

ಕುಂದಾಪುರ: ವಜ್ರ ಮಹೋತ್ಸವದ ಸಂಭ್ರಮದಲ್ಲಿ ಇರುವ ಕುಂದಾಪುರ ಹೃದಯ ಭಾಗದ ಪ್ರತಿಷ್ಠಿತ ವಿದ್ಯಾಸಂಸ್ಥೆ ಸೈಂಟ್ ಮೇರಿಸ್ ಪ್ರೌಢಶಾಲೆಗೆ ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಬಂದಿದೆ.ಪರೀಕ್ಷೆ ಬರೆದ 29 ವಿದ್ಯಾರ್ಥಿಗಳಲ್ಲಿ 4 ಮಂದಿ ಉನ್ನತ ಶ್ರೇಣಿಯ ಜೊತೆಗೆ 19 ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.ಶಾಲೆಯ ಫಲಿತಾಂಶದ ಗುಣಮಟ್ಟ ಎ ಶ್ರೇಣಿ ಹೊಂದಿದ್ದು, ಶಾಲೆಗೆ ಶ್ರೇಯಸ್ 566 ಅಂಕದೊಂದಿಗೆ ಪ್ರಥಮ ಸ್ಥಾನ, ವೈಷ್ಣವಿ 559 ಅಂಕ ಪಡೆದು ದ್ವಿತೀಯ ಹಾಗೂ ಸಾನ್ವಿ 550 ಅಂಕದೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ.ಶೇ.100ಫಲಿತಾಂಶಕ್ಕೆ ಕಾರಣರಾದ ವಿದ್ಯಾರ್ಥಿಗಳನ್ನು ಶಾಲಾ ಜಂಟಿ ಕಾರ್ಯದರ್ಶಿ ಹಾಗೂ ಕುಂದಾಪುರ ರೋಜರಿ ಮಾತಾ ಚರ್ಚಿನ ಪ್ರಧಾನ ಧರ್ಮಗುರು ಅತೀ ವಂ.ಫಾ.ಫೌಲ್ ರೇಗೋ,ಮುಖ್ಯ ಶಿಕ್ಷಕಿ ಅಂಸುತಾ ಲೋಬೋ ಹಾಗೂ ಶಿಕ್ಷಕ ವೃಂದ,ಆಡಳಿತ ಮಂಡಳಿಯ ಸದಸ್ಯರು, ಹಳೆ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.




