಸಾಂವ್ ಮಾತೆ ಚರ್ಚಿನ ಧಮ೯ ಗುರುಗಳಾದ ವಂದನೀಯ ತೋಮಸ್ ರೋಶನ್ ಡಿಸೋಜರವರು ಸ್ವಾಗತಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ವಕೀಲೆ ಶ್ರೀಮತಿ ಅಶ್ವಿನಿ ಡಿಸೋಜರವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ಶ್ರೀಮತಿ ಜೆನ್ನಿ ಬುತ್ತೆಲ್ಲೊರವರು ಸಂಪನ್ಮೂಲ ವ್ಯಕ್ತಿಗಳ ಪರಿಚಯವನ್ನು ನೀಡಿದರು. ಚರ್ಚಿನ ನ್ಯಾಯ ಮತ್ತು ನೀತಿ ಆಯೋಗದ ಸಂಚಾಲಕರಾದ ಶ್ರೀಮತಿ ರೆನಿಟಾ ಬಾರ್ನೆಸ್ ವಂದಿಸಿದರು. ಕಥೊಲಿಕ್ ಸಭಾ ಗಂಗೊಳ್ಳಿ ಘಟಕದ ನಿಕಟಪೂರ್ವ ಅಧ್ಯಕ್ಷರಾದ ಶ್ರೀಮತಿ ಸೆಲಿನ್ ಲೋಬೊ, ಕಾರ್ಯದರ್ಶಿಗಳಾದ ಶ್ರೀ ಸೈಮನ್ ಡಿಸೋಜ ಉಪಸ್ಥಿತರಿದ್ದರು.











