

ಕುಂದಾಪುರ, ಜೂ.23; ರಂದು ತಲ್ಲೂರು ಸಂತ ಫ್ರಾನ್ಸಿಸ್ ಆಸ್ಸಿಸಿ ಚರ್ಚಿನಲ್ಲಿ ಶ್ರೀ ಸಾಮಾನ್ಯ ಆಯೋಗ ಹಾಗೂ ಕಥೋಲಿಕ್ ಸಭಾ ತಲ್ಲೂರು ಘಟಕ ಇದರ ಜಂಟಿ ಆಶ್ರಯದಲ್ಲಿ 22/06/2025 ರಂದು ಶ್ರೀ ಸಾಮಾನ್ಯರ ಮಹೋತ್ಸವನ್ನು ಆಚರಿಸಲಾಯಿತು.
ಅಂದು ಶ್ರೀ ಸಾಮಾನ್ಯರಿಗಾಗಿ ದಿವ್ಯ ಬಲಿಪೂಜೆಯನ್ನು, ಮೂಲತಃ ದುಬೈಯಲ್ಲಿ ಧಾರ್ಮಿಕ ಸೇವೆಯನ್ನು ನೀಡುತ್ತಿರುವ ವಂದನೀಯ ಫಾ. ವಿಕ್ಟರ್ ಫೆರ್ನಾಂಡಿಸ್, ಪ್ರಧಾನ ಗುರುಗಳಾಗಿ ಆಗಮಿಸಿ ಬಲಿಪೂಜೆಯನ್ನು ನೆರವೇರಿಸಿ ಶ್ರೀ ಸಾಮಾನ್ಯರಿಗಾಗಿ ಪ್ರಾರ್ಥಿಸಿದರು.
ಲಘು ಉಪಹಾರದ ನಂತರ ಚರ್ಚಿನ ಸಭಾಂಗಣದಲ್ಲಿ ಉದ್ಯಮಿಗಳಿಗೆ ಹಾಗೂ ಸ್ವಂತ ಉದ್ದಿಮೆ ಮಾಡುವ ಶ್ರೀಸಾಮಾನ್ಯರಿಗೆ ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮುಖ್ಯ ಅಥಿತಿಗಳಾಗಿ, ವಂದನೀಯ ಫಾ. ವಿಕ್ಟರ್ ಫೆರ್ನಾಂಡಿಸ್ ಮಾತನಾಡಿ, ಕ್ರೈಸ್ತರು ಸಮಾಜದಲ್ಲಿ ಒಬ್ಬರಿಗೊಬ್ಬರು ಸ್ಪಂದಿಸಿ, ಸಹಾಯ ಮಾಡಿ ವ್ಯವಹಾರದಲ್ಲಿ ಉನ್ನತ ಮಟ್ಟಕ್ಕೇರಬೇಕು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ, ಕುಂದಾಪುರ ರೋಜರಿ ಕ್ರೆಡಿಟ್ ಸೊಸೈಟಿಯ ಪ್ರಸ್ತುತ ಅಧ್ಯಕ್ಷರು ಹಾಗೂ ಕುಂದಾಪುರ ಕಥೋಲಿಕ್ ಸಭೆಯ ಸದಸ್ಯರಾದ ಜಾನ್ಸನ್ ಅಲ್ಮೆಡ ಹಾಜರಿದ್ದು, ಮೊದಲು ನಮ್ಮ ಕುಟುಂಬ, ತದನಂತರ ಉದ್ಯಮ ಜೊತೆಗೆ ಸಮಾಜ ಸೇವೆ ಹಾಗೂ ರಾಜಕೀಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಹೇಳಿದರು.
ಚರ್ಚಿನ ಧರ್ಮ ಗುರುಗಳಾದ ವಂದನೀಯ ಫಾ. ಎಡ್ವಿನ್ ಡಿಸೋಜಾರವರು ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಗಳನ್ನು ಸನ್ಮಾನಿಸಿ ಗೌರವಿಸಿದರು. ಎಲ್ಲಾ ಉದ್ಯಮಿ, ಸ್ವ ಉದ್ಯಮಿಗಳನ್ನು ಗಿಡ ನೀಡುವ ಮೂಲಕ ಗೌರವಿಸಲಾಯಿತು.ಒಟ್ಟು 75 ಮಂದಿ ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷರು, ಕಾರ್ಯದರ್ಶಿಗಳು, 20 ಆಯೋಗದ ಸಂಚಾಲಕರು, ಶ್ರೀಸಾಮಾನ್ಯ ಆಯೋಗ ಹಾಗೂ ಕಥೋಲಿಕ್ ಸಭೆಯ ಸದಸ್ಯರು ಹಾಜರಿದ್ದರು. ಕಥೋಲಿಕ್ ಸಭಾ ತಲ್ಲೂರು ಘಟಕದ ಸದಸ್ಯರಾದ ಗ್ರೇವಿನ್ ಪಸನ್ನ ಸ್ವಾಗತಿಸಿದರು. ಅಧ್ಯಕ್ಷರಾದ ಅನಿಲ್ ಡಿಸಿಲ್ವ ಕಾರ್ಯಕ್ರಮ ನಿರೂಪಿಸಿದರು.





















