

ಕುಂದಾಪುರ, ಅ.5; ಉಡುಪಿ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕುಂದಾಪುರ ವಲಯದ ಆಶ್ರಯದಲ್ಲಿ ಕುಂದಾಪುರ ರೋಟರಿ ಕ್ಲಬ್ ರಿವರ್ಸೈಡ್ ಇವರ ಮತ್ತು ಇತರ ದಾನಿಗಳ ಸಹಕಾರದಲ್ಲಿ ಕುಂದಾಪುರ ಸಂತ ಜೋಸೆಫ್ ಪ್ರೌಢಶಾಲೆಯ ಪೋಷಕತ್ವದಲ್ಲಿ ಶಾಲೆಯಲ್ಲಿ ಕುಂದಾಪುರ ವಲಯ ಮಟ್ಟದ 14 ಮತ್ತು 17 ರ ವಯೋಮಾನದ ಬಾಲಕ ಮತ್ತು ಬಾಲಕಿಯರ ಕುಸ್ತಿ ಪಂದ್ಯಾಟ ನಡೆಯಿತು.
ಇದರ ಉದ್ಘಾಟನೆಯನ್ನು ಮುಖ್ಯ ಪೋಷಕರಾದ ಕುಂದಾಪುರ ರೋಟರಿ ಕ್ಲಬ್ ರಿವರ್ಸೈಡ್ ಇದರ ಅಧ್ಯಕ್ಷರಾದ ಸದಾನಂದ ಉಡುಪ ದೀಪ ಬೆಳಗಿಸಿ ಚಾಲನೇಯನ್ನು ನೀಡಿದರು. ‘ಕುಸ್ತಿ ಪಂದ್ಯಾಟ ಬಹಳ ಹಳೆ ಕಾಲದ ಕ್ರೀಡೆ, ದೈಹಿಕವಾಗಿ ಸುದ್ರಢ ಗೊಳ್ಳಲು ಕ್ರೀಡೆ ಬೇಕು, ಸುಧ್ರಡಗೊಳ್ಳಲು ಕುಸ್ತಿ ತುಂಬ ಸಹಕರಿಸುತ್ತದೆ. ಸ್ಪರ್ಧಾಳುಗಳು, ಬುದ್ದಿ, ಚಾಣಕ್ಯತೆ ಮತ್ತು ಶಕ್ತಿ ಉಪಯೋಗಿಸಿ ಕುಸ್ತಿ ಆಡಿ ಜಯಿಸಬೇಕು. ಎಲ್ಲಾ ಸ್ಫರ್ಧಿಕರಿಗೂ ಒಳ್ಳೆದಾಗಲಿ ಎಂದು ಶುಭ ಕೋರಿದರು.
ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಕುಸುಮಾಕರ್ ಶೆಟ್ಟಿ ಕುಸ್ತಿ ಕ್ರೀಡೆಯ ಪ್ರಾಮುಖ್ಯತೆ ಮತ್ತು ಅಗತ್ಯತೆ ಇಂದಿನ ದಿನದಲ್ಲಿ ಎಷ್ಟು ಇದೆ ಎಂದು ತಿಳಿಸಿದರು. ಅಥಿತಿಯಾಗಿ ಆಗಮಿಸಿದ ನಗರ ಯೋಜನಾ ಅಧಿಕಾರಿ ವಿನೋದ್ ಕ್ರಾಸ್ಟೊ ಧರ್ಮಭಗಿನಿಯರು ಯಾವ ಕೆಲಸವನ್ನು ನೀಡಿದರೂ ಜವಾಬ್ದಾರಿಯುತವಾಗಿ ನಿರ್ವಹಿಸುತ್ತಾರೆ ಎಂದು ಪಂದ್ಯಾಟಕ್ಕೆ ಶುಭ ಕೋರಿದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶ ಸತ್ಯನಾರಾಯಣ ಇವರು ಪ್ರಾಸ್ತಾವಿಕ ನುಡಿಗಳನ್ನು ಆಡಿ ಶುಭ ಕೋರಿದರು ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಕುಂದಾಪುರ ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಉದಯ ಮಡಿವಾಳ, ತಾಲ್ಲೂಕು ಸಮಗ್ರ ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷರಾದ ಬಾಲಕ್ರಷ್ಣ ಶೆಟ್ಟಿ, ತಾಲ್ಲೂಕು ಸಮಗ್ರ ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷರಾದ ಬಾಲಕ್ರಷ್ಣ ಶೆಟ್ಟಿ, ಕುಂದಾಪುರ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಉಮ್ಮೆ ಸಲ್ಮಾ, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ಸಮೂಹ ಸಂಪನ್ಮೂಲ ಸಮನ್ವಯ, ಅಧಿಕಾರಿಯಾದ ಅಶೋಕ್ ಇವರು ಶುಭ ಹಾರೈಸಿದರು
