

ಕುಂದಾಪುರ; ಜ.19; ಕುಂದಾಪುರ; ಸಿ.ಎಸ್. ಐ. ಕ್ರಪಾ ಚರ್ಚಿನಲ್ಲಿ ವಲಯ ಮಟ್ಟದ ಕ್ರೈಸ್ತ ಐಕ್ಯತ ಪ್ರಾರ್ಥನಾ ಕೂಟ ಜನವರಿ 18 ರಂದು ನಡೆಯಿತು.
ಈ ಪ್ರಾರ್ಥನ ಕೂಟದಲ್ಲಿ, ರೋಮನ್ ಕ್ಯಾಥೊಲಿಕ್, ಸಿ.ಎಸ್. ಐ. ಮಲಬಾರ್ ವಿಧಿ, ಹೀಗೆ ವಿವಿಧ ಪಂಗಡದ ಕ್ರೈಸ್ತರೆಲ್ಲರು ಸೇರಿ ಈ ಪ್ರಾರ್ಥನ ಕೂಟ ನೆಡೆಸಲಾಯಿತು ಇದರ ಮುಂದಾಳತ್ವವನ್ನು ಸಿ.ಎಸ್. ಐ. ಕ್ರಪಾ ಚರ್ಚಿನ ಧರ್ಮಗುರು ವಂ।ಇಮಾನ್ಯುವೆಲ್ ಜಯಕರ್ ವಹಿಸಿಕೊಂಡಿದ್ದು ಉಡುಪಿ ಧರ್ಮಪ್ರಾಂತ್ಯದ ಹಿರಿಯ ಚರ್ಚ್ ಆದ ಭಾಗ್ಯವಂತೆ ರೋಜರಿ ಮಾತಾ ಚರ್ಚಿನ, ಹಾಗೇ ಕುಂದಾಪುರ ವಲಯದ ಪ್ರಧಾನ ಧರ್ಮಗುರು ಅ।ವಂ।ಪೌಲ್ ರೇಗೊ ಅತಿಥಿ ಧರ್ಮಗುರುಗಳ ಜೊತೆ ದೀಪ ಬೆಳಗಿಸಿ ಪ್ರಾರ್ಥನ ಕೂಟಕ್ಕೆ ಚಾಲನೆ ನೀಡಿದರು.
ಪ್ರಾರ್ಥನ ಕೂಟದಲ್ಲಿ ಭಜನೆ, ಕೀರ್ತನೆ, ಭರ್ವಸೆಯ ಪ್ರಾರ್ಥನೆಗಳು, ಮಧ್ಯಸ್ತಿಕೆಯ ಪ್ರಾರ್ಥನೆಗಳು ಪವಿತ್ರ ಗ್ರಂಥದ ವಾಚನ, ಶುಭ ಸಂದೇಶದ ವಾಚನ,ಪ್ರವಚನ ಈ ಪ್ರಾರ್ಥನ ಕೂಟದ ಭಾಗಗಳಾಗಿದ್ದವು. ಮಲ್ಪೆಯ ಸಿ.ಎಸ್. ಐ. ಎಬ್ನೆಜರ್ ಚರ್ಚಿನ ಧರ್ಮಗುರು ವಂ।ವಿನಯ್ ಸಂದೇಶ್ ‘ಯೇಸು ಕ್ರಿಸ್ತರನ್ನು ನಾವು ಬೆಳಕಿಗೆ ಹೋಲಿಸಬಹುದು, ಎಲ್ಲಾ ಧರ್ಮಗಳಲ್ಲಿ ಬೆಳಕಿಗೆ ಪ್ರಾಶಸ್ತ ಇದೆ. ಪ್ರಥ್ವಿ ಕತ್ತಲಲ್ಲಿ ಇತ್ತು, ದೇವರು ಪ್ರಥಮವಾಗಿ ಪ್ರಥ್ವಿಗೆ ಬೆಳಕನ್ನು ನೀಡಿದರು. ಯೇಸು ಕ್ರಿಸ್ತರು ನಮ್ಮ ಜೀವನಕ್ಕೆ ಬೆಳಕು, ಅಧ್ಯಾತ್ಮಿಕತೆಯ ಬೆಳಕು ಅವರಾಗಿದ್ದಾರೆ, ನಮ್ಮಲ್ಲಿನ ಅಧ್ಯಾತ್ಮಿಕತೆಯ ಬೆಳಕು ಆರದಿರಲಿ, ಆ ಬೆಳಕಿನಿಂದ ನಮಗೆ ಸ್ವರ್ಗ ಸಿಗುವಂತೆ ಬಾಳೋಣ” ಎಂದು ಪ್ರವಚನ ನೀಡಿದರು.
ವಂ।ಇಮಾನ್ಯುವೇಲ್ ಜಯಕರ್ ‘ ಸ್ವಾಗತಿಸಿ ವಂದಿಸಿದರು ಈ ಪ್ರಾರ್ಥನ ಕೂಟದಲ್ಲಿ ಪಡುಕೋಣೆ ಚರ್ಚಿನ ಧರ್ಮಗುರು ವಂ।ಫ್ರಾನ್ಸಿಸ್ ಕರ್ನೇಲಿಯೊ, ತಲ್ಲೂರು ಚರ್ಚಿನ ಧರ್ಮಗುರು ವಂ।ಎಡ್ವಿನ್ ಡಿಸೋಜಾ, ಪಿಯುಸ್ ನಗರ ಚರ್ಚಿನ ಧರ್ಮಗುರು ವಂ।ಆಲ್ಬರ್ಟ್ ಕ್ರಾಸ್ತಾ, ಗಂಗೊಳ್ಳಿ ಚರ್ಚಿನ ಧರ್ಮಗುರು ವಂ।ತೋಮಸ್ ರೋಶನ್ ಡಿಸೋಜಾ, ಬೆಳ್ವೆ ಚರ್ಚಿನ ಧರ್ಮಗುರು ವಂ। ಅನಿಲ್ ಕರ್ನೇಲಿಯೊ ರೋಮನ್ ಇವರೆಲ್ಲಾ ಭಾಗವಹಿಸಿ ಪ್ರಾರ್ಥನೆಗಳನ್ನು ನಡೆಸಿಕೊಟ್ಟರು. ವಿವಿಧ ಕಾನ್ವೆಂಟಿನ ಧರ್ಮಭಗಿನಿಯರು, ಹಲವಾರು ಚರ್ಚುಗಳ ಭಕ್ತರು ಹಾಜರಿದ್ದರು
ಕುಂದಾಪುರ ಭಾಗ್ಯವಂತೆ ರೋಜರಿ ಮಾತಾ ಚರ್ಚ್ ಗಾಯನ ಪಂಗಡ, ಸಿ.ಎಸ್. ಐ. ಕ್ರಪಾ ಚರ್ಚಿನ ಗಾಯನ ಪಂಗಡ ಭಕ್ತಿ ಗೀತೆಗಳನ್ನು ಹಾಡಿ ಸಹಕರಿಸಿದರು. ಅ।ವಂ।ಪೌಲ್ ರೇಗೊ ಪ್ರಾರ್ಥನ ಕೂಟವನ್ನು ಚೆಂದವಾಗಿ ಎರ್ಪಡಿಸಿದಕ್ಕೆ ಹರುಷ ವ್ಯಕ್ತ ಪಡಿಸಿದರು.









































