

ಕುಂದಾಪುರ, ದಿನಾಂಕ : 14-08-2026ರಂದು ಹೋಲಿ ರೋಸರಿ ಆಂಗ್ಲ ಮಾಧ್ಯಮ ಶಾಲೆ ವತಿಯಿಂದ 80ನೇ ಸ್ವಾತಂತ್ರೋತ್ಸವದ ಅಂಗವಾಗಿ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೋಲಿ ರೋಸರಿ ಆಂಗ್ಲ ಮಾದ್ಯಮ ಶಾಲೆ ಮತ್ತು ಸೈಂಟ್ ಮೇರೀಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿರುವ ಧರ್ಮಗುರು ವಂ. ರೋಲ್ವಿನ್ ಫೆರ್ನಾಂಡೀಸ್ ರವರು ಅಧ್ಯಕ್ಷೀಯ ಸ್ಥಾನವನ್ನು ವಹಿಸಿಕೊಂಡು ‘ನಮ್ಮ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳ ಸಂಕೇತವಾಗಿದ್ದು, ಅದನ್ನು ನಾವು ಉತ್ತಮ ರೀತಿಯಲ್ಲಿ ಅನುಭವಿಸಿ ಇತರರಿಗೆ ಅನುಭವಿಸುವಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು. AI-ತಂತ್ರಜ್ಞಾನದ ಅಭಿವೃದ್ಧಿಯಿಂದ ನಾಳೆ ನಡೆಯುವ ಪ್ರಧಾನಿಯವರ ಭಾಷಣವನ್ನು ನಾವು ಬೇರೆ ಬೇರೆ ಭಾಷೆಗಳಲ್ಲಿ ಕೇಳಲು ಸಾಧ್ಯವಾಗಿರುತ್ತದೆ. ಯುವ ವಿಕಸಿತ ಭಾರತದಿಂದ ಮುಂದಿನ ದಿನಗಳಲ್ಲಿ ಭಾರತವು ಹಲವು ಮೈಲಿಗಲ್ಲುಗಳನ್ನು ತಲುಪುವಲ್ಲಿ ಯಶಸ್ವಿಯಾಗುತ್ತದೆ ಹಾಗೂ “ವಂದೇ ಮಾತರಂ” ಈ ರಾಷ್ಟ್ರೀಯ ಗೀತೆಯು ನಾಳೆಯ ದಿನಕ್ಕೆ 150 ವರ್ಷಗಳನ್ನು ಪೂರೈಸಲಿದೆ’ ಎಂದು 80ನೇ ಸ್ವಾತಂತ್ರೋತ್ಸವದ ಮಹತ್ವವನ್ನುತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಭೋಧಕ-ಬೋಧಕೇತರ ವೃಂದದವರು ಉಪಸ್ಥಿತರಿದ್ದು, ಶಾಲಾ ವಿದ್ಯಾರ್ಥಿಗಳಿಂದ ಸ್ವಾತಂತ್ರೋತ್ಸವದ ಕುರಿತಾದ ವಿವಿಧ ರೀತಿಯ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ವಿದ್ಯಾರ್ಥಿಗಳಾದ ಪ್ರನಾದ್ ಖಾರ್ವಿ ಇವರು ಸ್ವಾಗತಿಸಿದರು. ಜೇಷ್ಠ ಪೂಜಾರಿ ಧನ್ಯವಾದ ಸಮರ್ಪಿಸಿದರು. ವಿಲ್ಶಾ ಅಲ್ಮೇಡಾ ಕಾರ್ಯಕ್ರಮ ನಿರೂಪಿಸಿದರು.