ಸಂತ ಜೋಸೆಫ್ ಪ್ರೌಢ ಶಾಲೆಯ ಜಂಟಿ ಕಾರ್ಯದರ್ಶಿ ಭಗಿನಿ ಸುಪ್ರಿಯಾ ಕಾರ್ಯಕ್ರಮದ ಅಧ್ಯಕ್ಶೀಯ ಭಾಷಣದಲ್ಲಿ “ಕ್ರೀಡೆಯಿಂದ ನಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು, ಕುಸ್ತಿ ಪಂದ್ಯಾಟ ನಮ್ಮ ಶಾಲೆಯಲ್ಲಿ ನಡೆಯುವುದು ಬಹಳ ಸಂತೋಷದ ವಿಷಯ. ಅದರಲ್ಲೂ ಇಂದು ಬಾಲಕೀಯರೂ ಕೂಡ ಕುಸ್ತಿ ಆಡುತ್ತಾರೆ, ಈ ಪಂದ್ಯಾಟಕ್ಕೆ ಹಲವರ ಸಹಕಾರವಿದೆ’ ಎಂದು ಕ್ರತಜ್ಞತೆಯನ್ನು ಸಲ್ಲಿಸಿದರು. ಕಾರ್ಯಕ್ರಮಕ್ಕೆ ಸಂತ ಜೋಸೆಫ್ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಭಗಿನಿ ಐವಿ ಸ್ವಾಗತಿಸಿದರು. ಪಂದ್ಯಾಟಕ್ಕೆ ದಾನ ನೀಡಿ ಸಹಕರಿಸಿದ ದಾನಿಗಳಿಗೆ ಪುಷ್ಪಗಳನ್ನು ನೀಡಿ ಗೌರವಿಸಲಾಯಿತು
ವೇದಿಕೆಯಲ್ಲಿ ಕುಂದಾಪುರ ಪುರಸಭೆ ಸದಸ್ಯೆ ಶ್ವೇತಾ ಸಂತೋಷ್, ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಸ್ಥೆಯಾದ ಭಗಿನಿ ಪ್ರೇಮಿಕಾ. ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷರಾದ ರವಿಚಂದ್ರ, ಸಾಹಿತಿ ಪತ್ರಕರ್ತ ಬರ್ನಾಡ್ ಡಿ’ಕೋಸ್ತಾ ರೋ. ರೊನಾಲ್ಡ್ ಡಿಮೆಲ್ಲೊ, ರೋ.ರಾಜು ಪೂಜಾರಿ, ಮತ್ತಿತರರು ಉಪಸ್ಥಿತರಿದ್ದರು.
ಸಭಾಕಾರ್ಯಕ್ರಮದ ನಂತರ ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲಾ ಸಭಾಭವನದಲ್ಲಿ ನಡೆದ ಕುಸ್ತಿ ಪಂದ್ಯಾಟಗಳು ನಡೆದವು. ಕುಂದಾಪುರ ವಲಯದ ಮಟ್ಟದಲ್ಲಿ ನಡೆದ ಪಂದ್ಯಾಟದಲ್ಲಿ 8 ಶಾಲೆಯಿಂದ 200 ವಿದ್ಯಾರ್ಥಿಗಳು ಭಾಗವಹಿಸಿದ್ದರು. ೧೪ ವರ್ಷದ ವಯೋಮಾನದ ಬಾಲಕರಿಗಾಗಿ, 35 ಕೆ.ಜಿ. ಯಿಂದ 75 ಕೆ.ಜಿ. ವರೆಗೆ 10 ಪಂದ್ಯಗಳು, 14 ವರ್ಷದ ವಯೋಮಾನದ ಬಾಲಕಿಯರಿಗಾಗಿ, 30 ಕೆ.ಜಿ. ಯಿಂದ 62 ಕೆ.ಜಿ. ವರೆಗೆ 10 ಪಂದ್ಯಗಳು, ಹಾಗೇಯೆ 17 ವರ್ಷದ ವಯೋಮಾನದ ಬಾಲಕರಿಗಾಗಿ, 41 ಕೆ.ಜಿ. ಯಿಂದ 110 ಕೆ.ಜಿ. ವರೆಗೆ 10 ಪಂದ್ಯಗಳು, 17 ವರ್ಷದ ವಯೋಮಾನದ ಬಾಲಕಿಯರಿಗಾಗಿ, 36 ಕೆ.ಜಿ. ಯಿಂದ 73 ಕೆ.ಜಿ. ವರೆಗೆ 10 ಪಂದ್ಯಗಳು,ಒಟ್ಟಾರೆಯಾಗಿ 40 ಪಂದ್ಯಗಳು ನಡೆದವು. ಈ ಕುತೂಹಲ ಭರಿತ, ರೋಚಕ ಕುಸ್ತಿ ಪಂದ್ಯಾಟಗಳು ನಡೆಯಲು ವಲಯದ ಹಲವಾರು ದೈಹಿಕ ಶಿಕ್ಷಕರು ಸಹಕರಿಸಿದರು. ಕಾರ್ಯಕ್ರಮಕ್ಕೆ ಸಂತ ಜೋಸೆಫ್ ಪ್ರೌಢ ಶಾಲೆಯ ಶಿಕ್ಷಕ ಅಶೋಕ ದೇವಾಡಿಗ ಸಹಕರಿಸಿದರು ದೈಹಿಕ ಶಿಕ್ಷಕರಾದ ಮೈಕಲ್ ಪುಟಾರ್ಡೊ ನಿರೂಪಿಸಿ, ವಂದಿಸಿದರು.
































































































